»   » 'ಬೊಂಬೆ' ನಿವೇದಿತಾ 'ಬಿಗ್ ಬಾಸ್' ಗೆದ್ದರೆ ಅಚ್ಚರಿ ಪಡಬೇಡಿ.! ಯಾಕಂದ್ರೆ...

'ಬೊಂಬೆ' ನಿವೇದಿತಾ 'ಬಿಗ್ ಬಾಸ್' ಗೆದ್ದರೆ ಅಚ್ಚರಿ ಪಡಬೇಡಿ.! ಯಾಕಂದ್ರೆ...

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುವ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ.

ಥೇಟ್ ಬಾರ್ಬಿ ಡಾಲ್ ರೂಪದಲ್ಲಿ 'ದೊಡ್ಮನೆ'ಯೊಳಗೆ ಕಾಲಿಟ್ಟ ನಿವೇದಿತಾ ಗೌಡ ಸ್ಪರ್ಧಿಗಳ ಪಾಲಿಗೆ 'ಬೊಂಬೆ' ಆದರು. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಅಂತ ನಾಲ್ಕು ವರ್ಷಗಳಿಂದ ಕನಸು ಕಂಡಿದ್ದ ನಿವೇದಿತಾಗೆ ಈ 'ದೊಡ್ಮನೆ' ಒಂಥರಾ ಡ್ರೀಮ್ ಲ್ಯಾಂಡ್ ಇದ್ಹಂಗೆ. ಇದೇ ಕಾರಣಕ್ಕೆ ಪ್ರತಿ ದಿನ.. ಪ್ರತಿ ಕ್ಷಣ.. ನಗುನಗುತ್ತಾ.. ನಲಿನಲಿಯುತ್ತಲೇ ಕಳೆದ ನಿವೇದಿತಾ ಗೌಡ ವೀಕ್ಷಕರ ಮನವನ್ನೂ ಗೆದ್ದಿದ್ದಾರೆ.

ಪದೇ ಪದೇ ನಾಮಿನೇಟ್ ಆದರೂ, ಬಚಾವ್ ಆಗುತ್ತಲೇ ಇದ್ದ ನಿವೇದಿತಾ ಗೌಡ ಇದೀಗ ಟಾಪ್ 5 ಹಂತಕ್ಕೆ ಬಂದಿದ್ದಾರೆ. ಸೆಲೆಬ್ರಿಟಿ ಸ್ಟೇಟಸ್ ಇಲ್ಲದೆ, ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಬಂದ ನಿವೇದಿತಾ ಇದೀಗ ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ. ಅಷ್ಟರ ಮಟ್ಟಿಗೆ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ.

ಗಾಸಿಪ್ ಮಾಡದೆ, ಇನ್ನೊಬ್ಬರ ಬಗ್ಗೆ ಬೆನ್ನಹಿಂದೆ ಕೆಟ್ಟದಾಗಿ ಮಾತನಾಡದೆ, ಡಬಲ್ ಗೇಮ್ ಆಡದೆ, ಅನಿಸಿದ್ದನ್ನೆಲ್ಲ ನೇರವಾಗಿ ಹೇಳಿರುವ ನಿವೇದಿತಾ ಗೌಡ ಅನೇಕರಿಗೆ ಅಚ್ಚುಮೆಚ್ಚಾಗಿದ್ದಾರೆ. ಇಂತಿಪ್ಪ ನಿವೇದಿತಾ ಗೌಡ 'ಬಿಗ್ ಬಾಸ್ ಕನ್ನಡ-5' ವಿಜೇತರಾದರೂ ಅಚ್ಚರಿ ಇಲ್ಲ.

ಗ್ರ್ಯಾಂಡ್ ಫಿನಾಲೆ ಮುನ್ನ 'ಬಿಗ್ ಬಾಸ್' ಮನೆಯೊಳಗಿನ ನಿವೇದಿತಾ ಜರ್ನಿ ಕುರಿತ ಸಣ್ಣ ರೌಂಡಪ್ ಇಲ್ಲಿದೆ ಓದಿರಿ...

ಸೆಲೆಬ್ರಿಟಿಗಳ ಜೊತೆಯಾದ ನಿವೇದಿತಾ

ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಅಗಿ 'ಬಿಗ್ ಬಾಸ್' ಮನೆಯೊಳಗೆ ಹೋದರೂ, ನಿವೇದಿತಾ ಹೆಚ್ಚು ಆಪ್ತರಾಗಿದ್ದು ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ.

'ಬೊಂಬೆ' ನಿವೇದಿತಾ ಗೌಡಗೆ ಕೈಮುಗಿದ ಕಿಚ್ಚ ಸುದೀಪ್.!

ಗಾರ್ಡನ್ ಏರಿಯಾಗೆ ಬಂದ ನಿವೇದಿತಾ

ಮೊದಮೊದಲು ಸೆಲೆಬ್ರಿಟಿ ಸ್ಪರ್ಧಿಗಳೊಂದಿಗೆ ಸ್ನೇಹ ಬೆಳೆಸಿದ್ದ ನಿವೇದಿತಾ ನಂತರ ಗಾರ್ಡನ್ ಏರಿಯಾಗೆ ಶಿಫ್ಟ್ ಆದರು. ಕಾಮನ್ ಮ್ಯಾನ್ ಸ್ಪರ್ಧಿಗಳ ಜೊತೆಗೆ ಹೆಚ್ಚು ಕಾಲ ಕಳೆಯಲು ಆರಂಭಿಸಿದರು.

ಬಿಗ್ ಬಾಸ್ ಮನೆಯಲ್ಲಿರುವ ಬುದ್ದಿವಂತ ನರಿ ಈಕೆ

ಯಾರೊಂದಿಗೂ ಮುನಿಸು ಇಲ್ಲ

'ಬಿಗ್ ಬಾಸ್' ಮನೆಯೊಳಗೆ ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಗುಂಪುಗಾರಿಕೆ ನಡೆಯುತ್ತಿದ್ದರೂ, ನಿವೇದಿತಾ ಮಾತ್ರ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳಲಿಲ್ಲ. ಎಲ್ಲರೊಂದಿಗೂ ಖುಷಿ ಖುಷಿಯಾಗಿ ಮಾತನಾಡುತ್ತಿದ್ದ ನಿವೇದಿತಾ 'ಬಿಗ್ ಬಾಸ್' ಮನೆಯೊಳಗೆ ಮುನಿಸಿಕೊಂಡಿರುವ ಉದಾಹರಣೆ ಕಮ್ಮಿ.

'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

ಚಂದನ್ ಶೆಟ್ಟಿಗೆ ಕ್ಲೋಸ್ ಫ್ರೆಂಡ್

ಗಾರ್ಡನ್ ಏರಿಯಾಗೆ ಶಿಫ್ಟ್ ಆದ್ಮೇಲೆ ಚಂದನ್ ಶೆಟ್ಟಿಗೆ ಕ್ಲೋಸ್ ಫ್ರೆಂಡ್ ಆದ ನಿವೇದಿತಾ ಇಲ್ಲಿಯವರೆಗೂ ಫ್ರೆಂಡ್ ಶಿಪ್ ಮೇನ್ಟೇನ್ ಮಾಡಿದ್ದಾರೆ.

ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರಂತೆ 'ಬೊಂಬೆ' ನಿವೇದಿತಾ.!

ಅಳೆದು-ತೂಗಿ ಆಲೋಚಿಸುವ ನಿವೇದಿತಾ

ಕ್ಯಾಪ್ಟನ್ ಆಗಿ ಬೆಸ್ಟ್ ಪರ್ಫಾಮರ್ ಘೋಷಿಸುವ ಹಾಗೂ ಕಳಪೆ ಬೋರ್ಡ್ ನೀಡುವ ಸಂದರ್ಭದಲ್ಲಿ ನಿವೇದಿತಾ ಆಲೋಚಿಸಿದ ರೀತಿ ಮೆಚ್ಚುವಂಥದ್ದು. ಇದಕ್ಕೆ ಸುದೀಪ್ ಕೂಡ ಭೇಷ್ ಎಂದಿದ್ದರು.

ನಿವೇದಿತಾರನ್ನ ಹೊಗಳಿದ ಸುದೀಪ್: ಕಿಚ್ಚ ಕೊಟ್ಟ ಕಾಂಪ್ಲಿಮೆಂಟ್ ಏನು.?

ಜಗಳ ಮಾಡಿಲ್ಲ.!

'ಬಿಗ್ ಬಾಸ್' ಮನೆಯೊಳಗೆ ಅನೇಕರು ಹಲವರೊಂದಿಗೆ ಕಿತ್ತಾಡಿದ್ದಾರೆ. ಆದ್ರೆ, ನಿವೇದಿತಾ ಅಷ್ಟಾಗಿ ಯಾರೊಂದಿಗೂ ಜಗಳ ಮಾಡಿಲ್ಲ. ತಮಗೆ ಕಿರಿಕಿರಿ ಆದಾಗ ತಮ್ಮದೇ ಶೈಲಿಯಲ್ಲಿ ಬೇರೆಯವರಿಗೆ ತಿರುಗೇಟು ನೀಡಿರುವ ನಿವೇದಿತಾ ಎಂದೂ ಹೌಹಾರಿಲ್ಲ.

ಅತ್ಯುತ್ತಮ ಪರ್ಫಾಮೆನ್ಸ್

ಮಡಿಕೆ ಬ್ಯಾಲೆನ್ಸ್ ಮಾಡುವ ಟಾಸ್ಕ್ ನಲ್ಲಿ ನಿವೇದಿತಾ ಅದ್ಭುತವಾಗಿ ಪರ್ಫಾಮ್ ಮಾಡಿದರು. ಇದರಿಂದ ದಿವಾಕರ್ ಗೆ ತಮ್ಮ ಪತ್ನಿ ಜೊತೆ 'ಬಿಗ್ ಬಾಸ್' ಮನೆಯೊಳಗೆ ಹೆಚ್ಚು ಕಾಲ ಕಳೆಯುವ ಅವಕಾಶ ಸಿಕ್ತು. ಹಾಗ್ನೋಡಿದ್ರೆ, ನಿವೇದಿತಾ ತಾಯಿ ಬಂದಾಗ ದಿವಾಕರ್ ಬಹಳ ಬೇಗ ಮಡಿಕೆಯನ್ನ ಬೀಳಿಸಿಬಿಟ್ಟರು. ಆ ಸಿಟ್ಟನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಿವೇದಿತಾ ನೀಡಿದ ಪರ್ಫಾಮೆನ್ಸ್ ಎಲ್ಲರಿಗೂ ಇಷ್ಟ ಆಯ್ತು.

ಗಾಸಿಪ್ ಮಾಡಿಲ್ಲ.!

ಬೆನ್ನ ಹಿಂದೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡದೆ, ಗಾಸಿಪ್ ಮಾಡದೆ, ಡಬಲ್ ಗೇಮ್ ಆಡದ ನಿವೇದಿತಾ ಸ್ವಚ್ಛ ಮನಸ್ಸಿನಿಂದ 'ಬಿಗ್ ಬಾಸ್' ಮನೆಯೊಳಗೆ ಉಳಿದುಕೊಂಡಿದ್ದಾರೆ.

ನಿವೇದಿತಾ ಮೇಲೆ ವೀಕ್ಷಕರ ಪ್ರೀತಿ

ಖುಷಿಯಾದಾಗ ನಕ್ಕು, ಕಷ್ಟವಾದಾಗ ಅತ್ತಿರುವ ನಿವೇದಿತಾ ಕಂಡ್ರೆ ವೀಕ್ಷಕರಿಗೆ ಭಾರಿ ಪ್ರೀತಿ ಇದೆ. ಹೀಗಾಗಿ, ಈ ಬಾರಿ ನಿವೇದಿತಾ ಗೌಡ ಗೆಲ್ಲಬೇಕು ಎಂಬುದು ಹಲವರ ಕನವರಿಕೆ. ಇದು ನಿಜ ಆದರೆ, ಅಚ್ಚರಿ ಇಲ್ಲ.

English summary
Niveditha Gowda is a Finalist in Bigg Boss Kannada 5 reality show. Will Niveditha Gowda manage to win #BBK5 trophy.? Lets wait and Watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada