For Quick Alerts
  ALLOW NOTIFICATIONS  
  For Daily Alerts

  ನಟನೆಯ ಹೊರತಾಗಿ ನಿರೂಪಣೆ ಮೂಲಕ ಗಮನ ಸೆಳೆದ ನಟ–ನಟಿಯರು ಇವರೇ!

  By ಅನಿತಾ ಬನಾರಿ
  |

  ಕನ್ನಡ ಕಿರುತೆರೆಯ ನಿರೂಪಕರು ಎಂದ ಕೂಡಲೇ ಥಟ್ ಎಂದು ಕೆಲವೊಂದು ಹೆಸರುಗಳು ಕಣ್ಣ ಮುಂದೆ ಬಂದು ಹೋಗುತ್ತದೆ. ಅನುಶ್ರೀ, ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಮಾಸ್ಟರ್ ಆನಂದ್, ಶ್ವೇತಾ ಚೆಂಗಪ್ಪ, ಶಾಲಿನಿ ಸತ್ಯನಾರಾಯಣ, ಸುಷ್ಮಾ ರಾವ್, ನಿರಂಜನ್ ದೇಶಪಾಂಡೆ ಇದು ಕನ್ನಡ ಕಿರುತೆರೆ ರಂಗದಲ್ಲಿ ಸಕ್ರಿಯರಾಗಿರುವ ನಿರೂಪಕ ನಿರೂಪಕಿಯರ ಹೆಸರುಗಳು.

  ಆದರೆ ಈ ಸಾಲಿಗೆ ಕನ್ನಡದ ನಟ ನಟಿಯರು ಕೂಡಾ ಇದೀಗ ಸೇರ್ಪಡೆಯಾಗಿ ನಿರೂಪಕ - ನಿರೂಪಕಿ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ನಿರೂಪಣೆಯಿಂದ ಸಕ್ಸಸ್ ಗಿಟ್ಟಿಸಿಕೊಂಡಿದ್ದಾರೆ. ನಟನೆಯ ಹೊರತಾಗಿ ನಿರೂಪಣೆ ಮೂಲಕ ಗಮನ ಸೆಳೆದ ನಟ-ನಟಿಯರು ಇವರೇನೆ.

  ಕೆಂಡಸಂಪಿಗೆ: ಮನೆಯಿಂದ ಹೊರಗೆ ಹೋಗ್ತಾಳ ಸುಮನಾ...?ಕೆಂಡಸಂಪಿಗೆ: ಮನೆಯಿಂದ ಹೊರಗೆ ಹೋಗ್ತಾಳ ಸುಮನಾ...?

  ಅನುಪಮಾ ಗೌಡ

  ಅನುಪಮಾ ಗೌಡ

  ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅನುಪಮಾ ಗೌಡ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋವಿನ ಮೂಲಕ ನಿರೂಪಕಿಯಾಗಿ ಬಡ್ತಿ ಪಡೆದ ಅನುಪಮಾ ಗೌಡ ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತದ ನಿರೂಪಕಿಯಾಗಿಯೂ ಸೈ ಎನಿಸಿಕೊಂಡರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ವಿರೂಪಕವಕಿಯಾಗಿಯೂ ಇತಿ ಗಮನ ಸೆಳೆದಿದ್ದಾರೆ.

  ಚಂದನಾ ಅನಂತ ಕೃಷ್ಣ

  ಚಂದನಾ ಅನಂತ ಕೃಷ್ಣ

  ರಾಜ ರಾಣಿ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಿರುತೆರೆಗೆ ಕಾಲಿಟ್ಟ ಚಂದನಾ ಅನಂತಕೃಷ್ಣ ಮುಂದೆ ಹೂಮಳೆ ಧಾರಾವಾಹಿಯ ಲಹರಿಯಾಗಿ ಕಿರತೆರೆಯಲ್ಲಿ ಫೇಮಸ್ಸು ಆದರು. ಮುದ್ದಾದ ನಟನೆಯ ಮೂಲಕ ವೀಕ್ಷಕರಿಗೆ ಮನ ಸೆಳೆದ ಈಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಡು ಕರ್ನಾಟಕ ಹಾಡು ರಿಯಾಲಿಟಿ ಶೋವಿನ ನಿರೂಪಕಿಯಾಗಿ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು.

  ಅಂಕಿತಾ ಅಮರ್

  ಅಂಕಿತಾ ಅಮರ್

  ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಕೋಳಿಮರಿ ಆಲಿಯಾಸ್ ಮೀರಾ ಆಗಿ ನಟಿಸಿದ್ದ ಅಂಕಿತಾ ಅಮರ್ ಕೂಡಾ ನಿರೂಪಕಿಯಾಗಿ ಮೋಡಿ ಮಾಡಿದ ಪ್ರತಿಭೆ. ನಟನೆಯ ಹೊರತಾಗಿ ಗಾಯಕಿಯಾಗಿರುವ ಅಂಕಿತಾ ಅಮರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದ ನಿರೂಪಣೆ ಮಾಡಿದ್ದು ತಮ್ಮ ಮುದ್ದಾದ ಮಾತಿನ ಮೂಲಕ ವೀಕ್ಷಕರನ್ನು ಸೆಳೆದು ಬಿಟ್ಟಿದ್ದರು.

  ಭೂಮಿ ಶೆಟ್ಟಿ

  ಭೂಮಿ ಶೆಟ್ಟಿ

  ಕಿನ್ನರಿ ಧಾರಾವಾಹಿಯಲ್ಲಿ ಮಣಿಯಾಗಿ ನಟಿಸಿ ಐದಾರು ವರ್ಷ ವೀಕ್ಷಕರಿಗೆ ಮನರಂಜನೆ ನೀಡಿದ್ದ ಭೂಮಿ ಶೆಟ್ಟಿಯೂ ಕೂಡಾ ನಿರೂಪಕಿಯಾಗಿ ಗಮನ ಸೆಳೆದಾಕೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ ಸೀಸನ್ 3 ರ ನಿರೂಪಕಿಯಾಗಿ ಮಿಂಚಿದ್ದರು.

  ಚಂದು ಗೌಡ

  ಚಂದು ಗೌಡ

  ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾದ ಹ್ಯಾಂಡ್ ಸಮ್ ಹುಡುಗ ಚಂದು ಗೌಡ ಕೂಡಾ ನಿರೂಪಣೆ ಮೂಲಕ ಮನೆ ಮಾತಾಗಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವಾರಾಂತ್ಯ ಪ್ರಸಾರವಾಗುತ್ತಿದ್ದ ಚಾಟ್ ಕಾರ್ನರ್ ಎನ್ನುವ ವಿಶೇಷ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಚಂದು ಗೌಡ ನಟನೆಯ ಹೊರತಾಗಿ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

  English summary
  Anupama, Ankitha,Bhoomi,Chandana Actors Who Got Success Through Host, Know More.
  Monday, January 2, 2023, 18:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X