Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶೋ ಬಗ್ಗೆ ರಿಷಿಕಾ ಸಿಂಗ್ ಫ್ಯಾಮಿಲಿ ಹೇಳುವುದೇನು?
*'ರಗಳೆ' ಶೋಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ?
ಬಹಳ ಚೆನ್ನಾಗಿದೆ. ನನ್ನ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟ-ನಟಿಯರು ತುಂಬಾ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಬೋಲ್ಡ್ ಆಗಿಯೇ ಉತ್ತರಿಸಬೇಕಾದ ಪ್ರಶ್ನೆಗೆ ಹಾಗೇ ಉತ್ತರಿಸಿ ಅಚ್ಚರಿಯ ಜೊತೆಜೊತೆಗೆ ಶಹಬ್ಬಾಸ್ ಪಡೆದುಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಯಕ್ರಮವನ್ನು ಕಿರಿತೆರೆಯ ವೀಕ್ಷಕರು ಹಾಗೂ ಚಿತ್ರೋದ್ಯಮದ ಮಂದು ಕಾದು ಕುಳಿತು ನೋಡುತ್ತಿದ್ದಾರೆ, ಮೆಚ್ಚಿದ್ದಾರೆ.
* ನಿಮ್ಮ ಫ್ಯಾಮಿಲಿ ಸಪೋರ್ಟ್ ಹೇಗಿದೆ?
ನಾನು ಮಾಡುವ ಯಾವುದೇ ಕೆಲಸಕ್ಕೆ ನನ್ನ ಫ್ಯಾಮಿಲಿ ಸಪೋರ್ಟ್ ಇದ್ದೇ ಇರುತ್ತದೆ. ಆದರೆ ನಮ್ಮ ಫ್ಯಾಮಿಲಿಯಲ್ಲಿ ಯಾರೂ ಯಾರ ವೈಯಕ್ತಿಕ ಜೀವನದಲ್ಲಿ ಮೂಗುತೂರಿಸುವುದಿಲ್ಲ. ತೀರಾ ಚಿಕ್ಕವರಿದ್ದಾಗ ಏನೋ ಕೆಲವಷ್ಟು ಸಲಹೆ, ಸೂಚನೆ ನೀಡಿದ್ದಿದೆ. ನಮಗೆ ಕೊಡಿಸಬೇಕಾದ ಶಿಕ್ಷಣ ಕೊಡಿಸಿದ್ದಾರೆ. ಕುಟುಂಬ ಹಾಗೂ ಸಮಾಜದಲ್ಲಿ ಸಹಜವಾಗಿ ನಡೆದುಕೊಳ್ಳಬೇಕಾದ ಸಂಸ್ಕಾರ ಕಲಿಸಿದ್ದಾರೆ.
ಅದು ಬಿಟ್ಟರೆ, ನಾವು ವಯಸ್ಸಿಗೆ ಬಂದಂತೆ ನಮ್ಮ ಗುರಿ ಹಾಗೂ ಸಾಧಿಸಬೇಕಾದ ಮಾರ್ಗ ಅವುಗಳನ್ನು ನಾವೇ ಯೋಚಿಸಿ ನಿರ್ಧರಿಸುವ ಸ್ವಾತಂತ್ರ್ಯವನ್ನು ನಮಗೆ ನೀಡಿದ್ದಾರೆ. ಯಾವ ವಿಷಯದಲ್ಲೇ ಆಗಲೀ ಕೇಳಿದರೆ ಸಲಹೆ ಕೊಡುತ್ತಾರೆ. ಅನಾವಶ್ಯಕ ಉಪದೇಶ ಮಾಡುವ ಜಾಯಮಾನ ಅಪ್ಪ, ಅಣ್ಣ ಸೇರಿ ನಮ್ಮ ಕುಟುಂಬದಲ್ಲಿ ಯಾರಿಗೂ ಇಲ್ಲ. ಮುಂದಿನ ಪುಟ ನೋಡಿ...