»   » 'ಅರಗಿಣಿ' ಸೀರಿಯಲ್ ಖುಷಿ 'ಗುಡುಗು' ಯಾರ ಮೇಲೆ

'ಅರಗಿಣಿ' ಸೀರಿಯಲ್ ಖುಷಿ 'ಗುಡುಗು' ಯಾರ ಮೇಲೆ

By: ಜೀವನರಸಿಕ
Subscribe to Filmibeat Kannada

ಸ್ಟಾರ್ ನೆಟ್ ವರ್ಕ್ಸ್ ಒಡೆತನದ ಸುವರ್ಣ ವಾಹಿನಿಯ 'ಅರಗಿಣಿ' ಧಾರವಾಹಿಯಲ್ಲಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಛಲೋ ಆದೀರೇನ್ರಿ ಅಂತ ಎಲ್ಲರ ಮುಖದಲ್ಲಿ ನಗುತರಿಸೋ ಚೆಲುವೆ ಖುಷಿ. ಆದ್ರೆ ಮತ್ತೇನಾದ್ರೂ ಎಡವಟ್ಟಾಯ್ತಾ? ಯಾಕೆ ಗುಡುಗ್ತಿದ್ದಾರೆ.

ಇಷ್ಟಕ್ಕೂ ಅವರು ಯಾರ ಮೇಲೆ ಗುಡುಗ್ತಿದ್ದಾರೆ ಅಂತ ಹುಡುಕೋಕೆ ಹೊರಟ್ರೆ ಸತ್ಯ ಗೊತ್ತಾಯ್ತು. ಖುಷಿ ಈಗ ಖುಷ್ ಖುಷಿಯಾಗಿ ಸಿನಿಮಾವೊಂದರಲ್ಲಿ ನಟಿಸ್ತಿದ್ದಾರೆ. ಆ ಚಿತ್ರದ ಹೆಸರು 'ಗುಡುಗು'. ಇಲ್ಲಿ ಈ ಖುಷಿಗೆ ಪವರ್ ಫುಲ್ ಪಾತ್ರವೂ ಇದೆಯಂತೆ. ಇಲ್ಲಿ ಮೂರು ಮುಖ್ಯಪಾತ್ರಗಳಿದ್ದು ಖುಷಿ ಕೂಡ ಗನ್ ಹಿಡಿದು ಗುಡುಗ್ತಾರೆ.

'Aragini' fame Khushi debuts to big screen

'ಅರಗಿಣಿ' ಧಾರವಾಹಿ ಮೂಲಕ ಜನರ ಮನಸ್ಸಿಗೆ ಹತ್ತಿರವಾದ ಈ ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ ಈಗ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಇಂತಹಾ ಪಾತ್ರ ಸಿಕ್ಕಿರೋದಕ್ಕೆ ಖುಷಿ ಖುಷಿಯಾಗಿದ್ದಾರೆ.

'Aragini' fame Khushi debuts to big screen

ಅಂದಹಾಗೆ ಈ ಗುಡುಗು ಈ ಹಿಂದೆ ಸಂತೋಷಕ್ಕೆ ಅನ್ನೋ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದ ಸರವಣದಾಸ್ ಅನ್ನೋ ನಿರ್ದೇಶಕರ ಲವ್ ಕಮ್ ಆಕ್ಷನ್ ಧಮಾಕಾ. ಸಂತೋಷಕ್ಕೆ ಸಿನಿಮಾ ಹೀರೋ ಜೀವಾ ಇಲ್ಲಿ ಖುಷಿಗೆ ನಾಯಕ. ಓಂ ಸರವಣಭವ ಪ್ರೊಡಕ್ಷನ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಈ ಚಿತ್ರದ ಅಡಿಬರಹ 'ಒನ್ ಅಂಡ್ ಓನ್ಲಿ' ಎಂಬುದು.

English summary
Suvarna channel's 'Aragini' daily soap heroine Khushi makes her Sandalwood debut with 'Gudugu'. The movie is being directed by Saravanadas.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada