»   » ಬಿಗ್ ಬಾಸ್ ಮನೆಯಲ್ಲಿ ಕಟ್ಟಕಡೆಯ ನಾಮಿನೇಷನ್

ಬಿಗ್ ಬಾಸ್ ಮನೆಯಲ್ಲಿ ಕಟ್ಟಕಡೆಯ ನಾಮಿನೇಷನ್

Posted By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಬಂಗಾರದ ಮನುಷ್ಯ ಕಾನ್ಸೆಪ್ಟ್ ನಡೀತಿದೆ ಎಂದು ಗುರುಪ್ರಸಾದ್ ಅವರು ಮನೆಯಿಂದ ಹೊರನಡೆದ ಮೇಲೆ ಹೇಳಿದ್ದಾರೆ. ಮನೆಯಲ್ಲಿ ಎಲ್ಲರೂ ಬಂಗಾರ ಮನುಷ್ಯರಾಗಲು ಹೊರಟಿದ್ದಾರೆ. ಆದರೆ ಯಾರೂ ಬಂಗಾರದ ಎಂಟರ್ ಟೈನರ್ ಆಗುತ್ತಿಲ್ಲ ಎಂದಿದ್ದರು.

ಅದರಂತೆ ಎಂಬತ್ತ ನಾಲ್ಕು ಮತ್ತು ಎಂಬತ್ತೈದನೇ ದಿನಗಳು ನಡೆದವು. ಸೃಜನ್ ಲೋಕೇಶ್ ಅವರು ಫೈನಲ್ ತಲುಪಿದ್ದು ಅವರು ಮನೆಯಲ್ಲಿ ಆರಾಮವಾಗಿದ್ದಾರೆ. ಉಳಿದ ಸ್ಪರ್ಧಿಗಳಾದ ಅನುಪಮಾ, ಅಕುಲ್ ಬಾಲಾಜಿ, ಶ್ವೇತಾ ಚೆಂಗಪ್ಪ ಹಾಗೂ ದೀಪಿಕಾ ಕಾಮಯ್ಯ ಅವರು ಇಲ್ಲಿಂದ ಹೋದರೆ ಸಾಕಪ್ಪಾ ಎಂಬ ಭಾವದಲ್ಲಿದ್ದಾರೆ.

ನನ್ನ ಗಟ್ ಫೀಲಿಂಗ್ ಪ್ರಕಾರ ನೀನೇ ವಿನ್ನರ್ ಎಂದು ಹೇಳಿದರು ಅಕುಲ್ ಬಾಲಾಜಿ. ಅದರಲ್ಲಿ ಒಂದು ಲಾಜಿಕ್ ಇದೆ. ಅದು ನನಗೆ ಮಾತ್ರ ಗೊತ್ತಿದೆ ಎಂದು ಅವರು ಸೃಜನ್ ಗೆ ಹೇಳಿದರು. ಮನೆಯ ಸದಸ್ಯರ ನಡುವೆ ಒಣ ಹರಟೆ ಸಾಕಷ್ಟು ನಡೆಯಿತು.

ಏಳು ಸಲ ನಾಮಿನೇಟ್ ಆಗಿದ್ದೀನಿ ಎಂದ ಅನು

ನಾನು ಇದುವರೆಗೂ 13 ವಾರದಲ್ಲಿ 7 ಸಲ ನಾಮಿನೇಟ್ ಆಗಿದ್ದೀನಿ. ಪ್ರತಿವಾರ ಸುದೀಪ್ ಯೂ ಆರ್ ಸೇಫ್ ಎಂದು ಹೇಳಿದಾಗ ತುಂಬಾ ಖುಷಿಪಟ್ಟಿದ್ದೀನಿ ಎಂದು ಹೇಳಿದರು ಅನುಪಮಾ ಭಟ್. ನಾನು ಕೇವಲ ಎರಡು ಸಲ ಮಾತ್ರ ನಾಮಿನೇಟ್ ಆಗಿದ್ದೇನೆ ಎಂದರು ಅಕುಲ್ ಬಾಲಾಜಿ.

ಏಕ ದಿನದ ಟಾಸ್ಕ್ ನನ್ನ ನೀನು ಗೆಲ್ಲಲಾರೆ

ಅನುಮಪಮಾ ಅವರಿಗೆ ಗುರುಪ್ರಸಾದ್ ಕೊಟ್ಟಿದ್ದ ಒಂಟಿ ಕಾಲಿನಲ್ಲಿ ಹೋಗುವ ಶಿಕ್ಷೆಗೆ ಬ್ರೇಕ್ ಬಿದ್ದಿದೆ. ಏತನ್ಮಧ್ಯೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಏಕ ದಿನದ ಟಾಸ್ಕ್ 'ನನ್ನ ನೀನು ಗೆಲ್ಲಲಾರೆ' ಕೊಟ್ಟರು. ಇದು ಮಹಿಳೆ ಮತ್ತು ಪುರುಷರ ನಡುವೆ ಯುದ್ಧ ಎಂದು ಬಿಗ್ ಬಾಸ್ ಹೇಳಿದರು.

ಮಂಜುಗಡ್ಡೆಯನ್ನು ಕರಗಿಸುವ ಟಾಸ್ಕ್

ತಮ್ಮ ದೇಹದ ಉಷ್ಣತೆಯನ್ನು ಬಳಸಿ ಮಂಜುಗಡ್ಡೆಯನ್ನು ಕರಗಿಸಬೇಕು. ನಿಮ್ಮ ದೇಹವನ್ನು ಹೊರತುಪಡಿಸಿ ಬೇರೆ ಯಾವ ವಸ್ತುವನ್ನು ಬಳಸುವಂತಿಲ್ಲ ಎಂಬ ನಿಬಂಧನೆಗಳ ಮೇಲೆ ಮಂಜುಗಡ್ಡೆಯನ್ನು ಕರಗಿಸುವ ಟಾಸ್ಕ್ ನೀಡಲಾಯಿತು.

ಏಕದಿನ ಟಾಸ್ಕ್ ನಲ್ಲಿ ಗೆದ್ದ ದೀಪಿಕಾ ಕಾಮಯ್ಯ

ಮಂಜುಗಡ್ಡೆ ಕರಗಿಸುವ ಪ್ರಯತ್ನದಲ್ಲಿ ದೀಪಿಕಾ ಕಾಮಯ್ಯ ವಿನ್ನರ್ ಆದರು. ಅವರ ಆರೋಗ್ಯವನ್ನು ಲೆಕ್ಕಿಸದೆ ಟಾಸ್ಕ್ ನಲ್ಲಿ ಭಾಗವಾಹಿಸಿದ್ದು, ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದ್ದಾರೆ. ಆರೋಗ್ಯವನ್ನು ಲೆಕ್ಕಿಸದೆ ಟಾಸ್ಕ್ ಮುಂದುವರಿಸಲು ಬಿಗ್ ಬಾಸ್ ಇಚ್ಛಿಸುವುದಿಲ್ಲ ಎಂದು ತಿಳಿಸಿದರು.

ಈ ಬಾರಿ ನಾಮಿನೇಟ್ ಆದವರು ಯಾರು

ನೇರವಾಗಿ ನಾಮಿನೇಟ್ ಆಗಿರುವ ಅನುಪಮಾ ಅವರ ಹೆಸರನ್ನು ಹಾಗೂ ಕ್ಯಾಪ್ಟನ್ ಸೃಜನ್ ಲೋಕೇಶ್ ಅವರ ಹೆಸರನ್ನುಗಳನ್ನು ಹೊರತುಪಡಿಸಿ ಈ ಬಾರಿ ನಾಮಿನೇಷನ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಕಟ್ಟಕಡೆಯ ನಾಮಿನೇಷನ್ ಪ್ರಕ್ರಿಯೆ

ಇದು ಕಟ್ಟಕಡೆಯ ನಾಮಿನೇಷನ್ ಪ್ರಕ್ರಿಯೆ ಆಗಿದ್ದು. ಐದು ಮಂದಿಯಲ್ಲಿ ಈ ಬಾರಿ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಅನುಪಮಾ ಅವರೊಂದಿಗೆ ಈ ವಾರ ಮನೆಯಿಂದ ಹೊರಹೋಗಲು ದೀಪಿಕಾ, ಅಕುಲ್ ಮತ್ತು ಶ್ವೇತಾ ಚೆಂಗಪ್ಪ ನಾಮಿನೇಟ್ ಆಗಿದ್ದಾರೆ.

English summary
Bigg Boss Kannada 2 has come to the penultimate week. With only 5 contestants left inside the house, the feeling of friendship is disappearing. Srujan has become the first finalist in the house, while others are still fighting it out for a place in the grand finale of the game show.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X