For Quick Alerts
  ALLOW NOTIFICATIONS  
  For Daily Alerts

  Tripura Sundari:'ಕುಲವಧು' ಧಾರಾವಾಹಿಯ ದಿಶಾ ಮದನ್ ಮಹಾರಾಣಿ ಉತ್ಕಲಾ ಅವತಾರದಲ್ಲಿ ಪ್ರತ್ಯಕ್ಷ!

  By ಅನಿತಾ ಬನಾರಿ
  |

  ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಡಾರ್ ಎಂದೇ ಜನಪ್ರಿಯತೆ ಪಡೆದುಕೊಂಡಿರುವ ಕಿರುತೆರೆ ನಟಿ ದಿಶಾ ಮದನ್ ವರುಷಗಳ ನಂತರ ಬಣ್ಣ ಹಚ್ಚುತ್ತಿದ್ದಾರೆ ಎಂಬ ಖುಷಿಯ ವಿಚಾರ ಹೊರಬಿದ್ದಿದೆ. ಆ ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಕಿರುತೆರೆ ಅಂಗಳಕ್ಕೆ ಕಾಲಿಡುತ್ತಿದ್ದಾರೆ ದಿಶಾ. ಆದರೆ ಬೇಸರದ ಸಂಗತಿಯೆಂದರೆ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅತಿಥಿ ಪಾತ್ರದ ಮೂಲಕ!

  ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಶುರುವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ತ್ರಿಪುರ ಸುಂದರಿ'ಯಲ್ಲಿ ಮಹಾರಾಣಿ ಉತ್ಕಲಾ ಆಗಿ ದಿಶಾ ಮದನ್ ಅಭಿನಯಿಸಲಿದ್ದಾರೆ. ನಾಯಕ, ಗಂಧರ್ವ ಲೋಕದ ರಾಜಕುಮಾರ ಪ್ರದ್ಯುಮ್ನನ ತಾಯಿಯ ಪಾತ್ರ ಇದಾಗಲಿದ್ದು, ದಿಶಾ ಮದನ್ ಅವರು ಅದೆಷ್ಟು ದಿನ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

  ರಿಯಾಲಿಟಿ ಶೋನಿಂದ ಕಿರುತೆರೆ ಪಯಣ

  ರಿಯಾಲಿಟಿ ಶೋನಿಂದ ಕಿರುತೆರೆ ಪಯಣ


  ಕಿರುತೆರೆ ಲೋಕದ ರಿಯಾಲಿಟಿ ಶೋಗಳ ಪೈಕಿ ಒಂದಾಗಿರುವ ಡ್ಯಾನ್ಸಿಂಗ್ ಸ್ಟಾರ್ ನ ಮೊದಲ ಸೀಸನ್ ನ ಸ್ಪರ್ಧಿಯಾಗಿ ಕಿರು ಪರದೆ ಮೇಲೆ ಕಾಣಿಸಿಕೊಂಡ ಈಕೆ ಸುನಾಮಿ ಕಿಟ್ಟಿಯ ಜೋಡಿಯಾಗಿದ್ದರು. ಮೊದಲ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ ದಿಶಾ ಮದನ್ ನಂತರ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡರು.

  'ಕುಲವಧು' ವಚನಾ ಆಗಿ ನಟನಾ ಪಯಣ

  'ಕುಲವಧು' ವಚನಾ ಆಗಿ ನಟನಾ ಪಯಣ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ಅಭಿನಯಿಸಿದ್ದ ದಿಶಾ ಮದನ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ತದ ನಂತರ ವೈಯಕ್ತಿಕ ಕಾರಣದಿಂದ ಅವರು ಧಾರಾವಾಹಿಯಿಂದ ಹೊರಬಂದಿದ್ದರೂ, ಅವರ ನಟನೆ, ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿತ್ತು.

  ಮ್ಯೂಸಿಕಲ್ ಆ್ಯಪ್‌ನಲ್ಲಿ ಫಾಲೋವರ್ಸ್

  ಮ್ಯೂಸಿಕಲ್ ಆ್ಯಪ್‌ನಲ್ಲಿ ಫಾಲೋವರ್ಸ್

  ನಟನೆಯ ಹೊರತಾಗಿ ಡಬ್ ಸ್ಮಾಶ್, ರೀಲ್ಸ್, ಮ್ಯೂಸಿಕಲಿ ಮುಂತಾದ ಆ್ಯಪ್ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ ದಿಶಾ, ಮ್ಯೂಸಿಕಲ್ ಆ್ಯಪ್‌ನಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

  ವೆಬ್ ಸಿರೀಸ್‌ನಲ್ಲೂ ದಿಶಾ ನಟನೆ

  ವೆಬ್ ಸಿರೀಸ್‌ನಲ್ಲೂ ದಿಶಾ ನಟನೆ

  ಶಿವರಾಜ್ ಕುಮಾರ್ ಮಗಳು ನಿವೇದಿತಾ ಅವರ ಶ್ರೀಮುತ್ತು ಸಿನಿ ಸರ್ವೀಸಸ್ ಹಾಗೂ ಸಕ್ಕತ್ ಸ್ಟುಡಿಯೋ ನಿರ್ಮಾಣದಲ್ಲಿ ಮೂಡಿ ಬರಲಿರುವ "ಹೇಟ್ ಯೂ ರೋಮಿಯೋ" ಎನ್ನುವ ವೆಬ್ ಸಿರೀಸ್ ನಲ್ಲಿ ಚಾರ್ವಿ ಆಗಿ ಕಾಣಿಸಿಕೊಂಡಿದ್ದಾರೆ ದಿಶಾ ಮದನ್. ಇದರ ಜೊತೆಗೆ ಹಂಬಲ್ ಪೊಲಿಟಿಶಿಯನ್ ನೊಗ್ ರಾಜ್ ಎನ್ನುವ ವೆಬ್ ಸಿರೀಸ್ ನಲ್ಲೂ ಈಕೆ ಅಭಿನಯಿಸಿದ್ದು ಇದರಲ್ಲಿ ಸಿಮ್ಮಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

  'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ನಟನೆ

  'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ ನಟನೆ

  ಇನ್ನು ಕಿರುತೆರೆ ಹೊರತಾಗಿ ಬೆಳ್ಳಿತೆರೆಯಲ್ಲಿಯೂ ಕೂಡಾ ದಿಶಾ ಮದನ್ ಮೋಡಿ ಮಾಡಿದ್ದು ಪನ್ನಗಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಪತ್ರಕರ್ತೆ ಮಾಲಿನಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಇದರ ಹೊರತಾಗಿ ಇನ್ ಸ್ಟಾಗ್ರಾಂನಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಈಕೆ ಆಗಾಗ ಫೋಟೋ ಹಾಗೂ ವಿಡಿಯೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ.

  English summary
  Actress Disha Madan make Comeback With Tripura Sundari Serial, Know More.
  Tuesday, January 3, 2023, 5:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X