»   » ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿಗಳೆಲ್ಲ ಒಂದು ಗುಂಪಾಗಿದ್ದರೆ, ಜನಸಾಮಾನ್ಯರದ್ದೇ ಮತ್ತೊಂದು ಗುಂಪು.

ತರಕಾರಿ ಕಟ್ ಮಾಡುವ ವಿಷಯಕ್ಕೆ ದಯಾಳ್ ಪದ್ಮನಾಭನ್ ಆರಂಭಿಸಿದ ವಾದ ಸಮೀರಾಚಾರ್ಯ, ದಿವಾಕರ್ ಹಾಗೂ ರಿಯಾಝ್ ಸುತ್ತ ಸುತ್ತಿ ಕೊನೆಗೆ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ವಾಕ್ಸಮರವೇ ನಡೆದು ಹೋಯ್ತು.

'ಶಾಂತಿ ನಿವಾಸ'ವಾಗಿದ್ದ 'ಬಿಗ್ ಬಾಸ್' ಮನೆಯಲ್ಲಿ ಬೀಸಿದೆ ಅಶಾಂತಿಯ ಬಿರುಗಾಳಿ!

''ದಿವಾಕರ್, ಒರಟ. ಆತ ತಿದ್ದಿಕೊಳ್ಳಲು ಸ್ವಲ್ಪ ಟೈಮ್ ಬೇಕು'' ಅಂತ ರಿಯಾಝ್ ಹೇಳಿದರೆ ಅದನ್ನ ಒಪ್ಪಿಕೊಳ್ಳಲು ಸಿಹಿ ಕಹಿ ಚಂದ್ರು ಹಾಗೂ ದಯಾಳ್ ರೆಡಿ ಇರಲಿಲ್ಲ.

ಅಷ್ಟಕ್ಕೂ, ಆಗಿದ್ದೇನು.? ರಿಯಾಝ್ ಹೇಳಿದ್ದು ಸರಿಯೋ.? ಅಥವಾ ಸಿಹಿ ಕಹಿ ಚಂದ್ರು, ದಯಾಳ್ ವಾದ ಸರಿಯೋ.? ನೀವೇ ನೋಡಿ ನಿರ್ಧರಿಸಿ....

ವಾದ ಆರಂಭ ಆಗಿದ್ದು ಇಲ್ಲಿಂದ...

''ಅಡುಗೆ ಮನೆಯಲ್ಲಿ ನನ್ನ ಜೊತೆ ಯಾರು ಕೆಲಸ ಮಾಡುತ್ತಾರೋ, ಅವರು ವಾದ ಮಾಡದೆ, ಕೌಂಟರ್ ಕೊಡದೆ, ನಾನು ಹೇಳಿದ ಹಾಗೆ ಕೇಳಿದರೆ ನಾನು ಅಡುಗೆ ಡಿಪಾರ್ಟ್ಮೆಂಟ್ ನಲ್ಲಿ ಇರುತ್ತೇನೆ. ಡೈನಿಂಗ್ ಟೇಬಲ್ ಮೇಲೆ ಆರಾಮಾಗಿ ಕೂತುಕೊಂಡು ತರಕಾರಿ ಕಟ್ ಮಾಡುವುದು ನನಗೆ ಇಷ್ಟ ಆಗಲ್ಲ. ನಾನು ಅಡುಗೆ ಮನೆ ನೋಡಿಕೊಳ್ಳಬೇಕು ಅಂದ್ರೆ ನಾನು ಹೇಳಿದ ಹಾಗೆ ಕೇಳಬೇಕು. ಇಲ್ಲ ಅಂದ್ರೆ ನನ್ನ ಡಿಪಾರ್ಟ್ಮೆಂಟ್ ಚೇಂಜ್ ಮಾಡಿ'' ಅಂತ ಕ್ಯಾಪ್ಟನ್ ಶ್ರುತಿ ಬಳಿ ದಯಾಳ್ ಪದ್ಮನಾಭನ್ ಕೇಳಿದರು

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಸಮೀರಾಚಾರ್ಯ ಕೊಟ್ಟ ವಿವರಣೆ

''ಡೈನಿಂಗ್ ಟೇಬಲ್ ಮೇಲೆ ಕಟ್ ಮಾಡಿ ಅಂತ ಯಾರೋ ಹೇಳಿದರು. ಅದಕ್ಕೆ ಅಲ್ಲಿ ಕೂತುಕೊಂಡು ಕಟ್ ಮಾಡಿದೆ. ಇಲ್ಲ ಅಂದ್ರೆ ಮಾಡುತ್ತಿರಲಿಲ್ಲ. ಯಾರು ಹೇಳಿದರು ಅಂತ ಸರಿಯಾಗಿ ನೆನಪಿಲ್ಲ'' ಎಂದು ದಯಾಳ್ ಎತ್ತಿದ ಪ್ರಶ್ನೆಗೆ ಸಮೀರಾಚಾರ್ಯ ಉತ್ತರ ಕೊಟ್ಟರು.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಸಮೀರಾಚಾರ್ಯ ಪರ ದಿವಾಕರ್ ಬ್ಯಾಟಿಂಗ್

ದಿವಾಕರ್: ''ಡೈನಿಂಗ್ ಟೇಬಲ್ ಮೇಲೆ ಕೂತುಕೊಂಡು ತರಕಾರಿ ಕಟ್ ಮಾಡುತ್ತಿರುವಾಗಲೇ, ನೀವು ಹೇಳಿದ್ದರೆ ಅದು ಸರಿ ಹೋಗುತ್ತಿತ್ತು. ವಿಷಯ ಅಲ್ಲಿಗೆ ಮುಗಿದು ಹೋಗುತ್ತಿತ್ತು''

ದಯಾಳ್ ಪದ್ಮನಾಭನ್: ''ಒಂದು ಸಲ ಹೇಳುತ್ತೇನೆ, ಅವರು ಕೇಳಲಿಲ್ಲ ಅಂದ್ರೆ ಅವರ ಹತ್ತಿರ ನಾನು ಹೋಗಲ್ಲ''

ಸಿಹಿ ಕಹಿ ಚಂದ್ರು ವಾದ ಏನು.?

ಸಿಹಿ ಕಹಿ ಚಂದ್ರು : ''ಜಾಗ ಇಲ್ಲದೆ ಇದ್ದಾಗ ಕಟ್ ಮಾಡಿದರೆ ಓಕೆ. ಅಡುಗೆ ಮನೆಯಲ್ಲಿ ಜಾಗ ಇದ್ದರೂ ಬೇರೆ ಕಡೆ ಕೂತು ಕಟ್ ಮಾಡಿದ್ದು ತಪ್ಪು. ಅದನ್ನ ನಾವು ಯಾಕೆ ಹೇಳಬೇಕು. ಅದು ನಿಮ್ಮ ತಲೆಗೆ ಬರಬೇಕು. ಪ್ರತಿ ಹಂತದಲ್ಲೂ, ಪ್ರತಿ ಕೆಲಸಕ್ಕೂ, ಹೇಳಿ ಮಾಡಿಸಲು ನಾವು ಯಾರು.?''

ದಿವಾಕರ್: ''ಹೇಳಿ ಮಾಡಿಸಿ ಅಂತ ಅಲ್ಲ. ಮಾಡುವಾಗ ಹೇಳಿದರೆ, ಕೆಲಸ ಆಗುತ್ತೆ. ಮುಗಿದು ಹೋದ್ಮೇಲೆ ಹೇಳಿದರೆ ಏನು ಪ್ರಯೋಜನ.?''

ಮಧ್ಯ ಪ್ರವೇಶಿಸಿದ ರಿಯಾಝ್

ಸಿಹಿ ಕಹಿ ಚಂದ್ರು ಹಾಗೂ ದಿವಾಕರ್ ನಡುವೆ ವಾಗ್ವಾದ ಜೋರಾಗುತ್ತಿದ್ದಂತೆಯೇ, ರಿಯಾಝ್ ಮಧ್ಯ ಪ್ರವೇಶಿಸಿದರು.

ರಿಯಾಝ್-ಸಿಹಿ ಕಹಿ ಚಂದ್ರು ನಡುವಿನ ವಾಗ್ವಾದ

ರಿಯಾಝ್ : ''ಅವನು (ದಿವಾಕರ್) ಸ್ವಲ್ಪ ಒರಟ. ಮೂವತ್ತು ವರ್ಷದಿಂದ ಹೀಗೆ ಬೆಳೆದಿದ್ದಾನೆ. ಮೂರು ದಿನದಲ್ಲಿ ತಿದ್ದಲು ಹೇಗೆ ಸಾಧ್ಯ.? ಟೈಮ್ ತೆಗೆದುಕೊಳ್ಳುತ್ತಾನೆ''

ಸಿಹಿ ಕಹಿ ಚಂದ್ರು: ''55 ವರ್ಷದಿಂದ ನಾನು ಬೇರೆ ತರಹ ಬೆಳೆದಿದ್ದೇನೆ. ಆ ತರಹ ಇಲ್ಲ ನಾನು ಇಲ್ಲಿ. ಅದು ಬಿಟ್ಟು ನಾನು ಇರೋದೇ ಹೀಗೆ ಅಂದ್ರೆ ಏನು ಅರ್ಥ.? ಮೂರು ದಿನದಲ್ಲೇ ಗೊತ್ತಾಗಬೇಕು ನಾನು ಹೇಗೆ ಬದುಕಬೇಕು ಅಂತ.!''

ರಿಯಾಝ್ : ''ಆ ತರಹ ನಾನು ಹೇಳಲಿಲ್ಲ. ದಿವಾಕರ್ ಇರೋದೇ ಹೀಗೆ. ಅವನು ಚೇಂಜ್ ಆಗಲ್ಲ ಅಂತ ನಾನು ಹೇಳಲಿಲ್ಲ. ಸ್ವಲ್ಪ ಟೈಮ್ ಬೇಕು ಅಂತ ಹೇಳಿದೆ ಅಷ್ಟೆ''

ಸಿಹಿ ಕಹಿ ಚಂದ್ರು : ''ಟೈಮ್ ಕೊಡೋಕೆ ಆಗಲ್ಲ. ಬೇರೆಯವರಿಗೆ ತೊಂದರೆ ಆಗುತ್ತೆ''

ಕ್ಯಾಮರಾ ಮುಂದೆ ರಿಯಾಝ್ ಹೇಳಿದ್ದೇನು.?

''ಒಬ್ಬೊಬ್ಬರು ಒಂದೊಂದು ತರಹ ಆಡುತ್ತಿದ್ದಾರೆ. ಗುಂಪುಗುಂಪಾಗಿ ತಮ್ಮ ತಮ್ಮ ಗುಂಪಿನ ಪರ ಸಪೋರ್ಟ್ ಮಾಡುತ್ತಿದ್ದಾರೆ. ಒಬ್ಬ ಒರಟ, ತಿದ್ದುಕೊಳ್ಳಲು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾನೆ. ಬುದ್ಧಿ ಹೇಳಬೇಕು ನಿಜ. ಆದ್ರೆ, ಇಲ್ಲಿ ಇವತ್ತಿಗೇ ಎಲ್ಲ ಸರಿ ಹೋಗಬೇಕು ಅಂದ್ರೆ ಹೇಗೆ ಸಾಧ್ಯ.? ಮನುಷ್ಯತ್ವ ಅನ್ನೋದು ಅದೇ. ಇಲ್ಲಿ ನಡೆಯುತ್ತಿರುವುದು ತಪ್ಪು. ನಾನು ಇಲ್ಲಿ ಇರುವವರೆಗೂ ಹೇಳಿಕೊಡುತ್ತೇನೆ'' ಎಂದು ಕ್ಯಾಮರಾ ಮುಂದೆ ರಿಯಾಝ್ ಹೇಳಿಕೊಂಡರು.

ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ...

ರಿಯಾಝ್ ಹೇಳಿದ್ದು ಸರಿಯೋ.? ಅಥವಾ ಸಿಹಿ ಕಹಿ ಚಂದ್ರು, ದಯಾಳ್ ವಾದ ಸರಿಯೋ.? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Bigg Boss Kannada 5: Week 2: Riyaz supports Divakar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X