»   » ಗುರುವಿಗೆ ಬಕರಾ ಮಾಡಲು ಹೋಗಿ ಪೆಕರಾ ಆದವರು

ಗುರುವಿಗೆ ಬಕರಾ ಮಾಡಲು ಹೋಗಿ ಪೆಕರಾ ಆದವರು

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ನೀತೂ ಅವರದು ಮಾತಿಲ್ಲ, ಕಥೆಯಿಲ್ಲ. ಅವರದು ಒಂಥರಾ ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ ಎಂಬಂತಾಗಿದೆ. ಮನೆಯ ಸದಸ್ಯರ ಆಟ, ಬೈದಾಟ ನೋಡುತ್ತಾ ರಹಸ್ಯ ಕೋಣೆಯಲ್ಲಿ ಮೆತ್ತನೆಯ ಹಾಸಿಗೆ ಮೇಲೆ ಉರುಳಾಡುವುದು ಬಿಟ್ಟರೆ ಇನ್ನೇನು ಇಲ್ಲ.

ಇದೇನು ನೀತೂಗೆ ಬಿಗ್ ಬಾಸ್ ಕೊಟ್ಟ ವರವೋ ಶಾಪವೋ ಗೊತ್ತಾಗುತ್ತಿಲ್ಲ. ಮೂವತ್ತೆಂಟನೇ ದಿನವೂ ಲಗ್ಜುರಿ ಬಜೆಟ್ ಟಾಸ್ಕ್ ಮುಂದುವರೆಯಿತು. ಆದರೆ ಎಲ್ಲರ ಗಮನಸೆಳೆಯುತ್ತಿರುವ ಗುರುಪ್ರಸಾದ ಯಾಕೋ ಏನೋ ಸ್ವಲ್ಪ ಡಲ್ ಆಗಿದ್ದರು.

ಗುರುಪ್ರಸಾದ್ ಬಂದ ಮೇಲೆ ಅಸಲಿ ಮುಖಗಳಿಗೆ ಬಣ್ಣ ಬರುತ್ತಿದೆ. ಸುಖಾ ಸುಮ್ಮನೆ ಕಿತ್ತಾಡುವುದು, ಮತ್ತೆ ಒಂದಾಗುವುದು. ಇಷ್ಟು ದಿನ ಕಣ್ಣೀರು ಸುರಿಸಿ ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದವರು ಈಗ ಬೇರೆ ವಿಧದಲ್ಲಿ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮೂವತ್ತೆಂಟನೇ ದಿನ ಏನು ನಡೀತು?

ಬಿಗ್ ಬಾಸ್ ಮನೆಗೆ ಬಂದ ಸೇಡಿನ ಹಕ್ಕಿ

ಮೂವತ್ತೆಂಟನೇ ದಿನ ಬೆಳಗ್ಗೆ ಸವ್ವಾಲಿಗೂ ಕವ್ವಾಲಿಗೂ ಸೈಯಾರೆ ಸೈಯಾ ಎಂಬ ಹಾಡಿನ ಮೂಲಕ ಆರಂಭ. ಮನೆಯಲ್ಲಿ ಈ ಬಾರಿಯೂ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಸೃಜನ್ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ಹರ್ಷಿಕಾ ಮನೆಗೆ ಬಂದಂತಿದೆ.

ಮತ್ತೆ ಮುಠಾಳ ಎಂದ ಗುರುಪ್ರಸಾದ್

ಈ ಬಗ್ಗೆಯೇ ಆದಿ ಲೋಕೇಶ್ ಜೊತೆಗೂ ಚರ್ಚಿಸಿದರು. ಈ ಬಾರಿ ಸೃಜನ್ ಗೆ ಡೈರೆಕ್ಟ್ ಆಗಿ ನಾಮಿನೇಟ್ ಮಾಡುವ ಅವಕಾಶ ಸಿಕ್ಕರೆ ಖಂಡಿತ ನನ್ನನ್ನು ಅವನು ಬಿಡಲ್ಲ ಎಂದು ಗುಸುಗುಟ್ಟಿದರು ಆದಿ ಕಿವಿಯಲ್ಲಿ. ಈ ಬಾರಿ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಅಕುಲ್ ಹೇಳಿದಾಗ, ತಲೆ ಬೋಳಿಸಿಕೊಳ್ಳುವುದು ಯಾವ ಮುಠಾಳ ಬೇಕಾದರೂ ಮಾಡ್ತಾನೆ ಎಂದರು ಗುರು.

ಗುರುಗೂ ಸೃಜನ್ ಗೂ ತಂದಿಡುವ ಪ್ರಯತ್ನ

ಇದಕ್ಕೆ ಕ್ಯಾತೆ ತೆಗೆದ ಆದಿ ಲೋಕೇಶ್ ಹಾಗಿದ್ದರೆ ಸೃಜನ್ ಮುಠಾಳನಾ ಎಂದು ಕೇಳಿದರು. ಅದಕ್ಕೆ ಗುರುಪ್ರಸಾದ್ ಏನೋ ಸಮಜಾಯಿಷಿಕೊಟ್ಟರಾದರೂ ಆದಿ ಮಾತ್ರ ಅದಕ್ಕೇ ದೊಡ್ಡದು ಮಾಡಲು ಹೊರಟರು. ಮುಠಾಳ ಎಂದಿದ್ದನ್ನು ಸೃಜನ್ ಕಿವಿಗೂ ಹಾಕಿದರು.

ಮುಠಾಳ ಅನ್ನೋದಕ್ಕೆ ನೀವ್ಯಾವೋನೋ ಲೇಯ್

ಸೃಜನ್ ಸಹ ಈ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೇ ಇದ್ದಾಗ ಬೇಸರಗೊಂಡ ಆದಿ ಲೋಕೇಶ್, ನೆನ್ನೆ ಮೊನ್ನೆ ಬಂದುಬಿಟ್ಟು ಮುಠಾಳ ಅನ್ನೋದಕ್ಕೆ ನೀವ್ಯಾವೋನೋ ಲೇಯ್ ಎಂದು ತನ್ನಷ್ಟಕ್ಕೆ ತಾನೇ ಗೊಣಗಿಕೊಂಡ. ಈ ಬಾರಿ 'ಬಿ' ತಂಡ ಒಡ್ಡುವ ಸವಾಲಿಗೆ 'ಎ' ತಂಡ ಉತ್ತರಿಸಬೇಕಾಗಿತ್ತು.

ಬಾಯಿಬಡುಕನಂತಾಗಿರುವ ಅಕುಲ್ ಬಾಲಾಜಿ

ಬಾಯಿಬಡುಕನಂತೆ ಮಾತನಾಡುತ್ತಿದ್ದ ಅಕುಲ್ ಬಾಯಿಗೆ ಗುರುಪ್ರಸಾದ್ ಪ್ಲಾಸ್ಟರ್ ಹಾಕಿದ ನೀನು ಸ್ವಲ್ಪ ಹೊತ್ತು ದಯವಿಟ್ಟು ಮಾತನಾಡಬೇಡಪ್ಪ. ಇದು ನನ್ನ ವಿನಂತಿ ಎಂದು ಭಾವಿಸು ಎಂದರು. ಆದರೂ ಸ್ವಲ್ಪ ಹೊತ್ತಿಗೆ ಆ ಪ್ಲಾಸ್ಟರ್ ಎಲ್ಲಿಗೆ ಹೋಯಿತೋ ಏನೋ ಟಾಸ್ಕ್ ವಿಚಾರವಾಗಿ ಅಕುಲ್ ಮತ್ತು ಸೃಜನ್ ನಡುವೆ ಮಾತಿನ ಚಕಮಕಿ ನಡೆಯಿತು.

ಆದಿಗೆ ಎರಡೂ ಕಣ್ಣು ಕಾಣುತ್ತದೆ ಎಂದ ಅಕುಲ್

ಇನ್ನೊಂದು ಕಡೆ ಸಂತೋಷ್ ಜೊತೆ ಮಾತನಾಡುತ್ತಾ ಆದಿ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು ಅಕುಲ್ ಬಾಲಾಜಿ. ಆ ನನ್ನ ಮಗನಿಗೆ ಎರಡೂ ಕಣ್ಣು ಕಾಣುತ್ತದೋ. ಸುಮ್ಮಸುಮ್ಮನೆ ನಾಟಕ ಮಾಡ್ತಿದ್ದಾನೆ. ಪಾಪ ಅನುಳನ್ನು ಸಿಸ್ಟರ್ ಎಂದು ಕರೆಯುತ್ತಾನೆ. ಇನ್ನೊಂದು ಕಡೆ ಅವಳಿಗೆ ಬತ್ತಿ ಇಡುತ್ತಾನೆ ಎಂದು ಹೇಳಿದರು.

ಗುರುಪ್ರಸಾದ್ ರನ್ನು ಬಕರಾ ಮಾಡುವ ಪ್ರಯತ್ನ

ಗುರುಪ್ರಸಾದ್ ಮುಂದೆ ಮಯೂರ್ ಮತ್ತು ಸೃಜನ್ ಸುಮ್ಮನೆ ಕಿತ್ತಾಡುವ ನಾಟಕ ಮಾಡಿದರು. ಅವರಿಬ್ಬರೂ ಜೋರಾಗಿ ಮಾತನಾಡುತ್ತಾ ಒಬ್ಬರಿಗೊಬ್ಬರು ಕೈ ಮಾಡುವಂತೆ ನಡೆದುಕೊಂಡರು. ಆದರೂ ಗುರುಪ್ರಸಾದ್ ಕಿಂಚಿತ್ತೂ ವಿಚಲಿತರಾಗದೆ ಎಲ್ಲವನ್ನೂ ನೋಡುತ್ತಿದ್ದರು.

ಮನೆಯಲ್ಲಿ ಕಡೆಗೆ ಪೆಕರಾ ಆದವರು

ಗುರುಪ್ರಸಾದ್ ಅವರನ್ನು ಬಕರಾ ಮಾಡಲು ಹೋಗಿ ಕಡೆಗೆ ಅವರೇ ಪೆಕರಾ ಆದಂತಾಯಿತು. ಒಟ್ಟಾರೆಯಾಗಿ ತಮಾಷೆಯಾಗಿ ಶುರುವಾದ ಕಿತ್ತಾಟ ಅದ್ಯಾವಾಗ ಸೀರಿಯಸ್ ಆಗುತ್ತದೋ ಗೊತ್ತಿಲ್ಲ. ಸದ್ಯಕ್ಕೆ ಮನೆಯಲ್ಲಿ ಎಲ್ಲವೂ ಕೂಲ್ ಕೂಲ್.

English summary
Here is the Bigg Boss Kannada 2 day 38th highlights. Luxuary budget task won by Srujan Lokesh lead 'B' team, Akul Balaji lead 'A' team fails to win tha task.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada