»   » ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಕಳಪೆ ಪಟ್ಟ ಬೇಡ ಎಂದ ದಿವಾಕರ್ | Filmibeat Kannada

ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಅಂತ್ಯವಾಯಿತು. ಮನೆಯಲ್ಲಿ ಆಟವಾಡಿದ ಎಲ್ಲ ಸ್ಫರ್ದಿಗಳನ್ನ ಬಿಗ್ ಬಾಸ್ ಶ್ಲಾಘಿಸಿದರು. ಇದಾದ ಬಳಿಕ ಮನೆಯ ಕ್ಯಾಪ್ಟನ್ ಆಗಿದ್ದ ಶ್ರುತಿ ಅವರಿಗೆ ಈ ವಾರದ 'ಬೆಸ್ಟ್ ಫರ್ಫಾಮರ್' ಯಾರು? 'ಕೆಟ್ಟ ಫರ್ಫಾಮರ್' ಯಾರು ಎಂಬದನ್ನ ಬಿಗ್ ಬಾಸ್ ಗೆ ಸೂಚಿಸಬೇಕಿತ್ತು.

ಇದರು ಅನುಸಾರ ಸಿಹಿ ಕಹಿ ಚಂದ್ರು ಅವರನ್ನ ವಾರದ ಬೆಸ್ಟ್ ಫರ್ಫಾಮರ್ ಎಂದು ಬೋರ್ಡ್ ನೀಡಲಾಯಿತು. ವಾರದ ಕೆಟ್ಟ ಫರ್ಫಾಮರ್ ಎಂದು ದಿವಾಕರ್ ಅವರ ಹೆಸರು ಸೂಚಿಸಲಾಯಿತು.

ಆದ್ರೆ, ಕೆಟ್ಟ ಫರ್ಫಾಮರ್ ಬೋರ್ಡ್ ಹಾಕಿಕೊಳ್ಳಲ್ಲ ಎಂದು ಧಿಕ್ಕರಿಸಿದರು. ಇದರಿಂದ ಮನೆಯಲ್ಲಿ ದಿನ ಪೂರ್ತಿ ಅಲ್ಲೋಲ-ಕಲ್ಲೋಲ ಸೃಷ್ಠಿಯಾಯಿತು.

ಕ್ಯಾಪ್ಟನ್ ತೀರ್ಮಾನಕ್ಕೆ ದಿವಾಕರ್ ವಿರೋಧ

ಮನೆಯ ಕ್ಯಾಪ್ಟನ್ ಆಗಿದ್ದ ಶ್ರುತಿ ಪ್ರಕಾಶ್ ಅವರು ನೀಡಿದ ತೀರ್ಮಾನವನ್ನ ದಿವಾಕರ್ ನೇರವಾಗಿ ವಿರೋಧಿಸಿದರು. ಕಳಪೆ ಪ್ರದರ್ಶನದ ಬೋರ್ಡ್ ಹಾಕಿಕೊಳ್ಳುವುದಿಲ್ಲವೆಂದು ಧಿಕ್ಕರಿಸಿದರು. ಇದರಿಂದ ಮನೆಯಲ್ಲಿ ದಿನಪೂರ್ತಿ ಗೊಂದಲ ಉಂಟು ಮಾಡಿತು.

ಶ್ರುತಿ ಪ್ರಕಾಶ್ ಮೇಲಿದ್ದ ಅಭಿಮಾನ ಇನ್ಮುಂದೆ ವೀಕ್ಷಕರಲ್ಲಿ ಕಮ್ಮಿಯಾದ್ರೆ ಅಚ್ಚರಿ ಇಲ್ಲ.!

ಮನೆಯ ಸದಸ್ಯರೆಲ್ಲಾ ಮನವಿ ಮಾಡಿದರು

ದಿವಾಕರ್ ಅವರಿಗೆ ಕಳಪೆ ಬೋರ್ಡ್ ಹಾಕಿಕೊಳ್ಳಿ ಎಂದು ಮನೆಯ ಬಹುತೇಕ ಸದಸ್ಯರು ಮನವಿ ಮಾಡಿಕೊಂಡರು, ದಿವಾಕರ್ ಕ್ಯಾರೇ ಎನ್ನಲಿಲ್ಲ.

'ಬಿಗ್ ಬಾಸ್' ಬೆಡಗಿ ಶ್ರುತಿ ಪ್ರಕಾಶ್ ಗೆ ಬಾಯ್ ಫ್ರೆಂಡ್ ಇದ್ದಾರಾ.?

ದಿವಾಕರ್ ನಡೆಗೆ ಅಸಮಾಧಾನ

ದಿವಾಕರ್ ಅವರ ಈ ನಡೆಗೆ ಮನೆಯ ಸದಸ್ಯರಾಗಿರುವ ಸಿಹಿ ಕಹಿ ಚಂದ್ರು, ದಯಾಳ್, ಅನುಪಮಾ ಗೌಡ, ಜಗನ್, ಆಶಿತಾ, ಕೃಷಿ, ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದರು.

'ಥೂ' ಎಂದು ಕರೆದ ದಯಾಳ್ ವಿರುದ್ಧ ವೀಕ್ಷಕರು ಕೆಂಡಾಮಂಡಲ.!

ದಿವಾಕರ್ ಬೆಂಬಲಕ್ಕೆ ನಿಂತ ಜನಸಾಮಾನ್ಯರು

ಇನ್ನು ಆಟ ಉತ್ತಮವಾಗಿ ಆಡಿದ್ದರು ದಿವಾಕರ್ ಅವರಿಗೆ ಕಳಪೆ ಪ್ರದರ್ಶನ ಬೋರ್ಡ್ ನೀಡುವುದು ಸರಿಯಿಲ್ಲ ಎಂದು ರಿಯಾಜ್, ಮೇಘ, ಸಮೀರಾಚಾರ್ಯ ಬೆಂಬಲ ನೀಡಿದರು.

ಶಿಕ್ಷೆಯ ಸೂಚನೆ ಕೊಟ್ಟ 'ಬಿಗ್ ಬಾಸ್'

ಈ ಮಧ್ಯೆ ದಿವಾಕರ್ ಅವರು ಕ್ಯಾಪ್ಟನ್ ನೀಡಿರುವ ಕಳಪೆ ಬೋರ್ಡ್ ಹಾಕುವಂತೆ ನೋಡಿಕೊಳ್ಳುವುದು ನಾಯಕಿ ಶ್ರುತಿ ಅವರ ಜವಾಬ್ದಾರಿ, ಇಲ್ಲವಾದಲ್ಲಿ ಶಿಕ್ಷೆ ನೀಡಲಾಗುವುದು ಎಂದು ಸೂಚನೆ ನೀಡಿದರು.

'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

ಆತಂಕಗೊಂಡ ಸದಸ್ಯರು

ಬಿಗ್ ಬಾಸ್ ಸೂಚನೆಯ ನಂತರ ಮನೆಯ ಸದಸ್ಯರೆಲ್ಲಾ ಆತಂಕಗೊಂಡರು. ವಾರವೆಲ್ಲಾ ಕಷ್ಟಪಟ್ಟು ಗೆದ್ದ ಲಕ್ಷುರಿ ಬಜೆಟ್ ಅಂಕಗಳನ್ನ ಬಿಗ್ ಬಾಸ್ ಕಿತ್ತಕೊಳ್ಳಬಹುದು ಎಂದು ಭಯಗೊಂಡರು. ಹೀಗಾಗಿ, ಅನುಪಮಾ, ಸಹಿ ಕಹಿ ಚಂದ್ರು, ದಯಾಳ್ ಎಲ್ಲರೂ ದಿವಾಕರ್ ಅವರ ಬಳಿ ಮಾತನಾಡಿದರು ಪ್ರಯೋಜನವಾಗಲಿಲ್ಲ.

ಎರಡು ಗುಂಪುಗಳ ನಡುವೆ ಅಸಮಾಧಾನ

ಇದರ ಪರಿಣಾಮ ಜನಸಾಮನ್ಯರು ಮತ್ತು ಸೆಲೆಬ್ರಿಟಿಗಳು ಎಂಬ ಗುಂಪುಗಳು ಬಿಗ್ ಬಾಸ್ ಮನೆಯಲ್ಲಿವೆ ಎಂಬ ಮಾತು ನಿನ್ನೆ ಮತ್ತೆ ಸಾಬೀತಾಗಿದೆ. ಕೊನೆಗೂ ದಿವಾಕರ್ ಬೋರ್ಡ್ ಹಾಕಿಕೊಳ್ಳಲೇ ಇಲ್ಲ. ಬಿಗ್ ಬಾಸ್ ಶಿಕ್ಷೆ ಕೂಡ ಪ್ರಕಟವಾಗಿದೆ.

ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

ದಿವಾಕರ್ ಯಾಕೆ ಹಾಕಿಕೊಳ್ಳಲ್ಲ ಅಂದ್ರು..

''ನಾನು ವಾರದ ಕಳಪೆ ಆಟಗಾರನಾಗಿ ದಿವಾಕರ್ ಹೆಸರು ತೆಗೆದುಕೊಳ್ಳುತ್ತೇನೆ'' ಎಂದು ಹೇಳಿದ ತಕ್ಷಣ ದಿವಾಕರ್ ಎದ್ದು ''ನಾನು ಇದನ್ನು ಒಪ್ಪಿಕೊಳ್ಳುವುದಿಲ್ಲ.. ಆಟದಲ್ಲಿ ನಾನು ಹೊಲಸಾಗಿ ಆಡಿಲ್ಲ.. ಕಳಪೆ ಬೋರ್ಡ್ ಹಾಕಿಕೊಳ್ಳುವುದಿಲ್ಲ..'' ಎಂದು ದಿವಾಕರ್ ಸ್ಪಷ್ಟನೆ ನೀಡಿದರು.

English summary
Bigg Boss Kannada 5: Divakar Rejects 'Worst performer' tag from Captain Shruthi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada