For Quick Alerts
ALLOW NOTIFICATIONS  
For Daily Alerts

  ರಹಸ್ಯ ಟಾಸ್ಕ್ ನ ಗುಟ್ಟು ಒಡೆದ ಗುರುಪ್ರಸಾದ್

  By ಉದಯರವಿ
  |

  ಬಿಗ್ ಬಾಸ್ ಕೊಟ್ಟಿರುವ ರಹಸ್ಯ ಟಾಸ್ಕ್ ನಂತೆ ಅನುಪಮಾ ಭಟ್ ಅವರು ಪ್ರೇತಾತ್ಮ ತಮ್ಮನ್ನು ಕಾಡುತ್ತಿದೆ ಎಂದು ಮನೆಯ ಸದಸ್ಯರನ್ನು ನಂಬಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಸೃಜನ್ ಅವರಂತೂ ನಾನೇನು ತಪ್ಪು ಮಾಡಿಲ್ಲ. ನನ್ನ ಪಾಡಿಗೆ ನಾನು ಮಲಗಿದ್ದೆ. ಇವಳು ನೋಡಿದರೆ ನನ್ನನ್ನು ಹೊಡೆದ ಎನ್ನುತ್ತಿದ್ದಾಳೆ ಎಂದು ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದ್ದಾರೆ.

  ನನ್ನ ಕೆನ್ನೆಗೆ ಹೊಡೆದ ಮತ್ತು ಕೈಯನ್ನು ಹಿಡಿದು ಎಳೆದ ಅನುಪಮಾ ಅವರು ಮನೆಯ ಸದಸ್ಯರನ್ನು ನಂಬಿಸಿದ್ದಾರೆ. ಇದಕ್ಕೆಲ್ಲಾ ನೆಗಟೀವ್ ಥಾಟ್ಸ್ ಕಾರಣ. ಮಹಿಳೆಯರಿಗೆ ರಕ್ತಹೀನತೆಯಿಂದಲೂ ಈ ರೀತಿಯ ಸಮಸ್ಯೆಗಳು ಬರುತ್ತವೆ. ಅದಕ್ಕೆ ನಾನು ಬಾಲಯೇಸುವಿನ ಕ್ರಾಸ್ ಮಾಡಿಕೊಡುತ್ತೇನೆ. ಅದನ್ನು ಹಾಕಿಕೋ ನಿನಗೆ ಎಲ್ಲವೂ ಸರಿಹೋಗುತ್ತದೆ ಎಂದು ಅನುಪಮಾಗೆ ಗುರುಪ್ರಸಾದ್ ಧೈರ್ಯ ತುಂಬಿದರು.

  ಈ ಪ್ರೇತಾತ್ಮದ ಟಾಸ್ಕ್ ನಿಂದ ಬಿಗ್ ಬಾಸ್ ಮನೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೆ. ವೀಕ್ಷಕರಿಗೆ ಮಾತ್ರ ಭರ್ಜರಿ ಮನರಂಜನೆ ಸಿಕ್ಕಿದೆ. ಅನುಪಮಾ ಅವರ ಅಭಿನಯಕ್ಕೆ ಮನೆಯ ವೀಕ್ಷಕರು ಫಿದಾ ಆಗಿದ್ದಾರೆ. ಬನ್ನಿ ನೋಡೋಣ ಎಪ್ಪತ್ತೊಂಬತ್ತನೇ ದಿನ ಏನು ನಡೀತು ಎಂಬುದನ್ನು.

  ತಲೆದಿಂಬಿನ ಹತ್ತಿರ ಮೆಣಸಿನಕಾಯಿ ಇಟ್ಟುಕೋ

  ಅನುಪಮಾಗೆ ಕಾಡುತ್ತಿರುವ ಪ್ರೇತಾತ್ಮಕ್ಕೆ ಒಬ್ಬೊಬ್ಬರು ಒಂದೊಂದು ಪರಿಹಾರ ಸೂಚಿಸಿದರು. ಸೃಜನ್ ಅವರು ಮಾತನಾಡುತ್ತಾ, ರಾತ್ರಿ ಹೊತ್ತು ಮೆಣಸಿನಕಾಯಿ ತಲೆದಿಂಬಿನ ಬಳಿ ಇಟ್ಟುಕೊಂಡು ಮಲಗು ಎಲ್ಲವೂ ಸರಿಹೋಗುತ್ತದೆ. ಯಾವ ದೆವ್ವಾನೂ ಬರಲ್ಲ ಎಂದರು.

  ಪ್ಲೀಸ್ ಬಿಗ್ ಬಾಸ್ ಈ ಟಾಸ್ಕ್ ನಿಲ್ಲಿಸಿ

  ಇವರೆಲ್ಲರ ಆತ್ಮೀಯತೆ ಹಾಗೂ ತಾವು ಹೇಳುತ್ತಿರುವ ಪ್ರೇತಾತ್ಮವನ್ನು ನಂಬಿರುವ ಬಗ್ಗೆ ಅನುಪಮಾ ಅವರಿಗೆ ಸಿಕ್ಕಾಪಟ್ಟೆ ನೋವಾಗಿತ್ತು. ನಾನು ಏನು ಹೇಳಿದರೂ ನಂಬುತ್ತಿದ್ದಾರೆ. ಪ್ಲೀಸ್ ಬಿಗ್ ಬಾಸ್ ಈ ಟಾಸ್ಕ್ ನಿಲ್ಲಿಸಿ. ಇನ್ನು ತಮ್ಮಿಂದ ನಾಟಕ ಮಾಡಲು ಆಗಲ್ಲ ಎಂದು ವಿನಂತಿಸಿಕೊಂಡರು.

  ಇನ್ನು ಎಮೋಷನಲಿ ಫೂಲ್ ಮಾಡಲು ಸಾಧ್ಯವಿಲ್ಲ

  ಎಲ್ಲರನ್ನೂ ಬಕರ ತರಹ ಫೂಲ್ ಮಾಡುವುದು ಟಾಸ್ಕ್ ನಿಜಕ್ಕೂ ನನಗೆ ಬೇಡ. ಈ ಮಟ್ಟದಲ್ಲಿ ಎಮೋಷನಲ್ ಫೂಲ್ ಮಾಡಲು ನನಗೆ ಇಷ್ಟವಿಲ್ಲ ಎಂದು ಬಿಗ್ ಬಾಸ್ ಕ್ಯಾಮೆರಾ ಮುಂದೆ ಗೋಗರೆದರು ಅನುಪಮಾ. ಗುರುಪ್ರಸಾದ್ ಅವರು ಇನ್ನೊಂದು ಸಲಹೆಯನ್ನೂ ಕೊಟ್ಟರು ತುಳಸಿ ಗಿಡ ಮನೆಯಲ್ಲಿ ನೆಟ್ಟು ಬಿಟ್ರೆ ಯಾವುದೇ ನೆಗಟೀವ್ ಎನರ್ಜಿ ಬರಲ್ಲ ಎಂದರು.

  ಹಂಡ್ರಡ್ ಪರ್ಸೆಂಟ್ ರಹಸ್ಯ ಟಾಸ್ಕ್ ಎಂದ ಗುರು

  ಇನ್ನೊಂದು ಕಡೆ ಅನುಪಮಾ ಅವರಿಗೆ ನಿಜಕ್ಕೂ ಸಮಸ್ಯೆಯಾಗಿದೆಯೇ ಅಥವಾ ಇದು ನಾಟಕಾನಾ ಎಂದು ಗುರುಪ್ರಸಾದ್ ಅನುಮಾನ ವ್ಯಕ್ತಪಡಿಸಿದರು. ಅವರು ಶ್ವೇತಾ ಜೊತೆ ಮಾತನಾಡುತ್ತಾ, ಇದು ಹಂಡ್ರಡ್ ಪರ್ಸೆಂಟ್ ರಹಸ್ಯ ಟಾಸ್ಕ್ ಎಂದು ಹೇಳಿದರು. ಅದರಂತೆ ಅವಳು ನಾಟಕ ಆಡುತ್ತಿದ್ದಾಳೆ.

  ಪ್ರೇತಾತ್ಮ ಗುಟ್ಟು ಹೊಡೆದ ಗುರುಪ್ರಸಾದ್

  ನಾನು ಅವಳಿಗೆ ಮೂರೇ ಮೂರು ಪ್ರಶ್ನೆ ಕೇಳ್ತೀನಿ ಅದಕ್ಕೆ ಉತ್ತರ ಕೊಡಲೇಬೇಕು. ಇಡೀ ಕರ್ನಾಟಕವೇ ಈ ಕಾರ್ಯಕ್ರಮ ನೋಡುತ್ತಿದೆ. ಅನುಪಮಾ ಅವರಿಗೆ ಏನಾದರೂ ಮಾನಸಿಕೆ ಅಸ್ವಸ್ಥತೆ ಇದೆಯಾ? ಇಷ್ಟೆಲ್ಲಾ ಆದರೂ ಯಾಕೆ ವೈದ್ಯರನ್ನು ಕರೆಯಲಿಲ್ಲ ಎಂದರು. ಇದೊಂದು ಟಾಸ್ಕ್ ಎಂಬ ನಿರ್ಧಾರಕ್ಕೆ ಬರುವಲ್ಲಿ ಅವರು ಬಹುತೇಕ ಯಶಸ್ವಿಯಾಗಿದ್ದಾರೆ. ಆದರೆ ಮನೆಯವರು ಅವರ ಮಾತುಗಳ ಮೇಲೆ ನಂಬಿಕೆ ಇಡುತ್ತಿಲ್ಲ.

  ಲಗ್ಜುರಿ ಬಜೆಟ್ ಟಾಸ್ಕ್ ನಿಲ್ಲು ಅಲ್ಲೇ ನಿಲ್ಲು

  ಇದೇ ಗೊಂದಲದಲ್ಲಿದ್ದ ಮನೆಯ ಸದಸ್ಯರಿಗೆ ಬಿಗ್ ಬಾಸ್ ಲಗ್ಜುರಿ ಬಜೆಟ್ ಟಾಸ್ಕ್ ಘೋಷಿಸಿದರು. ನಿಲ್ಲು ಅಲ್ಲೇ ನಿಲ್ಲು ಎಂಬುದು ಆ ಟಾಸ್ಕ್. ಸ್ಟ್ಯಾಚ್ಯು ಎಂದಾಗ ನಿಲ್ಲಬೇಕು. ರಿಲ್ಯಾಕ್ಸ್ ಎಂದಾಗ ಎಂದಿನಂತೆ ಇರಬೇಕು ಎಂಬುದು ಈ ಟಾಸ್ಕ್ ನ ನಿಯಮ.

  ಮನೆಗೆ ಬಂದ ಗುರುಪ್ರಸಾದ್ ಮಗಳು ಪ್ರತಿಪದೆ

  ಸ್ಟ್ಯಾಚ್ಯೂ ಎಂದಾಗ ಮನೆಯ ಎಲ್ಲಾ ಸದಸ್ಯರು ಕಲ್ಲಿನಂತೆ ನಿಂತರು. ಆಗ ಮನೆಯ ಒಳಗೆ ಗುರುಪ್ರಸಾದ್ ಅವರ ಮಗಳು ಪ್ರತಿಪದೆ ಬಂದರು. ಆದರೆ ಟಾಸ್ಕ್ ನ ಅನುಸಾರ ಎಲ್ಲರೂ ಕಲ್ಲಿನಂತೆ ಇದ್ದು ಬಿಡಬೇಕಾಯಿತು. ಆದರೆ ಗುರುಪ್ರಸಾದ್ ಮಾತ್ರ ಮಗಳನ್ನು ತಬ್ಬಿ ಅತ್ತುಬಿಟ್ಟರು.

  ನೀವು ಸಿಕ್ಕಾಪಟ್ಟೆ ಫೇಮಸ್ ಆಗಿದ್ದೀರಾ ಪಪ್ಪಾ

  ಸೂಪರ್ ಆಗಿ ಡಾನ್ಸ್ ಮಾಡ್ತೀಯ ಅಪ್ಪಾ ಎಂದರು. ನೀವು ಸಿಕ್ಕಾಪಟ್ಟೆ ಫೇಮಸ್ ಆಗಿದ್ದೀರಾ. ನಿಮ್ಮನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ನೀವು ಇಷ್ಟೆಲ್ಲಾ ಮಾಡ್ತೀರಾ ಎಂದು ಗೊತ್ತಿರಲಿಲ್ಲ ಎಂದೆಲ್ಲಾ ಗುರುಪ್ರಸಾದ್ ಮಗಳು ಹೇಳಿ ಅಲ್ಲಿಂದ ಹೊರಟು ಹೋದರು.

  ಗುರುಪ್ರಸಾದ್ ಗೆ ಎಚ್ಚರಿಸಿದ ಕಾಮಯ್ಯ

  ದೀಪಿಕಾ ಕಾಮಯ್ಯ ಅವರ ತಂದೆ ಕಾಮಯ್ಯ ಅವರು ಮನೆಗೆ ಬಂದರು. ಆಗಲೂ ಅಷ್ಟೇ ಎಲ್ಲರೂ ಸ್ಟ್ಯಾಚ್ಯೂ ತರಹ ಇರಬೇಕಾಯಿತು. ಮಗಳನ್ನು ತಬ್ಬಿ ಮುದ್ದಾಡಿದ ಕಾಮಯ್ಯ ಅವರು ಹೊರಡು ಮುನ್ನ ಗುರುಪ್ರಸಾದ್ ಅವರಿಗೆ ಒಂದು ಮಾತನ್ನೂ ಹೇಳಿ ಹೋದರು.

  ಗುರುಪ್ರಸಾದ್ ನಿಮ್ಮ ನಾಟಕ ಜಾಸ್ತಿ ಆಯ್ತು

  ದೀಪಿಕಾ ಜೊತೆಗೆ ನೀವು ಚೆನ್ನಾಗಿರುತ್ತೀರಾ. ಆದರೆ ಬೇರೆಯವರ ಜೊತೆ ಫಿಟ್ಟಿಂಗ್ ಇಡ್ತಿದ್ದೀರಾ. ಕೋಡಿಂಗ್ ಡೀಕೋಡಿಂಗ್ ಎಲ್ಲವೂ ಸರಿಯಿಲ್ಲ. ನೀವು ಈ ರೀತಿ ಮಾಡುವುದು ತಪ್ಪು ಎಂದು ಅವರು ಸ್ವಲ್ಪ ಖಾರವಾಗಿಯೇ ಹೇಳಿ ಮನೆಯಿಂದ ಹೊರಹೋದರು.

  ಇಲ್ಲಿ ಸಂಸಾರ ಮಾಡಕ್ಕೆ ಬಂದಿಲ್ಲ ಎಂದ ಗುರು

  ಇದಕ್ಕೆ ಸಿಕ್ಕಾಪಟ್ಟೆ ಗರಂ ಆದ ಗುರುಪ್ರಸಾದ್ ಅವರು ತಮ್ಮಷ್ಟಕ್ಕೆ ತಾವು ಜೋರಾಗಿ ಹೇಳಿದ್ದೇನೆಂದರೆ, ಇಲ್ಲಿ ಸಂಸಾರ ಮಾಡಕ್ಕೆ ಬಂದಿಲ್ಲ. ಇಲ್ಲಿ ಬಂದಿರುವುದು ಆಟ ಆಡಕ್ಕೆ. ಜನಕ್ಕೆ ಇಷ್ಟ ಆಗೋದು ಮುಖ್ಯ ನಿಮಗಲ್ಲ. ಆಟಗೊತ್ತಿಲ್ಲದವರೆಲ್ಲಾ ಇಲ್ಲಿ ಬಂದರೆ ಹೀಗೇ ಆಗುವುದು.

  ವೈರಿಗಳ ಜೊತೆ ಸಂಧಾನ ಅಲ್ಲ ಇದು

  ನೀವು ಕೊಡಗರು ಯುದ್ಧ ವೀರರು. ಯುದ್ಧಕ್ಕೆ ನಾವು ಹೋಗುವುದು ಎಷ್ಟು ವೈರಿ ಹೆಣಗಳನ್ನು ತರ್ತೀವಿ ಎಂದು. ವೈರಿಗಳ ಜೊತೆ ಸಂಧಾನ ಮಾಡಿಕೊಳ್ತೀವಿ, ಸಂಸಾರ ಮಾಡ್ತೀನಿ ಎಂದಲ್ಲ. ದಯವಿಟ್ಟು ಹಿರಿಯರಾದ ನೀವು ಇದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಮಗಳಿಗೆ ಆಟವನ್ನು ಆಟದ ತರಹ ಆಡಲು ಹೇಳಿಕೊಡಿ ಎಂದರು.

  ಮನೆಗೆ ಬಂದ ಗಿರಿಜಾ ಲೋಕೇಶ್

  ಇದಾದ ಬಳಿಕ ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಅವರು ಬಿಗ್ ಬಾಸ್ ಮನೆಗೆ ಬಂದರು. ಅವರು ಬಂದಾಗಲೂ ಸ್ಟ್ಯಾಚ್ಯೂನಂತೆ ಎಲ್ಲರೂ ನಿಲ್ಲಬೇಕಾಯಿತು. ಬಳಿಕ ರಿಲ್ಯಾಕ್ಸ್ ಎಂದಾಗ ಎಲ್ಲರೂ ಹೋಗಿ ಗಿರಿಜಾ ಅವರನ್ನು ತಬ್ಬಿಕೊಂಡರು.

  ಎಲ್ಲರೂ ಸಣ್ಣ ಆಗಿದ್ದರೆ ಅಕುಲ್ ಮಾತ್ರ

  ಗಿರಿಜಾ ಲೋಕೇಶ್ ಅವರು ಮಾತನಾಡುತ್ತಾ, ಎಲ್ಲರೂ ಸಣ್ಣ ಆಗಿದ್ದಾರೆ ಆದರೆ ನಮ್ಮ ಅಕುಲ್ ಮಾತ್ರ ದಪ್ಪ ಆಗಿದ್ದಾರೆ ಎಂದು ತಮಾಷೆ ಮಾಡಿದರು. ಸೃಜನ್ ಅವರ ಪತ್ನಿ ಗ್ರೀಷ್ಮಾ ಚೆನ್ನಾಗಿದ್ದಾರೆ ಎಂದು ಹೇಳಿ ಎಲ್ಲರೂ ಶುಭಹಾರೈಸಿ ಅವರು ಬಿಗ್ ಬಾಸ್ ಮನೆಯಿಂದ ಹೊರನಡೆದರು.

  ಗುರುಪ್ರಸಾದ್ ಮಾತನ್ನು ಯಾರೂ ನಂಬುತ್ತಿಲ್ಲ

  ಆದರೆ ಕಡೆಯವರೆಗೂ ಅನುಪಮಾ ಮಾತ್ರ ರಹಸ್ಯ ಟಾಸ್ಕ್ ನ ಗುಟ್ಟು ಬಿಟ್ಟುಕೊಡಲಿಲ್ಲ. ಸೃಜನ್ ಅವರು ಕೇಳಿದರೂ ಹೇಳಲಿಲ್ಲ. ಮನೆಯಲ್ಲಿ ಪ್ರೇತಾತ್ಮದ ನಾಟಕ ಮುಂದುವರೆದಿದೆ. ನಮ್ಮ ಧೈರ್ಯವನ್ನು ಕಿತ್ತುಕೊಳ್ಳುತ್ತಿದ್ದಾರೆ, ಬಾತ್ ರೂಮಿಗೆ ಯಾರೂ ರಾತ್ರಿ ಹೊತ್ತಲ್ಲಿ ಹೋಗುತ್ತಿಲ್ಲ ಎಂದು ಗುರುಪ್ರಸಾದ್ ಹೇಳುತ್ತಿದ್ದರೂ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ.

  English summary
  Anupama is upset with the kind of task given to her in secret. She come and request Bigg Boss to finish the task given to her. She says that fooling everyone and pretending to cry is taking an emotional toll on her. Bigg Boss Kannada 2 day 79 highlights.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more