»   » ಸಿಂಹದ ನಾನಾ ಅವತಾರ: ಭೈರವಗಿರಿ ಬಾಬಾ ಆದ ಸಾಧಾರಣ ವಿಲನ್

ಸಿಂಹದ ನಾನಾ ಅವತಾರ: ಭೈರವಗಿರಿ ಬಾಬಾ ಆದ ಸಾಧಾರಣ ವಿಲನ್

Posted By:
Subscribe to Filmibeat Kannada

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ಸಖತ್ ಫೇಮಸ್ ಆದ ನಟ ವಸಿಷ್ಟ ಎನ್ ಸಿಂಹ ಅವರು ಎಲ್ಲಾ ಪಾತ್ರಕ್ಕೂ ಸೈ ಎನಿಸಿಕೊಳ್ಳುತ್ತಾರೆ. ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅದೃಷ್ಟ ಕೈ ಕೊಡ್ತು. ಅದೇ ವಸಿಷ್ಟ ವಿಲನ್ ಆಗಿ ಎಂಟ್ರಿಯಾದಾಗ ಕೈ ಕೊಟ್ಟ ಅದೃಷ್ಟ ಮತ್ತೆ ಕೈ ಹಿಡಿಯಿತು.

'ರಾಜಾ ಹುಲಿ' ಚಿತ್ರದಲ್ಲಿ ಸಖತ್ ವಿಲನ್ ಗಿರಿ ತೋರಿದ್ದ ವಸಿಷ್ಟ ಅವರಿಗೆ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಿಂದ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಸದಾ ಹೊಸ-ಹೊಸ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಸಿಷ್ಟ ಎನ್ ಸಿಂಹ ಅವರು, ಇದೀಗ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.[ಸೂರಿ 'ಟಗರಿ'ಗೆ ಟಕ್ಕರ್ ನೀಡಲು ಬಂದ 'ಸಿಂಹ'!]

Actor Vasishta N Simha turns Bhairavagiri Baba for 'Girija Kalyana'

'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಿರಿಜಾ ಕಲ್ಯಾಣ' ಧಾರಾವಾಹಿಯಲ್ಲಿ ನಟ ವಸಿಷ್ಟ ಸಿಂಹ ಅವರು 'ಭೈರವ ಗಿರಿ ಬಾಬಾ' ಪಾತ್ರ ವಹಿಸಿದ್ದಾರೆ. ಈಗಾಗಲೇ ವೀಕ್ಷಕರ ಮೆಚ್ಚುಗೆ ಗಳಿಸಿ ಅತ್ಯುತ್ತಮವಾಗಿ ಪ್ರಸಾರವಾಗುತ್ತಿರುವ 'ಗಿರಿಜಾ ಕಲ್ಯಾಣ' ಧಾರಾವಾಹಿಗೆ ಈಗ ವಸಿಷ್ಟ ಅವರು ಕಾಲಿಟ್ಟಿದ್ದು, ಧಾರಾವಾಹಿ ತಂಡಕ್ಕೆ ಹಾಲು ಕುಡಿದಷ್ಟು ಸಂತಸವಾಗಿದೆ.[ಅವಕಾಶಗಳ ಬೆನ್ನೇರಿ ಸವಾರಿ ಆರಂಭಿಸಿದ ಕ್ಯೂಟ್ ವಿಲನ್ ವಸಿಷ್ಟ]

Actor Vasishta N Simha turns Bhairavagiri Baba for 'Girija Kalyana'

ಖ್ಯಾತ ನಟ ಕಮ್ ಗಾಯಕ ನವೀನ್ ಕೃಷ್ಣ ಅವರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ'ದಲ್ಲಿ, ಭರವಸೆಯ ನಟ ವಸಿಷ್ಟ ಅವರು ಗುಡ್ಡದ ಮೇಲಿನ ಬಾಬಾ ಪಾತ್ರ ವಹಿಸಿದ್ದಾರೆ.['ಬಾಹುಬಲಿ' ನಿರ್ಮಾಣ ಸಂಸ್ಥೆಯಿಂದ ಕನ್ನಡಿಗರಿಗೆ ಅದ್ಧೂರಿ ಧಾರಾವಾಹಿ]

Actor Vasishta N Simha turns Bhairavagiri Baba for 'Girija Kalyana'

'ಬಾಹುಬಲಿ' ಚಿತ್ರವನ್ನು ನಿರ್ಮಾಣ ಮಾಡಿದ್ದ ಅರ್ಕ ಮೀಡಿಯಾ ಸಂಸ್ಥೆ ಈ ಧಾರಾವಾಹಿಯನ್ನು ಕೂಡ ನಿರ್ಮಾಣ ಮಾಡಿದೆ. ವಸಿಷ್ಟ ಅವರು ಕಾಣಿಸಿಕೊಂಡಿರುವ ವಿಶಿಷ್ಟ ಎಪಿಸೋಡ್ ಇದೇ ವಾರದಲ್ಲಿ ಪ್ರಸಾರವಾಗಲಿದೆ. ವಸಿಷ್ಟ ಅವರ ವಿಭಿನ್ನ ಅವತಾರ ನೋಡಲು, ತಪ್ಪದೇ 'ಗಿರಿಜಾ ಕಲ್ಯಾಣ' ನೋಡಿ ನಿಮ್ಮ ನೆಚ್ಚಿನ ಕಲರ್ಸ್ ಸೂಪರ್ ನಲ್ಲಿ, ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ.

English summary
'Godhi Banna Sadharna Mykattu' fame Kannada Actor Vasishta N Simha has made his entry to small screen with a new teleserial called Girija Kalyana. The serial is directed by actor Naveen Krishna and produced by Arka Media who produced Bahubali in Telugu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada