»   » 3 ವರ್ಷದ ದಿಗಂತ್ 'ಪ್ರೇಮ' ಮುರಿದು ಬಿದ್ದಿದ್ದೇಕೆ?

3 ವರ್ಷದ ದಿಗಂತ್ 'ಪ್ರೇಮ' ಮುರಿದು ಬಿದ್ದಿದ್ದೇಕೆ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ದೂದ್ ಪೇಡಾ ಅಂತಾನೇ ಕರೆಸಿಕೊಳ್ಳುವ ನಟ ದಿಗಂತ್. ಸದ್ಯ, ಕನ್ನಡದ ಜೊತೆ ಜೊತೆಗೆ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸುತ್ತಿರುವ ದಿಗಂತ್ ಹಲವು ಬಾರಿ ಗಾಸಿಪ್ ಪಂಡಿತರ ಬಾಯಿಗೆ ಸಿಕ್ಕಿಹಾಕಿಕೊಂಡಿದ್ದರು. ಯಾಕಂದ್ರೆ, ಪ್ರೀತಿಯ ವಿಚಾರಕ್ಕೆ.

ಹೌದು, ದಿಗಂತ್ ಗೆ ಕನ್ನಡದ ಸ್ಟಾರ್ ನಟಿಯ ಜೊತೆ ಲವ್ ಆಗಿದೆ, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ಗುಸುಗುಸಗಳು ಆಗಾಗ ಗಾಂಧಿನಗರದಲ್ಲಿ ಜೋರಾಗಿಯೇ ಕೇಳಿ ಬಂದಿದೆ. ಇದಕ್ಕೆಲ್ಲಾ ಕಿವಿ ಕೊಡದ ದಿಗಂತ್ ಸೈಲಾಂಟ್ ಆಗಿ ಸಿನಿಮಾಗಳನ್ನ ಮಾಡ್ತಿದ್ದರು. ಇದೀಗ, ದಿಗಂತ್ ತಮ್ಮ ಲವ್ ಬಗ್ಗೆ ಮಾತನಾಡಿದ್ದಲ್ಲದೇ, ತಮ್ಮ ಮೊದಲ ಪ್ರೀತಿ ಯಾವುದು ಮತ್ತು ಯಾರೊಂದಿಗೆ ಎಂಬುದನ್ನ ಕೂಡ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

ದಿಗಂತ್ ಫಸ್ಟ್ ಲವರ್!

ದೂದ್ ಪೇಡಾ ದಿಗಂತ್ ಅವರ ಮೊದಲ ಲವರ್ ಹೆಸರು ಮಯೂರಿ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದು ಬೆಂಗಳೂರು. ಆಗ ಇಬ್ಬರು ಬೆಂಗಳೂರಿನಲ್ಲೇ ನೆಲಸಿದ್ದರು. ವಿಶೇಷ ಏನಪ್ಪಾ ಅಂದ್ರೆ, ದಿಗಂತ್ ಅವರೇ ಮಯೂರಿಗೆ ಮೊದಲು ಪ್ರಪೋಸ್ ಮಾಡಿದ್ದರು.

3 ವರ್ಷದ ಪ್ರೀತಿ ಬ್ರೇಕ್ ಅಪ್

ಪರಸ್ಪರ 3 ವರ್ಷ ದಿಗಂತ್ ಮತ್ತು ಮಯೂರಿ ಡೇಟಿಂಗ್ ಮಾಡಿದ್ದರು. ಆದ್ರೆ, ಇಬ್ಬರ ಮಧ್ಯೆ ಬ್ರೇಕ್ ಅಪ್ ಆಯ್ತು. ಇದಕ್ಕೆ ಕಾರಣ ಬೇಕು ಅಂದ್ರೆ ಗುರುವಾರದವರೆಗೂ ಕಾಯಲೇ ಬೇಕು.

ಈಗ ದಿಗಂತ್ ಲವರ್ ಯಾರು?

ಹೀಗೆ, ಮೊದಲ ಪ್ರೀತಿ ಮುರಿದ ಮೇಲೆ ನಟಿಯೊಬ್ಬರ ಜೊತೆ ದಿಗಂತ್ ಹೆಸರು ಅಂಟಿಕೊಂಡಿತ್ತು. ಪ್ರಸ್ತುತ ಯಾರನ್ನ ಲವ್ ಮಾಡ್ತಿದ್ದಾರೆ ಎಂದು ದಿಗಂತ್ ಅವರನ್ನ ಕೇಳಿದ್ದಕ್ಕೆ, ನಾನು ಈಗ 'ಸಿಂಗಲ್' ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.

ಪ್ರೋಮೋ ನೋಡಿ

ಇಷ್ಟೆಲ್ಲಾ ಕಥೆಯನ್ನ ದಿಗಂತ್ ಹೇಳಿದ್ದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಸದ್ಯ, ಪ್ರೋಮೋ ಬಿಡುಗಡೆ ಆಗಿದೆ. ಕಾರ್ಯಕ್ರಮ ಗುರುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Sandalwood Actor Diganth Revealed About His First Love at Colors Super channel 'Super Talk Time' Program

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada