For Quick Alerts
  ALLOW NOTIFICATIONS  
  For Daily Alerts

  ಸೀಮಂತ ಸಂಭ್ರಮದಲ್ಲಿ ಕಿರುತೆರೆಯ ಖ್ಯಾತ ನಟಿ ಅಮೃತಾ ರಾಮಮೂರ್ತಿ

  |

  ಕನ್ನಡ ಕಿರುತೆರೆಯ ಸ್ಟಾರ್ ದಂಪತಿ ರಾಘವೇಂದ್ರ ಮತ್ತು ಅಮೃತಾ ರಾಮಮೂರ್ತಿ ಬದುಕಲ್ಲಿ ಸಂತಸ ಮನೆ ಮಾಡಿದೆ. ನಟಿ ಅಮೃತಾ ಮತ್ತು ರಾಘವೇಂದ್ರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮೃತಾ ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.

  ಇದೀಗ ಅಮೃತಾಗೆ ಸೀಮಂತಾ ಸಂಭ್ರಮ ನೆರವೇರಿದೆ. ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮ ನಡೆದಿದ್ದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾಸ್ತ್ರೋಕ್ತವಾಗಿ ಸೀಮಂತ ಮಾಡಿಕೊಂಡಿರುವ ಅಮೃತಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಮೃತಾ ಸೀಮಂತಾ ಸಮಾರಂಭಕ್ಕೆ ಕಿರುತೆರೆಯ ಕಲಾವಿದರು, ಸ್ನೇಹಿತರು ಮತ್ತು ಕುಟಂಬದವರು ಭಾಗಿಯಾಗಿ ಗರ್ಭಿಣಿ ಅಮೃತಾಗೆ ಶುಭಹಾರೈಸಿದ್ದರು.

  ಮುದ್ದು ಮಗಳಿಗೆ ಸುಂದರ ಹೆಸರಿಟ್ಟ 'ಬಿಗ್ ಬಾಸ್' ಖ್ಯಾತಿಯ ಅಕ್ಷತಾ ಪಾಂಡವಪುರಮುದ್ದು ಮಗಳಿಗೆ ಸುಂದರ ಹೆಸರಿಟ್ಟ 'ಬಿಗ್ ಬಾಸ್' ಖ್ಯಾತಿಯ ಅಕ್ಷತಾ ಪಾಂಡವಪುರ

  ತನ್ನ ಕನಸಿನ ಸೀಮಂತ ಸಂಭ್ರಮದಲ್ಲಿ ಅಮೃತಾ ಕೆಂಪು ಬಣ್ಣದ ಜೆರಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಪತಿ, ಖ್ಯಾತ ಧಾರಾವಾಹಿ ನಟ ರಾಘವೇಂದ್ರ, ಅಮೃತಾ ಹಣೆಗೆ ಮುತ್ತಿಡುತ್ತಿರುವ ಫೋಟೋ ಸೇರಿದಂತೆ ಕೆಲವು ಸುಂದರ ಫೋಟೋಗಳನ್ನು ಅಮೃತಾ ಹಂಚಿಕೊಂಡಿದ್ದಾರೆ.

  ಅಂದಹಾಗೆ ಸೀಮಂತ ಸಂಭ್ರಮ ಮಾಡಿಕೊಳ್ಳಬೇಕು ಎನ್ನುವುದು ಅಮೃತಾರ ಕನಸಾಗಿತ್ತಂತೆ. ಹಿರಿಯರ ಸಮ್ಮುಖದಲ್ಲಿ ಸೀಮಂತ ಮಾಡಿಕೊಳ್ಳುವ ಕನಸು ಈಗ ನನಸಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೃತಾ ಬರೆದುಕೊಂಡಿದ್ದಾರೆ.

  "ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ, ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು (ತಾಯಿ ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ) ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಮೊದಲಿಗೆ ನನ್ನ ಜೀವ ರಾಘವೇಂದ್ರ, ಅತ್ತೆ, ಮಾವ, ಅತ್ತಿಗೆ, ಅಣ್ಣಾ, ಅಮ್ಮ, ಅಪ್ಪ , ಅಕ್ಕ, ಬಾವ, ಸ್ನೇಹಿತರು ಹಾಗೆ ನನ್ನ ಆತ್ಮೀಯರು"

  ಇನ್ನು ಮೇ ತಿಂಗಳಲ್ಲಿ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅಮೃತಾ- ರಾಘವೇಂದ್ರ ದಂಪತಿ, ವಾರ್ಷಿಕೋತ್ಸವದ ದಿನವೇ ತಂದೆ-ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಪತಿ ರಾಘವೇಂದ್ರ ಕಾಲುಮೇಲೆ ಕುಳಿತಿರುವ ಅಮೃತಾ ಫೋಟೋವನ್ನು ಶೇರ್ ಮಾಡಿ 'ನಾವಿಬ್ಬರು ಈಗ ಮೂವರು' ಎಂದು ಬರೆದುಕೊಂಡಿದ್ದರು.

  Amrutha Ramamoorthi shares her Baby Shower ceremony photos

  ಅಮೃತಾ ಪತಿ ರಾಘವೇಂದ್ರ ಕೂಡ ಕಿರುತೆರೆಯ ಖ್ಯಾತ ನಟ. ಈ ಜೋಡಿ ಮೊದಲು ಮಿಸ್ಟರ್ ಅಂಡ್ ಮಿಸ್ಸಸ್ ರಂಗೇಗೌಡ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಆಗಲೇ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿತ್ತು. ಬಳಿಕ ಇಬ್ಬರೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು. 2019ರಲ್ಲ ಈ ಜೋಡಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಸದ್ಯ ರಾಘವೇಂದ್ರ ಗೌಡ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಅಮೃತಾ, ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಮೃದುಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇತ್ತೀಚಿಗಷ್ಟೆ ಈ ಧಾರಾವಾಹಿಯಿಂದ ಹೊರಬಂದಿದ್ದರು. ಸದ್ಯ ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವ ಅಮೃತಾ ಸದ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

  English summary
  Popular Serial Artist Amrutha Ramamoorthi shares her Baby Shower ceremony photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X