»   » 'ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!

'ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!

Posted By:
Subscribe to Filmibeat Kannada

ಅದು 1973.......ನಟ ಸಾರ್ವಭೌಮ ರಾಜ್ ಕುಮಾರ್ ಅವರ 150ನೇ ಚಿತ್ರಕ್ಕೆ ಸಾಕ್ಷಿಯಾದ ವರ್ಷ. ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಡಾ.ರಾಜ್ ಮತ್ತು ವಿಷ್ಣುವರ್ಧನ್ ಜೊತೆಯಾಗಿ ನಟಿಸಿದ ಏಕೈಕ ಚಿತ್ರ 'ಗಂಧದಗುಡಿ' ಬಂದ ಸುವರ್ಣ ವರ್ಷ. ಆ ಚಿತ್ರದ ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ನಲ್ಲಿ ಅಚಾನಕ್ ಆಗಿ ಬಂದೂಕಿನಿಂದ ಗುಂಡು ಸಿಡಿದ ಘಟನೆ ನಡೆಯಿತು.

ದಶಕಗಳ ಹಿಂದೆ ಆಕಸ್ಮಿಕವಾಗಿ ಹಾರಿದ ಬುಲೆಟ್ ಘಟನೆಯ ನಂತರ ಈ ಇಬ್ಬರು ಮೇರು ನಟರು ತಮ್ಮ ಜೀವಿತಾವಧಿಯಲ್ಲಿ ಮತ್ತೆ ಜೊತೆಯಾಗಿ ನಟಿಸಲೇ ಇಲ್ಲ. ಆದರೂ, ರಾಜ್ ಮತ್ತು ವಿಷ್ಣು ಅಭಿಮಾನಿಗಳ ಮುಂದೆ ಸಹೋದರರಂತೆ ಬದುಕಿ ಚಿತ್ರೋದ್ಯಮಕ್ಕೆ ದಾರಿದೀಪವಾಗಿದ್ದರು.['ವೀಕೆಂಡ್ ವಿತ್ ರಮೇಶ್'ನಲ್ಲಿ ಈ ವಾರ ಇಬ್ಬರು ದಿಗ್ಗಜರು]

ಆದ್ರೆ, ಈ ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ಕಥೆಯನ್ನಿಟ್ಟುಕೊಂಡು ಎಳೆದಾಡುತ್ತಾ ಬಂದರು. ಅಷ್ಟಕ್ಕೂ ಅಂದು ನಡೆದ ಘಟನೆ ಏನು? ಈ ಘಟನೆ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು? ಮುಂದೆ ಓದಿ.....

'ವೀಕೆಂಡ್'ನಲ್ಲಿ ವಿಷ್ಣು ನೆನಪು ಮೆಲುಕು!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಸಾಕಷ್ಟು ವಿಷಯಗಳನ್ನ ಭಾರತಿ ಅವರು ಮೆಲಕು ಹಾಕಿದ್ದಾರೆ. ಭಾರತಿ ಅವರ ಸಾಧನೆಯ ಹಾದಿ ಜೊತೆ ವಿಷ್ಣುವರ್ಧನ್ ಅವರ ನೋವು-ಸಂತೋಷಗಳ ಬಗ್ಗೆ ಹಲವು ಸಂಗತಿಗಳನ್ನ ಹಂಚಿಕೊಂಡಿದ್ದರು.['ವೀಕೆಂಡ್ ವಿತ್ ರಮೇಶ್'ನಲ್ಲಿ ನಟಿ ಭಾರತಿ: ವಿಷ್ಣು ಅಭಿಮಾನಿಗಳು ಗರಂ ಆಗಿದ್ಯಾಕೆ?]

ಭಾವುಕರಾದ ಭಾರತಿ!

'ಗಂಧದ ಗುಡಿ' ಚಿತ್ರದ ವೇಳೆ ಆದ ಘಟನೆಯ ಬಗ್ಗೆ ರಮೇಶ್ ಅರವಿಂದ್ ಅವರು ಕೇಳಿದಾಗ ಈ ನಟಿ ಭಾರತಿ ವಿಷ್ಣುವರ್ಧನ್ ಅವರು ಭಾವುಕರಾದರು. ಅಂದು ಏನಾಯಿತು? ಯಾಕಾಯಿತು ಎಂದು ಒಂದು ಕ್ಷಣ ಯೋಚನೆ ಮಾಡುತ್ತಾ ಕಂಬನಿ ಮಿಡಿದರು.

ಅವನೊಬ್ಬನಿಗೆ ಮಾತ್ರ ಗೊತ್ತು!

ಆ ಪ್ರಶ್ನೆಗೆ ಉತ್ತರಿಸಿದ ಭಾರತಿ ವಿಷ್ಣುವರ್ಧನ್ ಅವರು '' ಆ ಘಟನೆ ಯಾಕೆ ನಡೆಯಿತು? ಯಾಕೆ ಹೀಗಾಯಿತು? ಎಂಬುದು ಅವನೊಬ್ಬನಿಗೆ ಮಾತ್ರ ಗೊತ್ತು?'' ಎಂದು ಆ ದೇವರ ಕಡೆ ಕೈ ತೋರಿಸಿದರು.[ಕನ್ನಡ ನಟಿ ಭಾರತಿ ವಿಷ್ಣುವರ್ಧನ್ ಗೆ ಪದ್ಮಶ್ರೀ ಪ್ರಶಸ್ತಿ]

1973 ರಲ್ಲಿ ತೆರೆಕಂಡಿದ್ದ 'ಗಂಧದ ಗುಡಿ'

ಎಂ.ಪಿ.ಶಂಕರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ 'ಗಂಧದ ಗುಡಿ' ಚಿತ್ರದಲ್ಲಿ ಡಾ.ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಅಭಿನಯಿಸಿದ್ದರು. ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ರೆ, ವಿಷ್ಣು ಖಳನಾಯಕನಾಗಿ ಬಣ್ಣ ಹಚ್ಚಿದ್ದರು. ಕಲ್ಪನಾ ನಾಯಕಿಯಾಗಿ ಆಗಿ ಅಭಿನಯಿಸಿದ್ದರು. ವಿಜಯ್ ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದರು.

ಶನಿವಾರ ಮಿಸ್ ಮಾಡ್ದೆ ನೋಡಿ!

'ಗಂಧದ ಗುಡಿ' ಚಿತ್ರದ ಸಮಯದಲ್ಲಿ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರ ನಡುವೆ ಆದ ಆ ಒಂದು ಘಟನೆ ಬಗ್ಗೆ ಭಾರತಿ ಅವರು ಏನ್ ಹೇಳಿದ್ದಾರೆ ಎಂಬುದನ್ನ ಪೂರ್ತಿ ತಿಳಿದುಕೊಳ್ಳಲು ಈ ಶನಿವಾರ ಪ್ರಸಾರವಾಗುವ ಕಾರ್ಯಕ್ರಮವನ್ನ ಮಿಸ್ ಮಾಡ್ದೆ ನೋಡಿ. 'ಗಂಧದಗುಡಿ' ಘಟನೆ ಬಗ್ಗೆ ಮಾತನಾಡಿರುವ ಪ್ರೋಮೋ ನೋಡಿ.

English summary
Kannada Actress Bharathi Vishnuvardhan Talk About GandadaGudi Incident in Weekend With Ramesh Zee Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada