»   » 'ತಾಯಿಗೆ ತಕ್ಕ ಮಗ'ನಿಗೆ ಸಿಕ್ಕಳು ಮುದ್ದಾದ ನಾಯಕಿ

'ತಾಯಿಗೆ ತಕ್ಕ ಮಗ'ನಿಗೆ ಸಿಕ್ಕಳು ಮುದ್ದಾದ ನಾಯಕಿ

Posted By:
Subscribe to Filmibeat Kannada

'ತಾಯಿಗೆ ತಕ್ಕ ಮಗ' ಶಶಾಂಕ್ ಪ್ರೊಡಕ್ಷನ್ಸ್ ನಲ್ಲಿ ಸೆಟ್ಟೇರುತ್ತಿರುವ ಮೊದಲನೇ ಸಿನಿಮಾ. 'ಕೃಷ್ಣ ಅಜಯ್ ರಾವ್' ನಾಯಕನಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಮುದ್ದಾದ ನಾಯಕಿ ಸಿಕ್ಕಿದ್ದಾಳೆ.

'ಅಜಯ್ ರಾವ್' ಜೊತೆಯಲ್ಲಿ ಇದೇ ಮೊದಲ ಬಾರಿಗೆ ನಟಿ 'ಆಶಿಕಾ ರಂಗನಾಥ್' ಅಭಿನಯಿಸುತ್ತಿದ್ದಾರೆ. 'ಕ್ರೇಜಿ ಬಾಯ್' ಸಿನಿಮಾದ ನಂತ್ರ ಕನ್ನಡದ ಬಿಗ್ ಸ್ಟಾರ್ ಗಳ ಜೊತೆ ಅಭಿನಯಿಸುತ್ತಿರುವ ಆಶಿಕಾ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಡೀಸೆಂಟ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

 Ashika ranganath to play lead in 'Thayige thakka maga'

ಮಕ್ಕಳ ದಿನಾಚರಣೆಯ ಸ್ಪೆಷಲ್ ಆಗಿ ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ಮಾಪಕರು ಡಿಸೆಂಬರ್ ತಿಂಗಳಿಂದ ಚಿತ್ರೀಕರಣ ಶುರು ಮಾಡಲು ಮುಂದಾಗಿದ್ದಾರೆ. ನವ ನಿರ್ದೇಶಕ 'ವೇದ್ ಗುರು' ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ. 'ಶೇಖರ್ ಚಂದ್ರ' ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.

ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು 'ಎಕ್ಸ್ ಕ್ಯೂಸ್ ಮಿ' ಸಿನಿಮಾದ ನಂತ್ರ ಸುಮಲತಾ ಹಾಗೂ ಅಜಯ್ ಮತ್ತೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ತಾಯಿಗೆ ತಕ್ಕ ಮಗ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು ಡಿಸೆಂಬರ್ 15ರ ನಂತ್ರ ಆಶಿಕಾ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

English summary
Kannada Actress Ashika Ranganath to play lead in Kannada Movie 'Thayige Thakka Maga'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada