»   » ಅನುಶ್ರೀ ಬಗ್ಗೆ ಕೇಳಿದಾಗ ಅಂಜಿಕೆ-ಅಳುಕಿಲ್ಲದೆ ಉತ್ತರ ಕೊಟ್ಟ ಅರ್ಜುನ್ ಜನ್ಯ.!

ಅನುಶ್ರೀ ಬಗ್ಗೆ ಕೇಳಿದಾಗ ಅಂಜಿಕೆ-ಅಳುಕಿಲ್ಲದೆ ಉತ್ತರ ಕೊಟ್ಟ ಅರ್ಜುನ್ ಜನ್ಯ.!

Posted By:
Subscribe to Filmibeat Kannada
Arjun Janya speaks about Anushree in Super Talk Time Show

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ... ಆಗುತ್ತಿರುವ 'ಸರಿಗಮಪ', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮಗಳನ್ನ ಬಿಟ್ಟೂಬಿಡದೆ ನೋಡುತ್ತಿರುವವರಿಗೆ ಅರ್ಜುನ್ ಜನ್ಯ ಹಾಗೂ ಅನುಶ್ರೀ ನಡುವಿನ 'ಕೆಮಿಸ್ಟ್ರಿ' ಹಾಗೂ 'ಕಾಲೆಳೆಯುವ ಪ್ರೋಗ್ರಾಂ' ಗೊತ್ತೇ ಇರುತ್ತೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರನ್ನ ಅನುಶ್ರೀ 'ಪ್ರೀತಿ'ಯಿಂದ ಮಾತನಾಡಿಸುವುದು... ಪ್ರಪೋಸ್ ಮಾಡುವುದು... ಡಾರ್ಲಿಂಗ್ ಎಂದು ಕರೆಯುವುದು... ಉಂಗುರ ತೊಡಿಸುವುದು... ಈ ಎಲ್ಲವೂ ತಮಾಷೆಗಾಗಿ, ಕಾರ್ಯಕ್ರಮದ ಫನ್ ಎಲಿಮೆಂಟ್ ಗಾಗಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?

ಮೊದಮೊದಲು 'ಡಾರ್ಲಿಂಗ್' ಸಂಚಿಕೆ ನೋಡಿ ಶಾಕ್ ಆಗಿದ್ದ ಅರ್ಜುನ್ ಜನ್ಯ ಪತ್ನಿ, ನಂತರ ಕಾರ್ಯಕ್ರಮದಲ್ಲಿಯೇ ಅನುಶ್ರೀ-ಅರ್ಜುನ್ ಜನ್ಯ ಬ್ರೇಕಪ್ ಆದ್ಮೇಲೆ ಖುಷಿ ಪಟ್ಟರಂತೆ.

ಅಷ್ಟಕ್ಕೂ, ಇದೆಲ್ಲ ಸ್ಕ್ರಿಪ್ಟೆಡ್ ಅಂತ ಗೊತ್ತಿರುವುದರಿಂದ ಅರ್ಜುನ್ ಜನ್ಯ ಪತ್ನಿ ಅಷ್ಟೇನು ತಲೆಗೆ ಹಾಕೊಂಡಿಲ್ಲ. ಹೀಗಾಗಿಯೇ, ಅನುಶ್ರೀ ಬಗ್ಗೆ ಯಾರು ಏನೇ ಕೇಳಿದರೂ, ಕೊಂಚ ಕೂಡ ಅಂಜಿಕೆ-ಅಳುಕು ಇಲ್ಲದೇ ಅರ್ಜುನ್ ಜನ್ಯ ಉತ್ತರ ಕೊಡುತ್ತಾರೆ. 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಆಗಿದ್ದೂ ಅದೇ.! ಮುಂದೆ ಓದಿರಿ...

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರೊಂದಿಗೆ ಗುರುಕಿರಣ್, ಗಾಯಕಿ ಚೈತ್ರಾ ಕೂಡ ಪಾಲ್ಗೊಂಡಿದ್ದರು.

ದಿಢೀರ್ ಬೆಂಕಿ ಸುತ್ತು

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಕೊನೆಯಲ್ಲಿ ಎಂದಿನಂತೆ 'ದಿಢೀರ್ ಬೆಂಕಿ' ಸುತ್ತಿಗೆ ನಿರೂಪಕ ಅಕುಲ್ ಬಾಲಾಜಿ ಚಾಲನೆ ನೀಡಿದರು. ಅದರಲ್ಲಿ ಅರ್ಜುನ್ ಜನ್ಯಗೆ ಎದುರಾದ ಪ್ರಶ್ನೆ ಇದು.....

ಬೆಳಗ್ಗೆ ಎದ್ದಾಗ...

''ನೀವು ಬೆಳಗ್ಗೆ ಎದ್ದಾಗ, ನಿಮ್ಮ ಮುಂದೆ ಅನುಶ್ರೀ ಕಾಫಿ ಕಪ್ ಹಿಡ್ಕೊಂಡ್ ನಿಂತಿದ್ರೆ, ಏನ್ ಮಾಡ್ತೀರಾ.?'' ಎಂಬ ಪ್ರಶ್ನೆಯನ್ನ ಅಕುಲ್ ಬಾಲಾಜಿ, ಅರ್ಜುನ್ ಜನ್ಯ ಮುಂದಿಟ್ಟರು.

ಮೊದಲು ಅರ್ಜುನ್ ಜನ್ಯ ಮಾಡುವುದೇನು.?

ಅಕುಲ್ ಬಾಲಾಜಿ ಪ್ರಶ್ನೆ ಕೇಳುತ್ತಿದ್ದಂತೆಯೇ, ಕೊಂಚ ಕೂಡ ಅಂಜಿಕೆ ಇಲ್ಲದೇ ''ಪಕ್ಕದಲ್ಲಿ ನನ್ನ ಹೆಂಡತಿ ಇದ್ದಾರಾ ಅಂತ ನೋಡ್ತೀನಿ'' ಎಂದರು ಅರ್ಜುನ್ ಜನ್ಯ. ಹಾಗೇ ಮುಂದುವರಿಯುತ್ತಾ....

ಹೆಂಡತಿ ಇಲ್ಲ ಅಂದ್ರೆ...

''ಹೆಂಡತಿ ಇಲ್ಲ ಅಂದ್ರೆ ಆಮೇಲೆ ಕಾಫಿ ಕುಡಿಯುತ್ತೀರಾ'' ಎಂದು ಅಕುಲ್ ಕೇಳಿದಕ್ಕೆ, ''ಕಾಫಿ ಕುಡಿಯುತ್ತೇನೆ'' ಎಂದರು ಅರ್ಜುನ್ ಜನ್ಯ.

ಹೆಂಡತಿ ಬಿಡುವುದಿಲ್ಲ

''ಹೆಂಡತಿ ಇದ್ದಾಗಲೂ ಕುಡಿಯಬೇಕು ಅಂತ ಆಸೆ ಆಗುತ್ತೆ. ಆದ್ರೆ ಬಿಡುವುದಿಲ್ಲ'' ಎಂದು ನಗುನಗುತ್ತಾ ಹೇಳಿದರು ಅರ್ಜುನ್ ಜನ್ಯ.

ಕಾಲೆಳೆಯುವುದರಲ್ಲಿ ಅಕುಲ್ ಫೇಮಸ್

ಹೇಳಿ ಕೇಳಿ ಅಕುಲ್ ಬಾಲಾಜಿ ಕಾಲೆಳೆಯುವುದರಲ್ಲಿ ಫೇಮಸ್. ಹೀಗಾಗಿ, ಅರ್ಜುನ್ ಜನ್ಯ-ಅನುಶ್ರೀ ಮ್ಯಾಟರ್ ನಲ್ಲಿ ಕಾಲೆಳೆಯಲು ಪ್ರಯತ್ನ ಪಟ್ಟರು. ಅದಕ್ಕೆ ಅರ್ಜುನ್ ಜನ್ಯ ಅಂಜಿಕೆ ಇಲ್ಲದೆ ಉತ್ತರ ಕೊಟ್ಟು ನಗೆ ಚಟಾಕಿ ಹಾರಿಸಿದರು.

English summary
Music Director Arjun Janya speaks about Anushree in Colors Super Channel's popular show Super Talk Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada