For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಕನ್ನಡ 8: ದೊಡ್ಮನೆ ಸೇರಲಿದ್ದಾರೆ 'ಮಿಸ್ ಇಂಡಿಯಾ ಸೌತ್?

  |

  ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ಅದ್ಧೂರಿ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಈ ಸಲ ದೊಡ್ಮನೆಯೊಳಗೆ ಯಾವೆಲ್ಲ ಸ್ಪರ್ಧಿಗಳು ಹೋಗಲಿದ್ದಾರೆ ಎನ್ನುವುದನ್ನು ಅಂತಿಮ ಕ್ಷಣದವರೆಗೂ ಗೌಪ್ಯವಾಗಿ ಕಾಪಾಡಿಕೊಳ್ಳಲಾಗಿದೆ.

  ಆದರೂ, ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅದರಲ್ಲಿರುವ ಹೆಸರುಗಳು ಸಹ ಕುತೂಹಲ ಮೂಡಿಸಿದೆ.ಇದೀಗ, ಬಿಗ್ ಬಾಸ್ ಸಂಭಾವ್ಯ ಪಟ್ಟಿಗಳಲ್ಲಿ ಈವರೆಗೂ ಎಲ್ಲಿಯೂ ಚರ್ಚೆಯಾಗದ ನಟಿಯೊಬ್ಬರು ಈ ಸಲ ದೊಡ್ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.

  ಬಿಗ್‌ಬಾಸ್ ಪ್ರಸಾರ ಸಮಯ ಬದಲಾಯಿಸುವಂತೆ ಪ್ರೇಕ್ಷಕರ ಒತ್ತಾಯ

  ಕನ್ನಡ-ತೆಲುಗು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ದಿವ್ಯ ರಾವ್ ಏಂಟನೇ ಆವೃತ್ತಿಯಲ್ಲಿ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎಂಬ ವಿಚಾರ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದೆ. ಮುಂದೆ ಓದಿ...

  ಮಿಸ್ ಇಂಡಿಯಾ ಸೌತ್ ವಿಜೇತೆ

  ಮಿಸ್ ಇಂಡಿಯಾ ಸೌತ್ ವಿಜೇತೆ

  ಮೂಲತಃ ಬೆಂಗಳೂರಿನವರಾದ ದಿವ್ಯ ರಾವ್ ಸಿಲಿಕಾನ್ ಸಿಟಿಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿದರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದುಕೊಂಡಿದ್ದಾರೆ. ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಧುಮುಕಿದ ದಿವ್ಯ ರಾವ್ ಯಶಸ್ಸು ಕಂಡರು. 2017ರಲ್ಲಿ ''ಮಿಸ್ ಇಂಡಿಯಾ ಸೌತ್'' ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದರು.

  ಕನ್ನಡ ಸಿನಿಮಾದಲ್ಲಿ ನಟನೆ

  ಕನ್ನಡ ಸಿನಿಮಾದಲ್ಲಿ ನಟನೆ

  2017ರಲ್ಲಿ ರಿಲೀಸ್ ಆಗಿದ್ದ ಕನ್ನಡ ಸಿನಿಮಾ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ದಿವ್ಯ ರಾವ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ನರೇಂದ್ರ ಬಾಬು ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಬಣ್ಣ ಹಚ್ಚಿದ್ದರು. 2019ರಲ್ಲಿ ತೆರೆಕಂಡ ''ಡಿಗ್ರಿ ಕಾಲೇಜ್'' ಮೂಲಕ ಟಾಲಿವುಡ್ ಇಂಡಸ್ಟ್ರಿ ಪ್ರವೇಶಿಸಿದರು.

  ಸಂಜೆ 6 ಗಂಟೆಗೆ ಬಿಗ್ ಬಾಸ್-8 ಆರಂಭ: 17 ಸ್ಪರ್ಧಿಗಳು ಯಾರು?

  ಧಾರಾವಾಹಿಗಳಲ್ಲಿ ನಟನೆ

  ಧಾರಾವಾಹಿಗಳಲ್ಲಿ ನಟನೆ

  ಮಾಡಲಿಂಗ್ ಕ್ಷೇತ್ರ ಹಾಗೂ ಸಿನಿಮಾದಲ್ಲಿ ಖ್ಯಾತಿ ಗಳಿಸಿಕೊಂಡ ದಿವ್ಯ ರಾವ್ ನಂತರ ಕನ್ನಡ ಕಿರುತೆರೆ ಲೋಕಕ್ಕೆ ಪರಿಚಯವಾದರು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ''ನನ್ನ ಹೆಂಡ್ತಿ ಎಂಬಿಬಿಎಸ್'' ಹಾಗೂ ''ಜೋಡಿಹಕ್ಕಿ'' ಎಂಬ ಧಾರಾವಾಹಿಗಳಲ್ಲಿಯೂ ದಿವ್ಯ ಅಭಿನಯಿಸಿದ್ದಾರೆ.

  English summary
  Indian actress and Model Actress Divya Rao set to enter Bigg boss kannada 8.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X