»   » 'ವೀಕೆಂಡ್' ಸಾಧಕರ ಸೀಟಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ 'ಚಿನ್ನಾರಿ ಮುತ್ತ'

'ವೀಕೆಂಡ್' ಸಾಧಕರ ಸೀಟಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ 'ಚಿನ್ನಾರಿ ಮುತ್ತ'

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಈ ಶನಿವಾರ (ಮೇ 20) ಪ್ರೋ.ಕೃಷ್ಣೇಗೌಡರು ಅತಿಥಿಯಾಗಿ ಆಗಮಿಸಿದ್ದರು. ಆದ್ರೆ, ಭಾನುವಾರದ ಅತಿಥಿ ಯಾರು ಎಂದು ಇದುವರೆಗೂ ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಭಾನುವಾರದ ಅತಿಥಿ ಯಾರು ಎಂಬುದರ ಪ್ರೋಮೋ ಬಿಡುಗಡೆಯಾಗಿದ್ದು, ಭಾನುವಾರ ಸಾಧಕರ ಸೀಟಿನಲ್ಲಿ ಯಾರು ಕುಳಿತುಕೊಳ್ಳಲಿದ್ದಾರೆ ಎಂಬುದು ಬಹಿರಂಗವಾಗಿದೆ.

ಹೌದು, ಭಾನುವಾರದ (ಮೇ 21 ರಂದು) ಅತಿಥಿಯಾಗಿ 'ಚಿನ್ನಾರಿ ಮುತ್ತ' ಖ್ಯಾತಿಯ ನಟ ವಿಜಯ ರಾಘವೇಂದ್ರ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದ ಮೊದಲ ಪ್ರೋಮೋ ರಿಲೀಸ್ ಆಗಿದ್ದು, ವಿಜಯ ರಾಘವೇಂದ್ರ ಅವರ ಎಪಿಸೋಡ್ ಗೆ ಯಾರೆಲ್ಲಾ ಬಂದಿದ್ದರು ಎಂಬುದು ಕೂಡ ಗೊತ್ತಾಗಿದೆ.

Actor Vijay Raghavendra takes part in Weekend With Ramesh-3

ವಿಜಯ ರಾಘವೇಂದ್ರ ಅವರ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಅವರ ತಂದೆ-ತಾಯಿ, ಸಹೋದರಿ, ಪತ್ನಿ ಮತ್ತು ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಇಂದು (ಮೇ 21) ರಾತ್ರಿ 9 ಗಂಟೆಗೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ 'ವೀಕೆಂಡ್ ವಿತ್ ರಮೇಶ್-3' ಪ್ರಸಾರವಾಗಲಿದೆ.

Actor Vijay Raghavendra takes part in Weekend With Ramesh-3

ಅಂದ್ಹಾಗೆ, ಖ್ಯಾತ ನಿರ್ಮಾಪಕ ಎಸ್.ಎ. ಚಿನ್ನೆಗೌಡ ಅವರ ಪುತ್ರ ವಿಜಯ ರಾಘವೇಂದ್ರ. ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ವಿಜಯ ರಾಘವೇಂದ್ರ, ಡಾ.ರಾಜ್ ಕುಮಾರ್ ಅವರ 'ಚಲಿಸುವ ಮೋಡಗಳು' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ನಂತರ 'ಚಿನ್ನಾರಿ ಮುತ್ತ' ಚಿತ್ರದ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿ ಮತ್ತು 'ಕೊಟ್ರೇಶಿ ಕನಸು' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. 'ನೀನಗಾಗಿ' ಚಿತ್ರದ ಮೂಲಕ ನಾಯನ ನಟನಾಗಿ ಎಂಟ್ರಿ ಕೊಟ್ಟು ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. [ಪ್ರೋಮೋ ನೋಡಿ]

English summary
Kannada Actor Vijay Raghavendra takes part in Zee Kannada Channel's popular show Weekend With Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada