Just In
Don't Miss!
- Automobiles
ಮಾರಾಟದಲ್ಲಿ ಹೊಸ ಮೈಲಿಗಲ್ಲು ದಾಟಿದ ಟಾಟಾ ಆಲ್ಟ್ರೋಜ್ ಕಾರು
- News
ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
- Finance
ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಈ ವರದಿಗೆ ಏಕಿಷ್ಟು ಮಹತ್ವ?
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು!
'ನಿವೇದಿತಾ ಗೌಡ ಬರುವವರೆಗೂ ಮಾತ್ರ ಬೇರೆಯವರ ಹವಾ. ನಿವೇದಿತಾ ಗೌಡ ಬಂದ ಮೇಲೆ ಅವರದ್ದೇ ಹವಾ'. ಇದು ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸೃಷ್ಟಿಯಾಗಿರುವ ವಾತಾವರಣ.
'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಂಟ್ರಿಯಾದ ದಿನವೇ ನಿವೇದಿತಾ ಗೌಡ ಸ್ಟಾರ್ ಆಗಿ ಬಿಟ್ಟಿದ್ದಾರೆ. 17 ಸ್ಪರ್ಧಿಗಳ ಪೈಕಿ ಒಂದೇ ದಿನಕ್ಕೆ ನಿವೇದಿತಾ ಸಖತ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ದರ್ಬಾರ್ ಬಗ್ಗೆ ಹೇಳುವುದೇ ಬೇಡ. ಯಾವುದೇ ಟ್ರೋಲ್ ಪೇಜ್ ನೋಡಿದರೂ ಅಲ್ಲಿ ನಿವೇದಿತಾ ಬಗ್ಗೆಯೇ ಮಾತು-ಕಥೆ. ಹೀಗಿರುವಾಗಲೇ, ನಿವೇದಿತಾ ಹೆಸರಿನಲ್ಲಿ ಈಗ ಅಭಿಮಾನಿ ಸಂಘಗಳು ಕೂಡ ಹುಟ್ಟಿಕೊಂಡಿವೆ. ಮುಂದೆ ಓದಿ...

ಫೇಸ್ ಬುಕ್ ನಲ್ಲಿ
ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿರುವ ಕಂಗ್ಲೀಷ್ ಕುವರಿ ನಿವೇದಿತಾ ಗೌಡ ಹೆಸರಿನಲ್ಲಿ ಈಗ ಫೇಸ್ ಬುಕ್ ತುಂಬ ಸಾಕಷ್ಟು ಫ್ಯಾನ್ಸ್ ಪೇಜ್ ಶುರುವಾಗಿವೆ.

ಹತ್ತಾರು ಫ್ಯಾನ್ಸ್ ಪೇಜ್
ನಿವೇದಿತಾ ಗೌಡ ಫ್ಯಾನ್ಸ್ ಅಸೋಸಿಯೇಷನ್, ನಿವೇದಿತಾ ಗೌಡ ಫ್ಯಾನ್ಸ್ ಕ್ಲಬ್, ನಿವೇದಿತಾ ಗೌಡ ಫ್ಯಾನ್ಸ್ ಅಸೋಸಿಯೇಷನ್ ಕರ್ನಾಟಕ ಎನ್ನುವ ಹೆಸರುಗಳಲ್ಲಿ ಹತ್ತಾರು ಫ್ಯಾನ್ಸ್ ಪೇಜ್ ಗಳು ಇದೀಗ ಸೃಷ್ಟಿಯಾಗಿದೆ.

ಹೆಚ್ಚಿದ ಫಾಲೋವರ್ಸ್ ಸಂಖ್ಯೆ
ಇದರ ಜೊತೆಗೆ ನಿವೇದಿತಾ ಗೌಡ ಅವರ ವೈಯಕ್ತಿಕ ಫೇಸ್ ಬುಕ್ ಖಾತೆಯಲ್ಲಿಯೂ ಒಂದೇ ದಿನಕ್ಕೆ ನಾಲ್ಕುವರೆ ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್ ಜಾಸ್ತಿಯಾಗಿದ್ದಾರೆ.

ಟ್ರೋಲ್ ಮೇಲೆ ಟ್ರೋಲ್
ನಿವೇದಿತಾ ಗೌಡ ತಮ್ಮ ಡಿಫರೆಂಟ್ ಮ್ಯಾನರಿಸಂ ಮೂಲಕ ಟ್ರೋಲ್ ಪೇಜ್ ಗಳಿಗೆ ದೊಡ್ಡ ಆಹಾರ ಆಗಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಮೊದಲ ದಿನವೇ 'ಜನಸಾಮಾನ್ಯರು' ಟಾರ್ಗೆಟ್.!

ಜನಪ್ರಿಯತೆ ಬಳಕೆ
ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಬಗ್ಗೆ ಟಾಕ್ ಜೋರಾಗಿದ್ದು, ಅದನ್ನು ನೋಡಿ ಅನೇಕರು ಅವರ ಜನಪ್ರಿಯತೆ ಬಳಸಿಕೊಂಡು ಫ್ಯಾನ್ಸ್ ಪೇಜ್ ಶುರು ಮಾಡಿದ್ದಾರೆ.
ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

ನಾಮಿನೇಟ್ ಆದ ನಿವೇದಿತಾ
ಹೊರಗಡೆ ಇಷ್ಟೊಂದು ಜನಪ್ರಿಯತೆ ಇದ್ದರೂ ನಿವೇದಿತಾ ಗೌಡ ಮೊದಲ ದಿನವೇ ನಾಮಿನೇಟ್ ಆದರು. ಕ್ಯಾಪ್ಟನ್ ಅನುಪಮಾ ನೇರವಾಗಿ ನಿವೇದಿತಾ ಹೆಸರನ್ನು ಸೂಚಿಸಿದ್ದರಿಂದ ಅವರು ನಾಮಿನೇಟ್ ಆದರು.
ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ

ನಿವೇದಿತಾ ಗೌಡ ಬಗ್ಗೆ
ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ 'ಬಿಗ್ ಬಾಸ್' ಕಾರ್ಯಕ್ರಮದ ಎಂಟನೇ ಸ್ಪರ್ಧಿ. ಮೈಸೂರಿನಲ್ಲಿ ಹುಟ್ಟಿ ಬೆಳೆದ ನಿವೇದಿತಾ ಗೌಡಗಿನ್ನೂ ಹದಿನೆಂಟು ವರ್ಷ. 'ಬಿಗ್ ಬಾಸ್' ಕನ್ನಡದ ಐದು ಆವೃತ್ತಿಗಳಲ್ಲಿ ನಿವೇದಿತಾ ಗೌಡ ಅತಿ ಕಿರಿಯ ಸ್ಪರ್ಧಿ. 'ಬಿಗ್ ಬಾಸ್'ಗಾಗಿ ಬಿ.ಸಿ.ಎ ಸೆಮಿಸ್ಟರ್ ಪರೀಕ್ಷೆಯನ್ನೇ ಬಿಟ್ಟು ಬಂದಿದ್ದಾರೆ ಈ ನಿವೇದಿತಾ ಗೌಡ.