»   » ಬಂಗಾರದ ಮನುಷ್ಯ ಕಾನ್ಸೆಪ್ಟ್ ನಡೀತಿದೆ: ಗುರುಪ್ರಸಾದ್

ಬಂಗಾರದ ಮನುಷ್ಯ ಕಾನ್ಸೆಪ್ಟ್ ನಡೀತಿದೆ: ಗುರುಪ್ರಸಾದ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಐದನೇ ವಾರದಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಗುರುಪ್ರವೇಶ ಮಾಡಿದ ಗುರುಪ್ರಸಾದ್ ಇದೀಗ ಮನೆಯಿಂದ ಹೊರಬಿದ್ದಿದ್ದಾರೆ. ಮನೆಯಲ್ಲಿ ಇದ್ದಷ್ಟು ದಿನವೂ ಜಾಲಿಯಾಗಿ ಇದ್ದು, ಮನೆಯ ಸದಸ್ಯರ ಕೋಪ ತಾಪಕ್ಕೆ ಗುರಿಯಾಗಿದ್ದರು ಗುರುಪ್ರಸಾದ್ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದು ಮಾತ್ರ ಸುಳ್ಳಲ್ಲ.

  ಬಿಗ್ ಬಾಸ್ ಬಗ್ಗೆ ಮಾತನಾಡಿರುವ ಗುರುಪ್ರಸಾದ್ ಅವರು, "ಕನ್ನಡ ಕುಲಕೋಟಿ ವೀಕ್ಷಕರಿಗೆ, ಇಲ್ಲಿನ ಟೆಕ್ನಿಶಿಯನ್ಸ್ ಗೆ, ನಾನು ತುಂಬ ಇಷ್ಟಪಡುವ ಕಲಾವಿದ ಸುದೀಪ್ ಅವರಿಗೆ, ಎಲ್ಲಾ ತಂತ್ರಜ್ಞರಿಗೆ, ಬಿಗ್ ಬಾಸ್ ಕಾನ್ಸೆಪ್ಟ್ ಮಾಡಿದ ಆ ಬ್ರೈನ್ ಗೆ, ಅದನ್ನು ಬೇರೆ ಬೇರೆ ರೀಜನಲೈಸ್ ಮಾಡಿದ ಎಲ್ಲಾ ಪುಣ್ಯಾತ್ಮರಿಗೆ ಸೇರಿಸಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ..."

  "ನಾನು ನನ್ನದೆ ಆದ ರೀತಿಯಲ್ಲಿ ಆಟ ಆಡಿ ಆದಷ್ಟು ಮನರಂಜನೆ ನೀಡಿದ್ದೇನೆ. ಮನಸ್ಸಿಗೆ ಖುಷಿಯಾಗುವ ಹಾಗೆ, ತಾಯಿ ಶಾರದೆಗೆ ಒಪ್ಪಿಗೆಯಾಗುವ ರೀತಿ ಕೆಲಸ ಮಾಡಿದ್ದೀನಿ ಎಂದು ಭಾವಿಸುತ್ತೇನೆ. ಈ ಆಟದಲ್ಲಿ ಯಾರಾದರೂ ಮನಸ್ಸಿಗೆ ನೋವಾಗಿದ್ದರೆ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ" ಎಂದೂ ಸುದೀಪ್ ಜೊತೆ ಮಾತನಾಡುತ್ತಾ 'ಸಖತ್ ಸಂಡೇ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

  ಇದೊಂದು ಸಿಕ್ಕಾಪಟ್ಟೆ ಡೆಪ್ತ್ ಇರುವ ಆಟ

  ಬಿಗ್ ಬಾಸ್ ಮನೆಯ ನಿಮ್ಮ ವೈಲ್ಡ್ ಬದುಕು ಹೇಗಿತ್ತು? ಎಂದು ಸುದೀಪ್ ಕೇಳಿದಾಗ, ಇದು ಬಿಗ್ ಬಾಸ್ ಬಗ್ಗೆ ನಾನು ಮೊದಲಿಂದಲೂ ಹೇಳುತ್ತಿರುವುದು ಇದೊಂದು ಮಿನಿಯೇಚರ್ ಆಫ್ ಲೈಫ್ ಎಂಬುದು. ಇದೊಂದು ಸಿಕ್ಕಾಪಟ್ಟೆ ಡೆಪ್ತ್ ಇರುವಂತಹ ಆಟ. ಇದೊಂದು ಹಾರರ್, ಕುಕರಿ, ಫ್ಯಾಷನ್ ಶೋ ಆಗಬಹುದು ಅಷ್ಟು ಆಯಾಮಗಳಿರುವ ಆಟ.

  ಬಿಗ್ ಬಾಸ್ ಎಂಬುದು ಬ್ರಿಲಿಯಂಟ್ ಗೇಮ್

  ನಾನು ಈ ಥರಹದ ಪರಿಸರದಲ್ಲಿ ಐವತ್ತಾರು ದಿನಗಳನ್ನು ಕಳೆದಿದ್ದೀನಿ. ಈ ಬಿಗ್ ಬಾಸ್ ಎಂಬ ಕಾನ್ಸೆಪ್ಟ್ ಕ್ರಿಯೇಟ್ ಮಾಡಿರುವವನ ಬ್ರೈನ್ ಗೆ ಶಿರಸಾಷ್ಟಾಂಗ ನಮಸ್ಕಾರಗಳು. ಇದೊಂದು ಬ್ರಿಲಿಯಂಟ್, ಬ್ರಿಲಿಯಂಟ್. ಚೆಸ್, ಸ್ಕ್ರಾಬೆಲ್ ನಂತಹ ಎಷ್ಟೋ ಬ್ರೈನ್ ಗೇಮ್ ಗಳನ್ನು ಆಡಿದ್ದೇವೆ. ಈ ಆಟ ಮಾತ್ರ ಒನ್ ಆಫ್ ದ ಬೆಸ್ಟ್ ಗೇಮ್ ಎವರ್ ಆನ್ ಅರ್ಥ್" ಎಂದರು.

  ಬಂಗಾರದ ಮನುಷ್ಯ ಕಾನ್ಪೆಪ್ಟ್ ನಡೀತಿದೆ

  ತಾನು ಅಲ್ಲಿಂದ ಹೊರಬಿದ್ದ ಮೇಲೆ ಮನೆಯಲ್ಲಿರುವವರು ತುಂಬಾ ರಿಲೀಫ್ ಆಗಿರುತ್ತಾರೆ. ಒಬ್ಬನ ಕಾಟ ತಪ್ಪಿತು ಎಂದು ಅವರು ಆರಾಮವಾಗಿರುತ್ತಾರೆ. ನಾವು ನ್ಯೂಟ್ರಲ್ ಆಗಿ ಪ್ಲೇ ಮಾಡುತ್ತಿರುವುದೇ ಬೆಸ್ಟ್ ಈ ಆಟಕ್ಕೆ. ಇದನ್ನೇ ಕಂಟಿನ್ಯೂ ಮಾಡೋಣ. ಯಾರು ಬೆಸ್ಟ್ ನ್ಯೂಟ್ರಲ್ ಆಗಿರ್ತಾರೆ, ಯಾರು ಬೆಸ್ಟ್ ಹ್ಯೂಮನ್ ಬೀಯಿಂಗ್ ಆಗ್ತೀವಿ, ಬಚ್ಚಲು ಮನೆಯಲ್ಲಿದ್ದರೂ ಒಂದು ತುತ್ತು ತಿನ್ನಿಸಿ ನೋಡಪ್ಪಾ ಒಂದು ತುತ್ತು ತಿನ್ನಿಸಿದ್ದೀನಿ ಎಂದು ಹೇಳುವ ಬಂಗಾರದ ಮನುಷ್ಯ ಕಾನ್ಪೆಪ್ಟ್ ನಡೀತಿದೆ ಮನೆಯಲ್ಲಿ" ಎಂದು ಬಿಗ್ ಬಾಸ್ ಮನೆಯ ಸದಸ್ಯರ ಬಗ್ಗೆ ಹೇಳಿದರು.

  ಆಟವನ್ನು ಅರ್ಥ ಮಾಡಿಕೊಂಡಿರುವವನು ಅಕುಲ್ ಮಾತ್ರ

  ನನ್ನ ಪ್ರಕಾರ ಈ ಆಟವನ್ನು ಒಂದು ಮಟ್ಟಕ್ಕೆ ಅರ್ಥ ಮಾಡಿಕೊಂಡಿರುವವನು ಅಕುಲ ಮಾತ್ರ. ಮಿಕ್ಕವರೆಲ್ಲಾ ವೇಸ್ಟ್ ಬಾಡಿಗಳು. ಹಾಗಾಗಿ ಮನೆಯವರು ನನ್ನ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂಬುದು ಅನಾವಶ್ಯಕ ಎಂದರು. ಈ ಎಂಟು ವಾರಗಳಲ್ಲಿ ಗುರುಪ್ರಸಾದ್ ಏನು ಕೊಟ್ಟ ಉಳಿದವರು ಏನು ಕೊಟ್ಟರು ಎಂಬುದು ಅವರು ಹೊರಗೆ ಬಂದ ಮೇಲೆ ಗೊತ್ತಾಗುತ್ತದೆ.

  ಆಟಕ್ಕೆ ನಿಯತ್ತಾಗಿದ್ದೆ ಆದರೆ ಆಟಗಾರರಿಗೆ ಅಲ್ಲ

  ನಾನು ಆಟಕ್ಕೆ ನಿಯತ್ತಾಗಿದ್ದೆ ಆದರೆ ಆಟಗಾರರಿಗೆ ಅಲ್ಲ ಎಂದು ಒಂದೇ ಒಂದು ವಾಕ್ಯದಲ್ಲಿ ಹೇಳಲು ಇಷ್ಟಪಡುತ್ತೇನೆ. ರಾಮನ ಬಗ್ಗೆ ರಾವಣನ ತಂಡದಲ್ಲಿ ಕೆಟ್ಟ ಅಭಿಪ್ರಾಯಗಳಿರುತ್ತವೆ, ರಾವಣನ ತಂಡದಲ್ಲಿ ರಾಮನ ಬಗ್ಗೆ ಕೆಟ್ಟ ಅಭಿಪ್ರಾಯಗಳಿರುತ್ತವೆ. ಸೆಕೆಂಡರಿ ಕ್ಯಾರೆಕ್ಟರ್ಸ್ ಅಭಿಪ್ರಾಯಗಳು ನನ್ನ ವ್ಯಕ್ತಿತ್ವವನ್ನು ಬದಲಾಯಿಸಲು ಸಾಧ್ಯವಿಲ್ಲ.

  ಬೇರೆಯವರ ಅಭಿಪ್ರಾಯಗಳಿಗೆ ನಾನು ಜವಾಬ್ದಾರನಲ್ಲ

  ನನ್ನ ಪ್ರಕಾರ ಅವರೆಲ್ಲಾ ನನ್ನ ಕಾಂಪಿಟೇಟರ್ಸ್, ಹಾಗಾಗಿ ಅವರೆಲ್ಲಾ ನನ್ನ ಬಗ್ಗೆ ಕೆಟ್ಟದಾಗಿ, ಅಸಹ್ಯವಾಗಿ, ಕೆಟ್ಟಕೆಟ್ಟ ಬೈಗುಳ ಬಳಸಿರಬಹುದು. ರೋಹಿತ್ ಗೆ ಏನಾದರೂ ಹೇಳಿ ಕಳುಹಿಸಿದರೆ ಇದು ಅಲ್ಲೆಲ್ಲಾ ಸರ್ಕ್ಯುಲೇಟ್ ಆಗುತ್ತದೆ ಎಂದು ನಾನೇ ಹೇಳಿ ಕಳುಹಿಸುತ್ತಿದ್ದೆ. ಬೇರೆಯವರ ಅಭಿಪ್ರಾಯಗಳಿಗೆ ನಾನು ಜವಾಬ್ದಾರನಲ್ಲ. ಅದು ಅವರ ಇಂಟೆಲೆಕ್ಯುಯಲ್ ಕೆಪಾಸಿಟಿ, ಅಜ್ಞಾನವನ್ನು ತೋರಿಸುತ್ತದೆ.

  ಮನೆಯವರಿಗೆ ಮಾತು ಕಲಿಸಿದ್ದೀನಿ

  ಅವರು ನನ್ನ ವಿರುದ್ಧ ಎಷ್ಟು ಮಾತಾನಾಡಿದ್ದಾರೆ ಅಷ್ಟು ಗೆಲುವು ನನ್ನದು. ನಾನು ಇಲ್ಲದೆ ಹೋಗಿದ್ದರೆ ಅವರು ಅಷ್ಟು ಆಕ್ಟಿವೇಟ್ ಆಗುತ್ತಿರಲಿಲ್ಲ. ಅವರೆಲ್ಲಾ ಅಷ್ಟು ಯೋಚನೆ ಮಾಡುವಂತೆ ಮಾಡಿದ್ದೀನಿ. ಮನೆಯವರಿಗೆ ಮಾತು ಕಲಿಸಿದ್ದೀನಿ.

  ನನಗೆ ಕ್ಲೋಸ್ ಆಗಿದ್ದದ್ದು ಅಕುಲ್ ಮಾತ್ರ

  ಮನೆಯಲ್ಲಿ ನನಗೆ ಕ್ಲೋಸ್ ಆಗಿದ್ದಿದ್ದು ಅಕುಲ್ ಮಾತ್ರ. ನಾನು ಅವನಿಗೆ ಕಾಟ ಕೊಡ್ತಿದ್ದೆ ಅವನು ನನಗೆ ಪ್ರೇಮ ಕೊಡ್ತಿದ್ದ. ಗ್ರೇಟ್ ಹ್ಯೂಮನ್, ಗ್ರೇಟ್ ಟ್ಯಾಲೆಂಟ್. ಮನೆಯಲ್ಲಿ ಎಲ್ಲರಿಗೂ ಮಿರ್ಚಿ ಕೊಟ್ಟಿದ್ದ ಗುರುಗೆ ಸುದೀಪ್ ಕುರ್ಚಿ ಮಿರ್ಚಿಯಲ್ಲಿ ಕೂರಿಸಿ ಕೆಲವು ರ್ಯಾಪಿಡ್ ಫೈರ್ ಪ್ರಶ್ನೆಗಳನ್ನು ಎಸೆದರು.

  ಗುರುಗಳು ಹೇಳಿದ ಮಾತುಗಳೆಲ್ಲಾ ಒಂದು ನಿಜವಲ್ಲ

  ಗುರುಗಳು ಹೇಳಿದ ಮಾತುಗಳೆಲ್ಲಾ ಒಂದು ನಿಜವಲ್ಲ? ಎಂದಾಗ ಸುಳ್ಳು ಎಂದರು ಗುರುಪ್ರಸಾದ್. ಬಿಗ್ ಬಾಸ್ ಮನೆಯಲ್ಲಿ ನಾನು ಮುಖವಾಡ ಹಾಕಿಕೊಂಡಿರಲಿಲ್ಲ. ಮನೆಯಲ್ಲಿ ಹೇಗಿರುತ್ತಿದ್ದೇನೋ ಹಾಗೇ ಇದ್ದೆ. ಸ್ಪೈಸ್ ಅಪ್ ಮಾಡಲು ಮನೆಯಲ್ಲಿ ಡಬಲ್, ತ್ರಿಬಲ್ ಮೀನಿಂಗ್, ಕೋಡಿಂಗ್ ಡೀಕೋಡಿಂಗ್ ಮಾಡುತ್ತಿದ್ದದ್ದು ನಿಜ ಎಂದು ಒಪ್ಪಿಕೊಂಡರು.

  ಸೃಜನ್ ನೀವು ಬಂಗಾರದ ಎಂಟರ್ ಟೈನರ್ ಆಗಿ

  ಮನೆಯಲ್ಲಿ ಕರ್ನಾಟಕದ ಶರ್ಲಾಕ್ ಹೋಮ್ಸ್ ಎನ್ನಿಸಿಕೊಂಡಿದ್ದ ಗುರುಪ್ರಸಾದ್ ಅವರು ಸೃಜನ್ ಬಗ್ಗೆ, ನೀವು ಬಂಗಾರದ ಮನುಷ್ಯ ಆಗುವುದರಲ್ಲಿ ಅರ್ಥವಿಲ್ಲ ಬಂಗಾರದ ಎಂಟರ್ ಟೈನರ್ ಆಗಿ ಎಂದು ಸಲಹೆ ಕೊಟ್ಟರು. ನಿನ್ನಲ್ಲಿ ಕಲೆ ಇದೆ ಆದರೆ ತಲೆ ಇಲ್ಲ ಎಂದು ಸಂತೋಷ್ ಗೆ ಕಿವಿಮಾತು ಹೇಳಿದರು.

  ಬಿಗ್ ಬಾಸ್ ನಿಂದ ದಟ್ಟ ಅನುಭವಗಳನ್ನು ತಂದಿದ್ದೇನೆ

  ಐವತ್ತಾರು ದಿನಗಳ ನಾನು ಬಿಗ್ ಬಾಸ್ ಮನೆಯಿಂದ ದಟ್ಟ ಅನುಭವಗಳನ್ನು ಹೊತ್ತು ತಂದಿದ್ದೇನೆ ಎಂದರು. ಡಾನ್ಸರ್ ಆಗಿದ್ದೇನೆ, ಮಗುವಾಗಿದ್ದೇನೆ ಎಲ್ಲವನ್ನೂ ಮರೆತು ನಾನು ಆಟಗಳಲ್ಲಿ ತೊಡಗಿಸಿಕೊಂಡಿದ್ದೇನೆ.

  ನಿಮ್ಮ ಪ್ರಕಾರ ಬಿಗ್ ಬಾಸ್ ಅಂದ್ರೆ ಯಾರು?

  ಬಿಗ್ ಬಾಸ್ ನ್ನು ವ್ಯಕ್ತಿ ಎಂದು ಇಟ್ಟುಕೊಳ್ಳುವುದಾದರೆ ಆತ ವೆರಿ ಮ್ಯಾಜಿಕಲ್. ಬೇರೆ ತರಹ ವರ್ಣಿಸುವುದಾದರೆ ಅರ್ಜುನನಿಗೆ ಕೃಷ್ಣ ವಿಶ್ವರೂಪ ತೋರಿಸುತ್ತಾನೆ. ಅವನ ಕಣ್ಣಿಗೆ ಎಷ್ಟು ಸಾಧ್ಯವೋ ಅಷ್ಟು ದಕ್ಕಿಸಿಕೊಂಡ. ಹಾಗೆ ಒಬ್ಬೊಬ್ಬರು ಎಷ್ಟು ಸಾಧ್ಯವೋ ಅಷ್ಟು ವಿಶ್ವರೂಪ ದರ್ಶನವನ್ನು ಗ್ರಹಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನನಗೆ ಜೀವನದ ವಿಶ್ವರೂಪ ದರ್ಶನ ಆಗಿದೆ.

  English summary
  After evicted from Bigg Boss Kannada 2, director, writer and actor Guruprasad of Eddelu Manjunatha and Matha fame Guruprasad shares his views on Suvarna channel's biggest reality show on 'Sakkat Sunday with Sudeep'.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more