Just In
Don't Miss!
- News
ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬೇಡಿಕೆ ಹೆಚ್ಚಿದಂತೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
- Finance
ತನ್ನ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳ ನವೀಕರಣವನ್ನು ಮುಂದೂಡಿದ ವಾಟ್ಸಾಪ್
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶ್ರುತಿ ಪ್ರಕಾಶ್ ಮೇಲಿದ್ದ ಅಭಿಮಾನ ಇನ್ಮುಂದೆ ವೀಕ್ಷಕರಲ್ಲಿ ಕಮ್ಮಿಯಾದ್ರೆ ಅಚ್ಚರಿ ಇಲ್ಲ.!

ಕನ್ನಡತಿ ಆಗಿದ್ದರೂ ಮುಂಬೈನಲ್ಲಿ ಹೆಸರು ಮಾಡಿರುವ ಶ್ರುತಿ ಪ್ರಕಾಶ್, 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದೇ ತಡ, ಅಸಂಖ್ಯಾತ ವೀಕ್ಷಕರು ಆಕೆಗೆ ಅಭಿಮಾನಿಗಳಾದರು. ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಪ್ರಕಾಶ್ ಬೆಂಬಲಕ್ಕೆ ಅನೇಕ ಫ್ಯಾನ್ ಪೇಜ್ ಕೂಡ ಕ್ರಿಯೇಟ್ ಆಗಿದೆ.
ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯಲ್ಲಿ ತಾವಾಯ್ತು, ತಮ್ಮ ಟಾಸ್ಕ್ ಆಯ್ತು ಅಂತ ಇದ್ದ ಶ್ರುತಿ ಪ್ರಕಾಶ್ ಇದೀಗ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರ ಕ್ಯಾಪ್ಟನ್ ಆಗಿರುವ ಶ್ರುತಿ ಪ್ರಕಾಶ್, ಕಾಮನ್ ಮ್ಯಾನ್ ಆದ ದಿವಾಕರ್ ರವರಿಗೆ 'ಕಳಪೆ' ಬೋರ್ಡ್ ನೀಡಿದ್ದಾರೆ. ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡದ ದಿವಾಕರ್, 'ಕಳಪೆ' ಬೋರ್ಡ್ ಧರಿಸಲು ಒಲ್ಲೆ ಎಂದಿದ್ದಾರೆ.
ಮೊದಲೇ 'ಬಿಗ್ ಬಾಸ್' ಮನೆಯಲ್ಲಿ ಜನಸಾಮಾನ್ಯರನ್ನ ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದಾರೆ. ಅಂಥದ್ರಲ್ಲಿ, ಸೆಲೆಬ್ರಿಟಿಗಳನ್ನು ಪರಿಗಣಿಸದೆ ದಿವಾಕರ್ ಗೆ ಶ್ರುತಿ ಪ್ರಕಾಶ್ 'ಕಳಪೆ' ಬೋರ್ಡ್ ನೀಡಿದ್ದು ವೀಕ್ಷಕರಿಗೂ ಬೇಸರ ತಂದಿದೆ. ಹೀಗಾಗಿ, ಕಲರ್ಸ್ ಸೂಪರ್ ಫೇಸ್ ಬುಕ್ ಪುಟದಲ್ಲಿ ತಮ್ಮ ಅಸಮಾಧಾನವನ್ನು ವೀಕ್ಷಕರು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ....

ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ
ಇಷ್ಟು ದಿನ ಶ್ರುತಿ ಪ್ರಕಾಶ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದ ವೀಕ್ಷಕರು ಇದೀಗ ಏಕಾಏಕಿ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ಯಾಪ್ಟನ್ ಆಗುವ ಅರ್ಹತೆಯೇ ಶ್ರುತಿ ಪ್ರಕಾಶ್ ಗೆ ಇಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

ಇದು ಮೋಸ
ದಿವಾಕರ್ ರವರಲ್ಲಿ ಇರುವ ತಾಳ್ಮೆಯನ್ನ ವೀಕ್ಷಕರು ಕೊಂಡಾಡುತ್ತಿದ್ದಾರೆ.
ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಇದೇನಾ ನೈತಿಕತೆ.?
ರಾತ್ರಿ ಪೂರ್ತಿ ಗೇಮ್ ಆಡಿ ಅಂದರೂ, ಅವರವರ ಇಷ್ಟಕ್ಕೆ ತಕ್ಕ ಹಾಗೆ ಟಾಸ್ಕ್ ಆಡುತ್ತಿದ್ದ ಕ್ಯಾಪ್ಟನ್ ಶ್ರುತಿ ಹಾಗೂ ದಯಾಳ್ ರವರ ನೈತಿಕತೆ ಬಗ್ಗೆ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.
'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

ನಿವೇದಿತಾ ಅಥವಾ ಆಶಿತಾ 'ಕಳಪೆ'
ವೀಕ್ಷಕರು ಸೂಕ್ಷ್ಮವಾಗಿ ಗಮನಿಸಿರುವ ಪ್ರಕಾರ, ದಿವಾಕರ್ ಚೆನ್ನಾಗಿ ಆಟ ಆಡಿದ್ದಾರೆ. ವೀಕ್ಷಕರ ಪ್ರಕಾರ, ನಿವೇದಿತಾ ಅಥವಾ ಆಶಿತಾಗೆ 'ಕಳಪೆ' ಬೋರ್ಡ್ ಕೊಡಬೇಕಿತ್ತು.
ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ಇನ್ಮುಂದೆ ಶ್ರುತಿ ಪ್ರಕಾಶ್ ಗೆ ವೋಟ್ ಮಾಡಲ್ಲ
''ನಮ್ಮ ಉತ್ತರ ಕರ್ನಾಟಕದ ಹುಡುಗಿ'' ಅಂತ ಇಷ್ಟು ದಿನ ಶ್ರುತಿ ಪ್ರಕಾಶ್ ಗೆ ಸಪೋರ್ಟ್ ಮಾಡುತ್ತಿದ್ದವರು ಈಗ ಉಲ್ಟಾ ಹೊಡೆದಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ಶ್ರುತಿ ಪ್ರಕಾಶ್ ಗೆ ವೋಟ್ ಮಾಡಲ್ಲ ಅಂತಿದ್ದಾರೆ ವೀಕ್ಷಕರು.
ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಜನಸಾಮಾನ್ಯರೇ ಮೇಲು
''ದಿವಾಕರ್ ರನ್ನ ನೋಡಿ ಸೆಲೆಬ್ರಿಟಿಗಳು ಬುದ್ಧಿ ಕಲಿಯಬೇಕು. ಸೆಲೆಬ್ರಿಟಿಗಳಿಗಿಂತ ಜನಸಾಮಾನ್ಯರೇ ಎಷ್ಟೋ ಮೇಲು'' ಅಂತಿದ್ದಾರೆ ವೀಕ್ಷಕರು.

ಕ್ಯಾಪ್ಟನ್ ಗಳೇ 'ಕಳಪೆ'
''24 ಗಂಟೆಗಳ ಕಾಲ ನಡೆಯಬೇಕಿದ್ದ ಆಟವನ್ನು, ಅವರ ಅನುಕೂಲಕ್ಕೆ ತಕ್ಕಂತೆ ಸೀಮಿತಗೊಳಿಸಿ, ಪಂದ್ಯದ ನಿಯಮಾವಳಿಗಳನ್ನೇ ಮಾರ್ಪಡಿಸಿದ ಎರಡು ತಂಡದ ನಾಯಕರೇ ಈ ವಾರ 'ಕಳಪೆ' ಆಟಗಾರರು'' ಎಂದಿದ್ದಾರೆ ವೀಕ್ಷಕರು.

ಸೆಲೆಬ್ರಿಟಿಗಳು ಕಳಪೆ ಪ್ರದರ್ಶನ ಕೊಟ್ಟಿಲ್ವಾ.?
ಕಳೆದ ವಾರ ಕೂಡ ಕಾಮನ್ ಮ್ಯಾನ್ (ಸಮೀರಾಚಾರ್ಯ)ಗೆ ಕ್ಯಾಪ್ಟನ್ ಅನುಪಮಾ ಗೌಡ 'ಕಳಪೆ' ಬೋರ್ಡ್ ಹಾಕಿದರು. ಈ ವಾರ ಕೂಡ ಕ್ಯಾಮನ್ ಮ್ಯಾನ್ ಗೆ 'ಕಳಪೆ' ಬೋರ್ಡ್ ಸಿಕ್ಕಿದೆ. ಸೆಲೆಬ್ರಿಟಿಗಳು 'ಕಳಪೆ' ಪರ್ಫಾಮೆನ್ಸ್ ಕೊಟ್ಟೇ ಇಲ್ವಾ ಅನ್ನೋದು ವೀಕ್ಷಕರ ಪ್ರಶ್ನೆ.

ಶ್ರುತಿ ನಿರ್ಣಯ ಸರಿ ಇಲ್ಲ
ಕ್ಯಾಪ್ಟನ್ ಶ್ರುತಿ ಪ್ರಕಾಶ್ ನಿರ್ಣಯ ಸರಿ ಇಲ್ಲ ಅಂತ ಹೇಳುವವರೇ ಹೆಚ್ಚು.

ಜನಸಾಮಾನ್ಯರಿಗೆ ನ್ಯಾಯ ಸಿಗಬೇಕು
ಕಾಮನ್ ಮ್ಯಾನ್ ಗೆ ನ್ಯಾಯ ಸಿಗಲೇಬೇಕು. ಸುದೀಪ್ ನ್ಯಾಯ ಕೊಡಿಸಲೇಬೇಕು ಅಂತ ವೀಕ್ಷಕರು ಪಟ್ಟು ಹಿಡಿದಿದ್ದಾರೆ.