»   »  'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರಾವಾಹಿ ವರ್ಷಗಳಿಂದ ವೀಕ್ಷಕರನ್ನು ತನ್ನ ಬಳಿ ಹಿಡಿದಿಟ್ಟುಕೊಂಡಿದೆ. ಧಾರಾವಾಹಿಯಲ್ಲಿ ಬರುವ ಸಡನ್ ಟ್ವಿಸ್ಟ್ ಗಳು ನೋಡುಗರಿಗೆ ಸಖತ್ ಕುತೂಹಲವನ್ನು ಮೂಡಿಸುತ್ತಿದೆ.

ವಿಷಯ ಏನಂದರೆ, ಈಗ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಒಂದು ರೋಚಕ ತಿರುವು ಸಿಕ್ಕಿದೆ. ವಾರಗಳಿಂದ ಕಾಣೆಯಾಗಿದ್ದ ಆಯುಷಿ ಮತ್ತು ಖುಷಿ ಈಗ ಸಿಕ್ಕಿದ್ದಾರೆ. ಒಂದು ಮಗು ಅಮ್ಮ ರಾಧಿಕಾ ಪಾಲಾದರೆ ಇನ್ನೊಂದು ಮಗು ದುಷ್ಟರ ಹತ್ತಿರ ಸೆರೆಯಾಗಿದೆ. ಮುಂದೆ ಓದಿ...

ಅಮ್ಮನ ತೋಳಲ್ಲಿ ಆಯುಷಿ

ಇಷ್ಟು ದಿನ ಅಮ್ಮನಿಂದ ದೂರಾಗಿದ್ದ ಪುಟ್ಟ ಹುಡುಗಿ ಆಯುಷಿ ಇದೀಗ ಆಕಸ್ಮಿಕವಾಗಿ ತಾಯಿ ರಾಧಿಕಾ ಕೈ ಸೇರಿದ್ದಾಳೆ.

ಬದಲಾದ ಮಕ್ಕಳು

ಆಯುಷಿ ಮತ್ತು ಖುಷಿ ಇಬ್ಬರು ಅಕ್ಕ-ತಂಗಿಯರು. ಆದರೆ ಆಯುಷಿ ಬಗ್ಗೆ ತಾಯಿ ರಾಧಿಕಾಗೆ ಇದುವರೆಗೂ ತಿಳಿದಿರಲಿಲ್ಲ. ಇದೀಗ ಧಾರಾವಾಹಿಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಆಯುಷಿ ಮತ್ತು ರಾಧಿಕಾ ಅಂದರೆ ಅಮ್ಮ - ಮಗಳು ಜೊತೆಯಾಗಿದ್ದಾರೆ.

ಆಕಸ್ಮಿಕ ಘಟನೆ

ಕಾಣೆಯಾಗಿದ್ದ ಆಯುಷಿ ಮತ್ತು ಖುಷಿ ಇಬ್ಬರೂ ತಮ್ಮ ಬಟ್ಟೆಯನ್ನು ಬದಲಾಯಿಸಿಕೊಂಡಿದ್ದರು. ಅವಳಿ-ಜವಳಿ ಆದ ಈ ಇಬ್ಬರಲ್ಲಿ ಯಾರು ಖುಷಿ ಎಂದು ತಾಯಿ ರಾಧಿಕಾಗೂ ತಿಳಿದಿರಲಿಲ್ಲ. ಈ ಕಾರಣದಿಂದ ಆಯುಷಿ ತಾಯಿಗೆ ಸಿಕ್ಕಳು.

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

ಖುಷಿ ಗತಿ ಏನು..?

ಆಯುಷಿ ಬದಲಿಗೆ ಖುಷಿ, ತಾಯಿ ರಾಧಿಕಾ ಪಾಲಾಗಿದ್ದಾಳೆ. ಅದ್ದರಿಂದ ಇತ್ತ ಆಯುಷಿಯನ್ನು ಹುಡುಕುತ್ತಿರುವ ಸನ್ನಿಧಿಗೆ ಖುಷಿ ಸಿಗಬಹುದಾ ಎನ್ನುವ ಪ್ರಶ್ನೆ ಕಾಡುತ್ತಿದೆ.

'ಬಿಗ್' ಶಾಕ್: 'ಪುಟ್ಟಗೌರಿ' ಮುಂದೆ 'ಬಿಗ್ ಬಾಸ್' ಆಟ ನಡೆಯಲಿಲ್ಲ.!

ಮುಂದೆ ಏನಾಗುತ್ತೆ ?

ವಾರಗಳಿಂದ ಎಲ್ಲರಿಂದ ಮರೆಯಾಗಿದ್ದ ಆಯುಷಿ ಮತ್ತು ಖುಷಿ ಇದೀಗ ಅದಲು ಬದಲಾಗಿದ್ದು, ಧಾರಾವಾಹಿಯಲ್ಲಿ ಮುಂದೆ ಏನಾಗುತ್ತದೆ ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

English summary
Colours Kannada channel's popular serial 'Agnisakshi' gets a new twist.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada