»   » ಅಮೀರ್ ಮುಂದಿಟ್ಟುಕೊಂಡು ಕನ್ನಡಿಗರ ಟೀಕಿಸಿದ ಠಾಕ್ರೆ

ಅಮೀರ್ ಮುಂದಿಟ್ಟುಕೊಂಡು ಕನ್ನಡಿಗರ ಟೀಕಿಸಿದ ಠಾಕ್ರೆ

Posted By:
Subscribe to Filmibeat Kannada
Bal Thackeray wants Satyamev Jayate in Kannada
ಮುಂಬೈ, ಮೇ. 8 : ಡಬ್ಬಿಂಗ್ ಬೇಕಾ ಬೇಡವಾ ಎಂಬ ಬಗ್ಗೆ ನಮ್ಮ ಕನ್ನಡಿಗರಲ್ಲಿಯೇ ಎರಡು ಪಂಗಡಗಳಾಗಿ, ವಾದವಿವಾದಗಳು ತಾರಕಕ್ಕೇರಿರುವ ಸಂದರ್ಭದಲ್ಲಿ ಪಕ್ಕದ ರಾಜ್ಯದಿಂದ ಕನ್ನಡಿಗರ ಪರ ಕಿಡಿಕಾರುವ ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡಬೇಕೆಂದು ಮಾತನಾಡಿದ್ದಾರೆ.

ಅವರು ಶಿವಸೇನೆ ಮುಖಂಡ 86 ವರ್ಷದ ಬಾಳಾ ಠಾಕ್ರೆ. ತಮ್ಮ ಸಾಮ್ನಾ ಪತ್ರಿಕೆಯಲ್ಲಿ ಅಮೀರ್ ಖಾನ್ ಅವರ ರಿಯಾಲಿಟಿ ಶೋ 'ಸತ್ಯಮೇವ ಜಯತೆ' ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ ಮಾಡಿ ಕನ್ನಡಿಗರಿಗೆ ದೊರೆಯುವಂತಾಗಬೇಕು ಎಂದು ವಾದಿಸಿದ್ದಾರೆ. ಭಾರತದಲ್ಲಿರುವ ಜನರ ಸಮಸ್ಯೆಗಳ ಭಂಡಾರವನ್ನು ತೆರೆದಿಡುವ ಈ ಕಾರ್ಯಕ್ರಮ ಸ್ಟಾರ್ ಪ್ಲಸ್ ಚಾನಲ್‌ನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 11ರಿಂದ 12ರವರೆಗೆ ಪ್ರಸಾರವಾಗುತ್ತದೆ.

ಬಾಳಾ ಠಾಕ್ರೆ ಅವರು ಮಂಡಿಸಿರುವ ವಾದದಲ್ಲಿ, ಕನ್ನಡಪರ ಧೋರಣೆಗಿಂತ ಬಾಲಿವುಡ್ ನಟ ಅಮೀರ್ ಖಾನ್ ಅವರ ಕಾರ್ಯಕ್ರಮ ಜನರಿಗೆ ದೊರೆಯಬೇಕು ಎಂಬ ಅಂಶಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಡಬ್ಬಿಂಗ್ ವಿರೋಧಿಸುತ್ತಿರುವ ಸಿನೆಮಾ ಇಂಡಸ್ಟ್ರಿಯ ಜನರನ್ನು ಠಾಕ್ರೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮೀರ್ ಖಾನ್ ಅವರ ಚಿತ್ರ ಮತ್ತು ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಮತ್ತು ದೇಶದ ಬಗ್ಗೆ ಪ್ರೀತಿ ಮೆರೆದಾಡುತ್ತಿರುತ್ತದೆ ಎಂದು ಹಾಡಿ ಹೊಗಳಿರುವ ಠಾಕ್ರೆ, ದೇಶಪ್ರೇಮವನ್ನು ಬದಿಗಿಟ್ಟು ಡಬ್ಬಿಂಗ್ ವಿರೋಧಿಸುತ್ತಿರುವ ಕನ್ನಡ ಚಿತ್ರರಂಗದವರು ಸ್ವಾರ್ಥ ಸಾಧಿಸುತ್ತಿದ್ದಾರೆ ಎಂದು ತೆಗಳಿದ್ದಾರೆ. ಡಬ್ಬಿಂಗ್ ವಿರೋಧದ ಕಾರಣ ಮುಂದಿಟ್ಟುಕೊಂಡು ಠಾಕ್ರೆ ಅವರು ಕರ್ನಾಟಕದ ಧೋರಣೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.

English summary
Shiv Sena chief Bal Thackeray has come in support of Aamir Khan and wants his reality show Satyamev Jayate to dubbed to Kannada and telecast in Karnataka. In this pretext Thackeray has lambasted Kannada film industry, which is opposing dubbing.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada