Don't Miss!
- Sports
Women's IPL: ಬೆಂಗಳೂರು ತಂಡ ಖರೀದಿಸಿದ ಆರ್ಸಿಬಿ ಫ್ರಾಂಚೈಸಿ: 4669 ಕೋಟಿ ರುಪಾಯಿಗೆ 5 ತಂಡಗಳು ಹರಾಜು
- News
ಮೆಟ್ರೋದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ 'ನಾಗವಲ್ಲಿ': ವಿಡಿಯೋ
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Technology
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಸಾಗರ್ ಬಿಳಿ ಗೌಡ- ಸಿರಿ ರಾಜು ಮದುವೆಗೆ ಮುಹೂರ್ತ ಫಿಕ್ಸ್
ಕಳೆದ ಎರಡು ವರ್ಷದಿಂದ ಸಾಲು ಸಾಲು ಕಿರುತೆರೆ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವರು ಪ್ರೀತಿಸಿ ಮದುವೆಯಾಗಿದ್ದರೆ, ಇನ್ನೂ ಕೆಲವರು ಕುಟುಂಬದಲ್ಲಿ ನೋಡಿದವರನ್ನು ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ.
ಕಳೆದ ವರ್ಷ ಪ್ರೀತಿಸಿ ಎಂಗೇಜ್ಮೆಂಟ್ ಮಾಡಿಕೊಂಡ ಜೋಡಿಗಳು ಕೂಡ ಈ ವರ್ಷ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ಆದರೆ, ಮದುವೆಯ ದಿನಾಂಕಗಳನ್ನು ಬಹಿರಂಗಪಡಿಸಿಲ್ಲ.
Jothe
Jotheyali:
ಎಲ್ಲಾ
ಸತ್ಯ
ಗೊತ್ತಿದ್ದು
ತಪ್ಪು
ಮಾಡುತ್ತಿರುವ
ಅನು
ಸಿರಿಮನೆ
2023ರಲ್ಲಿ ಮೊದಲು ಸಪ್ತಪದಿ ತುಳಿಯಲಿರುವ ಕಿರುತೆರೆ ಜೋಡಿ ಒಂದು ಈಗ ತಮ್ಮ ಮದುವೆಯ ದಿನಾಂಕವನ್ನು ತಿಳಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಹಸೆಮಣೆ ಏರುತ್ತಿರುವ ಕನ್ನಡದ ಕಿರುತೆರೆ ಜೋಡಿಯ ಕಂಪ್ಲೀಟ್ ಮ್ಯಾರೇಜ್ ಕಹಾನಿ ನೋಡೋಣ ಬನ್ನಿ.

ಸಾಗರ್‌ಗೆ ಆಕ್ಟಿಂಗ್ ಎಂದರೆ ಇಷ್ಟ
ಕಿರುತೆರೆಯಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಬಣ್ಣ ಹಚ್ಚಿದ ಸಾಗರ್ ಬಿಳಿ ಗೌಡ ಅವರಿಗೆ 'ಸತ್ಯ' ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ. ಸಾಗರ್ ಬಿಳಿ ಗೌಡ ಅವರು ಕಾರ್ತಿಕ್ ಅಂದರೆ, ಅಮುಲ್ ಬೇಬಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಗರ್ ಬಿಳಿ ಗೌಡ ಅವರಿಗೆ ನಟಿಸುವುದು ಎಂದರೆ ತುಂಬಾನೇ ಇಷ್ಟ. ನಟನಾಗುವ ಆಸೆಯಿಂದ ವಿದೇಶದಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಇನ್ನು ಸಾಗರ್ ಅವರು ಲಂಡನ್‌ನಲ್ಲಿ ಎಂಬಿಎ ಓದಿ, ಭಾರತದಲ್ಲಿ ಮಾಸ್ಟರ್ ಇನ್ ಬಿಸಿನೆಸ್ ಲಾ ಮಾಡಿಕೊಂಡಿದ್ದಾರೆ. ಕಂಪನಿ ಕೆಲಸವನ್ನು ಬಿಟ್ಟು ಕಿರುತೆರೆಗೆ ಬಂದು ನಟನೆಯನ್ನೇ ವೃತ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ಕಾರ್ತಿಕ್ ಆಗಿ ಫೇಮಸ್
ವಿದೇಶದಲ್ಲಿ ಆರು ತಿಂಗಳ ಕಾಲ ಅಡ್ವಾನ್ಸ್ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ. ನಂತರ 'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಮನೆ ಕೆಲಸದವನ ಪಾತ್ರ ಮಾಡಿದ್ದರು. ಉದಯ ಟಿವಿಯಲ್ಲಿ ಮೂಡಿ ಬಂದ 'ಮನಸಾರೆ' ಧಾರಾವಾಹಿಯಲ್ಲಿ ನಟಿಸಿದರು. ಬಳಿಕ 'ಸತ್ಯ' ಧಾರಾವಾಹಿಯಲ್ಲಿ ನಾಯಕ ನಟನ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಸುಮಾರು ಎರಡು ವರ್ಷಗಳಿಂದ ಮೂಡಿ ಬರುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ಸಾಗರ್ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಪ್ರೀತಿಸಿ ಒಂದಾಗುತ್ತಿರುವ ಜೋಡಿ
ಇನ್ನು ಮಾಡೆಲ್ ಕಮ್ ಕಿರುತೆರೆ ನಟಿಯಾಗಿರುವ ಸಿರಿ ರಾಜು ಅವರು ಕೂಡ ಬಣ್ಣದ ಲೋಕದವರೇ. ಸ್ವಂತ ಬಿಸಿನೆಸ್ ಅನ್ನು ಕೂಡ ಹೊಂದಿರುವ ಸಿರಿ ರಾಜು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಅವರೊಂದಿಗೆ 'ಎಫ್ಐಆರ್ 6ಟು6' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ನಾಲ್ಕು ವರ್ಷಗಳ ಹಿಂದೆಯೇ 'ಇದಂ ಪ್ರೇಮಂ ಜೀವನಂ' ಎಂಬ ಸಿನಿಮಾದಲ್ಲೂ ನಟಿಸಿದ್ದರು. ಇನ್ನು ಕೆಲ ಧಾರಾವಾಹಿ ಹಾಗೂ ವೆಬ್ ಸೀರೀಸ್‌ಗಳಲ್ಲಿ ಸಿರಿ ರಾಜು ಅವರು ಆಕ್ಟಿಂಗ್ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಿರಿ ರಾಜು ಮತ್ತು ಸಾಗರ್ ಬಿಳಿ ಗೌಡ ಪ್ರೀತಿಸುತ್ತಿದ್ದರು.

2023ರ ಮೊದಲ ಕಿರುತೆರೆ ಜೋಡಿ
ಕಳೆದ ವರ್ಷ ಅಂದರೆ, ನವೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ಕೊಟ್ಟ ಈ ಜೋಡಿ, ಈ ವರ್ಷkannada.filmibeat.com/tv/jothe-jotheyali-serial-19th-january-episode-written-update-064927.html ಹಸೆಮಣೆ ಏರಲಿರುವ ಮೊದಲ ಕಿರುತೆರೆ ಜೋಡಿಯಾಗಲಿದ್ದಾರೆ. ಮುಂದಿನ ವಾರ ಸಾಗರ್ ಬಿಳಿಗೌಡ ಹಾಗೂ ಸಿರಿ ರಾಜು ಸಪ್ತಪದಿ ತುಳಿಯುತ್ತಿದ್ದಾರೆ. ಜನವರಿ 25 ರಂದು ರಿಸೆಪ್ಶನ್ ನಡೆಯುತ್ತಿದ್ದು, ಜನವರಿ 26ರಂದು ಅಂದರೆ ಗಣರಾಜ್ಯೋತ್ಸವದ ದಿನವೇ ಮದುವೆಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಮದುವೆ ನಡೆಯಲಿದ್ದು, ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.