»   » ಸೃಜನ್ ಮತ್ತು ಹರ್ಷಿಕಾ ನಡುವಿನ ಹಗೆತನಕ್ಕೆ ಬಿತ್ತು ತೆರೆ

ಸೃಜನ್ ಮತ್ತು ಹರ್ಷಿಕಾ ನಡುವಿನ ಹಗೆತನಕ್ಕೆ ಬಿತ್ತು ತೆರೆ

By: ಉದಯರವಿ
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಸಮಯ ಉರುಳುತ್ತಾ ಉರುಳುತ್ತಾ ಈಗ ಮೂವತ್ತೊಂಬತ್ತನೇ ದಿನಕ್ಕೆ ಅಡಿಯಿಟ್ಟಿದೆ. ಆದರೆ ಮನೆಯ ಸದಸ್ಯರ ನಡುವೆ ಇನ್ನೂ ಹೊಂದಾಣಿಕೆ ಸರಿಯಾಗಿ ಕಾಣುತ್ತಿಲ್ಲ. ಕೆಲವರು ಒಂದು ಗುಂಪಿಗೆ ಸೀಮಿತರಾದರೆ ಇನ್ನಷ್ಟು ಮಂದಿ ಕೆಲವರ ಜೊತೆ ಮಾತ್ರ ಬೆರೆಯುತ್ತಿದ್ದಾರೆ.

ಸೃಜನ್ ಅವರು ಡೈರೆಕ್ಟ್ ಆಗಿ ನಾಮಿನೇಟ್ ಮಾಡಿದ ಕಾರಣ ತಾನು ಮನೆಯಿಂದ ಹೊರಹೋಗಬೇಕಾಯಿತು ಎಂದು ಇಷ್ಟು ದಿನ ಹಗೆ ಸಾಧಿಸುತ್ತಿದ್ದ ಹರ್ಷಿಕಾ ಇಂದು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು.

ಇಬ್ಬರ ನಡುವಿನ ಸ್ನೇಹಸಂಬಂಧವನ್ನು ಮತ್ತೆ ಬೆಸೆಯುವ ಪ್ರಯತ್ನವನ್ನು ಆದಿ ಲೋಕೇಶ್ ಮಾಡಿದರು. ಆ ಕೆಲಸದಲ್ಲಿ ಅವರು ಯಶಸ್ವಿಯೂ ಆದರು. ಈ ವಾರದ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ನೋಡೋಣ ಬನ್ನಿ.

ಆದಿ ಲೋಕೇಶ್ ಮಧ್ಯಸ್ಥಿಕೆಯಲ್ಲಿ ಒಂದಾದ ಜೋಡಿ

ಸಾದಾ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದ ಸೃಜನ್ ಮತ್ತು ಹರ್ಷಿಕಾ ಇಂದು ಆದಿ ಲೋಕೇಶ್ ಅವರ ಮಧ್ಯಸ್ಥಿಕೆಯಲ್ಲಿ ಒಂದಾದರು. ಇಬ್ಬರ ನಡುವಿನ ಶೀತಲ ಸಮರಕ್ಕೆ ಇಂದು ತೆರೆಬಿತ್ತು.

ಹಳೆಯ ಕಹಿ ಘಟನೆಗಳನ್ನು ಮರೆತರು

ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಸೃಜನ್ ಹಾಗೂ ಹರ್ಷಿಕಾ ಒಂದಾದರು. ಹಳೆಯ ಕಹಿ ಘಟನೆಗಳನ್ನು ಮರೆತರು. ತಾನು ಬೇಕಂತ ಯಾವತ್ತೂ ಒಬ್ಬರಿಗೆ ನೋವುಂಟು ಮಾಡಿಲ್ಲ. ನೀವು ಸೇಫ್ ಆಗಿ ಇರುತ್ತೀರಾ ಎಂದು ನಾನು ನಾಮಿನೇಟ್ ಮಾಡಿದ್ದು ನಿಜ ಎಂದರು.

ಹೊಸ ಸ್ನೇಹ ಸಂಬಂಧಕ್ಕೆ ಇಬ್ಬರೂ ನಾಂದಿ

ಹರ್ಷಿಕಾ ಅವರನ್ನು ತಬ್ಬಿಕೊಂಡು ಕಡೆಗೆ ಹೊಸ ಸ್ನೇಹ ಸಂಬಂಧಕ್ಕೆ ಇಬ್ಬರೂ ನಾಂದಿ ಹಾಡಿದರು. ಹರ್ಷಿಕಾ ರೀ ಎಂಟ್ರಿ ಮೂಲಕ ಮನೆಯಲ್ಲಿ ಹೊಸ ಸಂಚಲನ ಮೂಡಿದೆ. ಮೊದಲೆಲ್ಲಾ ಮೂಡಿಯಾಗಿರುತ್ತಿದ್ದ ಹರ್ಷಿಕಾ ರೀ ಎಂಟ್ರಿ ಮೂಲಕ ಸಖತ್ ಖುಷಿಯಾಗಿದ್ದಾರೆ.

ರೋಹಿತ್ ಅವರ ಕ್ಯಾಪ್ಟನ್ ಅವಧಿ ಮುಕ್ತಾಯ

ಇನ್ನೊಂದು ಕಡೆ ರೋಹಿತ್ ಅವರ ಕ್ಯಾಪ್ಟನ್ ಅವಧಿ ಮುಕ್ತಾಯವಾಯಿತು. ಈ ಕೂಡಲೇ ನಿಮ್ಮ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೊರಹೊಗಬೇಕು ಎಂದು ಬಿಗ್ ಬಾಸ್ ಸೂಚಿಸುತ್ತಾರೆ ಎಂದಾಗ ಅವರ ಮುಖ ಚಿಕ್ಕದಾಯಿತು.

ಸಂತೋಷ್, ದೀಪಿಕಾ, ಸೃಜನ್ ನಡುವೆ ಹೊಸ

ಈ ವಾರದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳಾಗಿ ಸಂತೋಷ್, ದೀಪಿಕಾ, ಸೃಜನ್ ಮತ್ತು ಶ್ವೇತಾ ಆಯ್ಕೆಯಾದರು. ಈ ವಾರದ ಹೊಸ ಕ್ಯಾಪ್ಟನ್ ಸ್ಪರ್ಧೆಗೆ ಶ್ವೇತಾ ಹೊರತುಪಡಿಸಿ ಉಳಿದ ಮೂವರ ನಡುವೆ ಸ್ಪರ್ಧೆ ನಡೆಯಿತು.

ಹೊಸ ಕ್ಯಾಪ್ಟನ್ ಆಗಿ ಸಂತೋಷ್ ಆಯ್ಕೆ

ಸಂತೋಷ್, ದೀಪಿಕಾ ಮತ್ತು ಸೃಜನ್ ನಡುವೆ ಸ್ಪರ್ಧೆ ನಡೆಯಿತು. ಬಹುತೇಕ ಮಂದಿ ಸಂತೋಷ್ ಹೆಸರನ್ನು ಸೂಚಿಸಿದರು. ಎಲ್ಲರ ಆಯ್ಕೆಯಂತೆ ಸಂತೋಷ್ ಅವರು ಈ ಬಾರಿ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾದರು.

ಸೃಜನ್ ಬಗ್ಗೆ ಗುರುಗಳ ಕಂಪ್ಲೇಂಟ್

ಸೃಜನ್ ಅವರು ನನ್ನನ್ನು ಬೇಕೆಂದೇ ಟಾಸ್ಕ್ ಗಳಲ್ಲಿ ತಡೆದರು ಎಂದು ಸಂತೋಷ್ ಜೊತೆ ಗುರು ಪ್ರಸಾದ್ ಚರ್ಚೆಸಿದರು. ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆಯಾಗಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಕಾ ಪ್ಲಾನ್ ಪ್ರಕಾರ ಕೆಲಸಗಳನ್ನು ಆಯೋಜಿಸಲಾಗಿದೆ.

ರಹಸ್ಯ ಕೋಣೆಯಲ್ಲಿ ನೀತೂ ನರಳಾಟ

ಇನ್ನೊಂದು ಕಡೆ ರಹಸ್ಯ ಕೋಣೆಯಲ್ಲಿ ಕುಳಿತ ನೀತೂ ಅವರಿಗೆ ಮನೆಯ ಸದಸ್ಯರು ಅವರ ಬಗ್ಗೆ ಏನೇನು ಹೇಳುತ್ತಾರೆ ಎಂಬ ವಿಡಿಯೋ ತುಣುಕು ತೋರಿಸಲಾಯಿತು. ಇದಲ್ಲೆವನ್ನೂ ನೋಡಿ ನೀತೂಗೆ ಮನೆಯವರ ರಹಸ್ಯಗಳು ಬಯಲಾಗಿವೆ.

English summary
Harshika Poonacha and Srujan Lokesh finally patch up in Bigg Boss Kannada 2. Both are finally becomes friends. Here are the day 39th highlights.
Please Wait while comments are loading...