»   » ಸಮೀರಾಚಾರ್ಯ ಕಂಡ್ರೆ ಅನುಪಮಾಗೆ ರಕ್ತ ಕುದಿಯುತ್ತಿದೆ.!

ಸಮೀರಾಚಾರ್ಯ ಕಂಡ್ರೆ ಅನುಪಮಾಗೆ ರಕ್ತ ಕುದಿಯುತ್ತಿದೆ.!

Posted By:
Subscribe to Filmibeat Kannada

ಸಮೀರಾಚಾರ್ಯ ರನ್ನ ಕಂಡ್ರೆ 'ಬಿಗ್ ಬಾಸ್' ಮನೆಯೊಳಗೆ ಅದ್ಯಾರು ಕೆಂಡ ಕಾರುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದ್ರೆ, ಅನುಪಮಾಗೆ ಮಾತ್ರ ಸಮೀರಾಚಾರ್ಯ ರನ್ನ ನೋಡಿದ್ರೆ ಸಾಕು ರಕ್ತ ಕುದಿಯುತ್ತದೆ.

ಅದರಲ್ಲೂ, ಕಳೆದ ವಾರ ಸಮೀರಾಚಾರ್ಯ ತೆಗೆದುಕೊಂಡ ಕೆಲವು ನಿರ್ಣಯಗಳು ಅನುಪಮಾಗೆ ಭಾರಿ ಬೇಸರ ಉಂಟು ಮಾಡಿತು.

ಕಳೆದ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಆಯ್ಕೆ ಆದರು. ಕ್ಯಾಪ್ಟನ್ ಆದ್ಮೇಲೆ, ಅನುಪಮಾ ಅವರನ್ನ ಸಮೀರಾಚಾರ್ಯ ನೇರವಾಗಿ ನಾಮಿನೇಟ್ ಮಾಡಿದರು.

Bigg Boss Kannada 5: Anupama Gowda gets irked with sameer acharya

ಸಮೀರಾಚಾರ್ಯ ಮೇಲೆ ಅನುಪಮಾ ಗಂಭೀರ ಆರೋಪ ಮಾಡಿದ್ದು ಸರಿಯೇ.?

ಚಟುವಟಿಕೆಯಲ್ಲಿ ಸಮಯದ ಬಗ್ಗೆ ಅನುಪಮಾ ಗೌಡ ಸರಿಯಾಗಿ ಲೆಕ್ಕಾಚಾರ ಹಾಕಿದರೂ, ಅವರಿಗೆ 'ಕಳಪೆ' ಬೋರ್ಡ್ ನೀಡಿದರು ಸಮೀರಾಚಾರ್ಯ. ಇದನ್ನೆಲ್ಲ ಗಮನಿಸಿದ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಅನುಪಮಾಗೆ ''ರಕ್ತ ಎಷ್ಟು ಕುದಿಯುತ್ತಿದೆ.?'' ಎಂದು ಪ್ರಶ್ನಿಸಿದರು.

ಆಗ, ''ಸಮೀರಾಚಾರ್ಯ ಅವರು ಸರಿಯಾಗಿ ವಿಶ್ಲೇಷಣೆ ಮಾಡಲ್ಲ ಅನ್ನೋದು ನನಗೆ ಗೊತ್ತಿತ್ತು. ನಾಮಿನೇಷನ್ ಪ್ರಕ್ರಿಯೆಯಲ್ಲೂ ಅವರು ನನ್ನ ಹೆಸರು ತೆಗೆದುಕೊಳ್ಳುತ್ತಾರೆ ಅಂತ ನನಗೆ ಗೊತ್ತಿತ್ತು. ಅದರಲ್ಲಿ ಶಾಕ್ ಆಗಲಿಲ್ಲ. ಆದ್ರೆ, ಕಳಪೆ ಬೋರ್ಡ್ ಬಂದಾಗ ಸರಿಯಾಗಿ ಯೋಚನೆ ಮಾಡಿ ಕೊಡಬೇಕಿತ್ತು. ಅಲೋಚನೆ ಮಾಡಿ ಟೈಮ್ ಕೊಟ್ಟರೂ, ಕಳಪೆ ಬೋರ್ಡ್ ಕೊಟ್ರಲ್ಲ, ಅದಕ್ಕೆ ಬೇಜಾರು ಆಯ್ತು'' ಎಂದರು ಅನುಪಮಾ ಗೌಡ.

ಸರಿಯಾಗಿ ನಿರ್ಧಾರ ಮಾಡಲ್ಲ ಎಂಬ ಕಾರಣಕ್ಕೆ, ನಿನ್ನೆಯ ಸಂಚಿಕೆಯಲ್ಲೂ ಸಮೀರಾಚಾರ್ಯ ಮುಖಕ್ಕೆ ಮಸಿ ಬಳಿದರು ನಟಿ ಅನುಪಮಾ ಗೌಡ.

English summary
Bigg Boss Kannada 5: Week 12: Anupama Gowda gets irked with Sameer Acharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X