For Quick Alerts
  ALLOW NOTIFICATIONS  
  For Daily Alerts

  ಹೆಂಗಳೆಯರ ಮನಮುಟ್ಟುವ ಹೊಸ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ!

  By Harshitha
  |

  ಕರುಣೆ, ವಾತ್ಸಲ್ಯ, ಪ್ರೀತಿ, ಮಮತೆ ಮತ್ತು ಬಾಂಧವ್ಯ ಸ್ವರೂಪವೇ ಅಮ್ಮ. ಜಗತ್ತಿನಲ್ಲಿ ಯಾವುದೇ ಸಂಬಂಧದಲ್ಲಿ ವ್ಯತ್ಯಾಸವಾದರೂ ಅಮ್ಮ-ಮಕ್ಕಳ ಸಂಬಂಧದಲ್ಲಿ ಕೊಂಚವೂ ಬದಲಾವಣೆ ಆಗುವುದಿಲ್ಲ. ಅಂತಹ ಸಂದರ್ಭ ಬಂದರೆ ಅದನ್ನು ಸರಿಪಡಿಸುವ ಏಕೈಕ ವ್ಯಕ್ತಿ 'ಅಮ್ಮ'.

  ಫೆಬ್ರವರಿ 1 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಹೊಸ ಧಾರಾವಾಹಿ 'ಅಮ್ಮ' ಇಂತಹ ಮನಮಿಡಿಯುವ ಕಥೆ ಹೊಂದಿದೆ.

  ಅಮ್ಮ-ಮಗಳು ನಡುವಿನ ಬಾಂಧವ್ಯದ ಕಥೆ ಹೇಳುವ ಅನೇಕ ಧಾರಾವಾಹಿಗಳು ಈಗಾಗಲೇ ಬಂದು ಹೋಗಿವೆ. ಆದರೆ ಈ ಧಾರಾವಾಹಿಯಲ್ಲಿ ಅಮ್ಮ-ಮಗಳ ನಡುವಿನ ಸುಮಧುರ ಸಂಬಂಧವಷ್ಟೇ ಅಲ್ಲ, ತಾಯಿಯ ಅತಿಯಾದ ಮಮಕಾರ ಎಂತಹ ಕಷ್ಟಗಳನ್ನ ತಂದೊಡ್ಡಬಹುದು ಎನ್ನುವುದನ್ನೂ ನಿರೂಪಿಸಲಾಗಿದೆ. [ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಡ್ಯಾನ್ಸ್ ಶೋ.!]

  ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ತಾರೆ ನಟಿ ಕೌಸಲ್ಯ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ಈಗಾಗಲೇ ಮನೆ ಮಾತಾಗಿರುವ 'ಆಕಾಶದೀಪ' ಧಾರಾವಾಹಿ ಖ್ಯಾತಿಯ ದಿವ್ಯಾ, ಚರಿತ್, ದೀಪಿಕಾ ಅಭಿನಯಿಸುತ್ತಿದ್ದಾರೆ. ಸುದೇಶ್ ರಾವ್ ಆಕ್ಷನ್ ಕಟ್ ಹೇಳಲಿದ್ದಾರೆ.

  English summary
  Kannada Entertainment Channel Suvarna has come up with a new serial called 'Amma' which will go on air from Feb 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X