»   » ಬಿಗ್ ಬಾಸ್ ನಿಂದ ಈ ಬಾರಿ ಯಾರು ಹೊರಗೆ?

ಬಿಗ್ ಬಾಸ್ ನಿಂದ ಈ ಬಾರಿ ಯಾರು ಹೊರಗೆ?

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ವಾರ ಉರುಳಿದೆ. ಈ ಬಾರಿ ನಾಮಿನೇಟ್ ಆಗಿರುವವರಲ್ಲಿ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬ ಬಗ್ಗೆ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ. ಈ ಬಾರಿ ಅನುಪಮಾ, ಸೃಜನ್ ಲೋಕೇಶ್, ದೀಪಿಕಾ ಹಾಗೂ ಗುರುಪ್ರಸಾದ್ ನಾಮಿನೇಟ್ ಆಗಿದ್ದಾರೆ.

ಎಂಬತ್ತೆರಡನೇ ದಿನ ಗುರುಪ್ರಸಾದ್ ಅವರು ಅಕುಲ್ ಜೊತೆ ಮಾತನಾಡುತ್ತಾ, "ಲಗ್ಜುರಿ ಬಜೆಟ್ ನ ಯಾವೊಂದು ಐಟಂನೂ ನಾನು ಮುಟ್ಟುತ್ತಿಲ್ಲ ಎಂದು ಮತ್ತೆ ಕ್ಯಾತೆ ತೆಗೆದರು. ಅವರ ವಾದ ಬಹುತೇಕ ಸರಿ ಅನ್ನಿಸುವ ಹೊತ್ತಿಗೆ ಮನೆಯ ಸದಸ್ಯರು ಇನ್ನೊಂದು ಟ್ವಿಸ್ಟ್ ಕೊಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಏಕದಿನದ ಟಾಸ್ಕ್ 'ಒನ್ಸ್ ಮೋರ್' ಎಂಬ ಆಫರ್ ಕೊಟ್ಟರು. ಮನೆಯ ಇತರೆ ಸದಸ್ಯರನ್ನು ಅನುಕರಿಸುವ ಟಾಸ್ಕ್ ಇದು. ಕಾಯಿಲೆ ಮತ್ತು ಅಂಗವೈಕಲ್ಯವನ್ನು ಕಾಮಿಡಿ ಮಾಡಬೇಡಿ. ಅದೊಂದು ತುಂಬಾ ಛೀಪ್ ಕಾಮಿಡಿ ಎಂದು ಗುರುಪ್ರಸಾದ್ ಎಚ್ಚರಿಸಿದರು.

ಮನೆಯಲ್ಲಿ ಛೀಪ್ ಕಾಮಿಡಿ ಮಾಡಬೇಡಿ

ನಾನು ಆಪಲ್ ತಿನ್ನುವುದನ್ನು ಅಸಹ್ಯವಾಗಿ ತೋರಿಸುತ್ತಾರೆ. ಇದನ್ನು ಇನ್ನುಮುಂದೆ ಮಾಡಬೇಡಿ ಎಂದು ವಿನಂತಿಸಿಕೊಂಡರು. ಇದೇ ವ್ಯವಹಾರವಾಗಿ ದೀಪಿಕಾ ಮಾತನಾಡುತ್ತಾ, ನೀವು ಬೇರೆಯವರ ಬಗ್ಗೆ ಮಾಡುವುದು ಮಾತ್ರ ಕಾಮಿಡಿ. ಅದೇ ಬೇರೆಯವರು ನಿಮ್ಮ ಬಗ್ಗೆ ಮಾಡಿದರೆ ಅದು ಛೀಪ್ ಕಾಮಿಡಿಯಾಗುತ್ತಾ ಎಂದು ಕೇಳಿದರು.

ನನ್ನ ಕಾಯಿಲೆಯನ್ನು ಕಾಮಿಡಿ ಮಾಡಿ ತೋರಿಸಬೇಡಿ

ಇದಕ್ಕೆ ಗುರುಪ್ರಸಾದ್ ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು. ನನ್ನ ಅಭಿಪ್ರಾಯ ನಾನು ಹೇಳಿದ್ದೀನಿ. ನನಗೆ ಅಸಿಡಿಟಿ ಸಮಸ್ಯೆ ಇದೆ. ಇದನ್ನೇ ಕಾಮಿಡಿ ಮಾಡಿ ತೋರಿಸುವುದು ಸರಿಯಲ್ಲ ಎಂದು ಹೇಳಿ ಅಲ್ಲಿಂದ ದೂರಸರಿದರು.

ಗುರುಪ್ರಸಾದ್ ಡೀಕೋಡ್ ವರ್ಕ್ ಔಟ್ ಆಗುತ್ತಾ?

ಇನ್ನೊಂದು ಸಂದರ್ಭದಲ್ಲಿ ಅಕುಲ್ ಜೊತೆ ಗುರು ಮಾತನಾಡುತ್ತಾ, ನಿನ್ನ ಪ್ರಕಾರ ಫೈನಲಿಸ್ಟ್ ಗಳು ಯಾರು ಎಂದರು. ಅದಕ್ಕೆ ಅಕುಲ್ ಗುರು, ಸೃಜನ್, ದೀಪಿಕಾ ಎಂದ. ಅನುಪಮಾ ಈ ವಾರ ಹೋಗ್ತಾರೆ, ಮುಂದಿನ ವಾರ ದೀಪಿಕಾ ಹೋಗ್ತಾರೆ ಎಂದು ಗುರುಪ್ರಸಾದ್ ಡೀಕೋಡ್ ಮಾಡಿದರು.

ಪ್ರೇಮಲೋಕ ಹಾಡಿಗೆ ಶ್ವೇತಾ ಹೆಜ್ಜೆ

ಓಎಲ್ಎಕ್ಸ್ ನಲ್ಲಿ ಕೊಂಡುಕೊಂಡ ವಸ್ತುಗಳನ್ನು ಬಳಸಿ ಎಲ್ಲಾ ಸದಸ್ಯರು ನೃತ್ಯ ಪ್ರದರ್ಶನ ನೀಡಬೇಕಾಗಿತ್ತು. "ಸ್ವಾತಿ ಮುತ್ತಿನ ಮಳೆ ಹನಿಯೇ.." ಹಾಡಿಗೆ ಸೊಗಸಾಗಿ ನರ್ತಿಸಿದರು ಗುರುಪ್ರಸಾದ್. "ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ..." ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದರು ಶ್ವೇತಾ ಚೆಂಗಪ್ಪ.

ಇನ್ನೂ ಶೇ.80ರಷ್ಟು ಟ್ರಿಕ್ಸ್ ಇದೆ

ಅಣ್ಣಾಬಾಂಡ್ ಹಾಡಿಗೆ ಹೆಜ್ಜೆ ಹಾಕಿದ್ದು ಅಕುಲ್ ಬಾಲಾಜಿ. ಕಡೆಗೆ ಅವರೇ ಈ ಟಾಸ್ಕ್ ನ ವಿನ್ನರ್ ಆದರು. ಮನೆಯಲ್ಲಿ ಇದುವರೆಗೂ ನಾನು ಹೊಸ ಟ್ರಿಕ್ಸನ್ನು ಶೇ.20ರಷ್ಟು ಮಾತ್ರ ಮಾಡಿದ್ದೀನಿ. ಇನ್ನೂ ಎರಡು ವಾರ ಇಲ್ಲೇ ಉಳಿದುಕೊಂಡರೆ ಉಳಿದ ಶೇ.80ರಷ್ಟನ್ನು ಪ್ರಯೋಗಿಸುತ್ತೇನೆ. ಇಲ್ಲಾ ಅಂದ್ರೆ ಅಷ್ಟೇ. ಬಹುಶಃ ಅದನ್ನು ಮುಂದಿನ ಸೀಸನ್ ನಲ್ಲಿ ಬಳಸುತ್ತೇನೆ ಎಂದರು ಗುರುಪ್ರಸಾದ್.

English summary
On day 82 of Bigg Boss Kannada 2, the participants were busy preparing the food using the luxury budget item provided by Bigg Boss. Guruprasad refused to consume any food made using those item.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada