Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Automobiles
ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಎಸ್ಎಲ್: ಚೆನ್ನೈಯಿನ್ ಎಫ್ಸಿ vs ಎಸ್ಸಿ ಈಸ್ಟ್ ಬೆಂಗಾಲ್, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!

''ಹೇಳಿದ ಮಾತು ಕೇಳಲ್ಲ, ಸಾಧಕರಿಗೆ ಗೌರವ ಕೊಡಲ್ಲ, ಬದಲಾಗುವುದಿಲ್ಲ..'' ಅಂತ ಜನಸಾಮಾನ್ಯ ಸ್ಪರ್ಧಿಗಳ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿಗಳು ಎಷ್ಟೇ ಕಂಪ್ಲೇಂಟ್ ಮಾಡಿದರೂ, ಕನ್ನಡಿಗರ ಬೆಂಬಲ ಮಾತ್ರ ಜನಸಾಮಾನ್ಯ ಸ್ಪರ್ಧಿಗಳ ಮೇಲೆ ಇದ್ದೇ ಇದೆ.!
ಜನಸಾಮಾನ್ಯ ಸ್ಪರ್ಧಿಗಳ ಜೊತೆಗೆ ಸೆಲೆಬ್ರಿಟಿಗಳ ವರ್ತನೆಯನ್ನ ಕಣ್ಣಾರೆ ಕಾಣುತ್ತಿರುವ 'ಬಿಗ್ ಬಾಸ್' ವೀಕ್ಷಕರು, ಸಾಮಾಜಿಕ ಜಾಲತಾಣಗಳಲ್ಲಿ 'ಕಾಮನ್ ಮ್ಯಾನ್' ಕಂಟೆಸ್ಟೆಂಟ್ ಗಳ ಪರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!
ಸೆಲೆಬ್ರಿಟಿ ಸ್ಪರ್ಧಿಗಳಿಗೆ ಧಿಕ್ಕಾರ ಕೂಗಿರುವ 'ಬಿಗ್ ಬಾಸ್' ವೀಕ್ಷಕರು, 'ಶ್ರೀಸಾಮಾನ್ಯ' ಸ್ಪರ್ಧಿಗಳಿಗೆ ಜೈಕಾರ ಹಾಕಿದ್ದಾರೆ. ಮುಂದೆ ಓದಿರಿ....

'ಕಾಮನ್ ಮ್ಯಾನ್ ಬೆಸ್ಟ್'
''ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಬೆಸ್ಟ್ ಅಂತ ಮತ್ತೆ ಪ್ರೂವ್ ಆಗಿದೆ. ಸೆಲೆಬ್ರಿಟಿಗಳಿಗೆ ನನ್ನ ಕಡೆಯಿಂದ ಧಿಕ್ಕಾರ ಇರಲಿ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.
ವೀಕ್ಷಕರು ಎಷ್ಟು ಸೂಕ್ಷ್ಮವಾಗಿ 'ಬಿಗ್ ಬಾಸ್' ನೋಡ್ತಾರೆ ಅನ್ನೋಕೆ ಈ ಕಾಮೆಂಟ್ ಸಾಕ್ಷಿ.!

ಕಾಮನ್ ಮ್ಯಾನ್ ಗೆಲ್ಲಬೇಕು
''ಸೆಲೆಬ್ರಿಟಿಗಳು ಜನಸಾಮಾನ್ಯರಿಗೆ ಮಾತಾಡಲು ಅವಕಾಶ ನೀಡುತ್ತಿಲ್ಲ. ಸೆಲೆಬ್ರಿಟಿಗಳಿಗೆ ಪಾಠ ಕಲಿಸಬೇಕು ಅಂದ್ರೆ ಸಾಮಾನ್ಯ ಜನರಿಗೆ ವೋಟ್ ಮಾಡಿ ಅವರನ್ನು ಗೆಲ್ಲಿಸಬೇಕು'' ಎಂಬುದು ವೀಕ್ಷಕರ ಅಭಿಪ್ರಾಯ.
'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

ಶ್ರೀಸಾಮಾನ್ಯ ಸ್ಪರ್ಧಿಗಳೇ ಇಷ್ಟ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜನಸಾಮಾನ್ಯರನ್ನು ಜನ ಇಷ್ಟ ಪಡುತ್ತಿದ್ದಾರೆ ಎಂಬುದಕ್ಕೆ ಈ ಕಾಮೆಂಟ್ ಗಳೇ ಸಾಕ್ಷಿ.
ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ಕಾಮನ್ ಮ್ಯಾನ್ ಗೆ ವೋಟ್ ಮಾಡಿ
ಜನಸಾಮಾನ್ಯರಿಗೆ ಸಪೋರ್ಟ್ ಮಾಡಿ, ಶ್ರೀಸಾಮಾನ್ಯ ಸ್ಪರ್ಧಿಗಳಿಗೆ ವೋಟ್ ಮಾಡಿ ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.
ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಆಕ್ರೋಶಗೊಂಡ ವೀಕ್ಷಕರು
ಸೆಲೆಬ್ರಿಟಿಗಳು ಜನಸಾಮಾನ್ಯರನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಜನರು ಆಕ್ರೋಶಗೊಂಡಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಕಾಮನ್ ಮ್ಯಾನ್ ಗೆಲ್ಲಬೇಕು
ಈ ಬಾರಿ ಗೆದ್ದರೆ, ಕಾಮನ್ ಮ್ಯಾನ್ ಗೆಲ್ಲಬೇಕು ಎಂಬುದು ವೀಕ್ಷಕರ ಇಚ್ಛೆ ಆಗಿದೆ.

ಇವರೆಲ್ಲ ಔಟ್ ಆಗಬೇಕು
ಸಿಹಿ ಕಹಿ ಚಂದ್ರು, ಜಗನ್, ಜೆಕೆ ಎಲಿಮಿನೇಟ್ ಆಗಬೇಕು ಅನ್ನೋದು ವೀಕ್ಷಕರ ಅಭಿಪ್ರಾಯ.

ದಿವಾಕರ್ ಗಿದೆ ದೊಡ್ಡ ಅಭಿಮಾನಿ ಬಳಗ
'ಸೇಲ್ಸ್ ಮ್ಯಾನ್' ದಿವಾಕರ್ ಪರ ಹೆಚ್ಚು ವೀಕ್ಷಕರು ಬ್ಯಾಟಿಂಗ್ ಮಾಡುತ್ತಿದ್ದಾರೆ.

ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು
ಸಿಕ್ಕಾಪಟ್ಟೆ ಓವರ್ ಆಗಿ ಆಡುತ್ತಿರುವ ಸೆಲೆಬ್ರಿಟಿಗಳಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕಂತೆ.

ಚಂದನ್ ಶೆಟ್ಟಿ ಮಾತ್ರ ಇಷ್ಟ
ಸೆಲೆಬ್ರಿಟಿ ಸ್ಪರ್ಧಿಗಳ ಪೈಕಿ ವೀಕ್ಷಕರಿಗೆ ಚಂದನ್ ಶೆಟ್ಟಿ ಇಷ್ಟವಾಗುತ್ತಿದ್ದಾರೆ.

ನಿಮ್ಮ ಬೆಂಬಲ ಯಾರಿಗೆ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ನಿಮ್ಮ ಬೆಂಬಲ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...