»   » ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯೊಳಗೆ ನಿರ್ದೇಶಕ ದಯಾಳ್ ಪದ್ಮನಾಭನ್ ಕಾಲಿಟ್ಟಾಗ, ಬಹುಶಃ ಗ್ರ್ಯಾಂಡ್ ಫಿನಾಲೆ ವರೆಗೂ ಅವರು ಹೋಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ದಯಾಳ್ ಘಟಾನುಘಟಿ ಸ್ಪರ್ಧಿ ಎಂಬ ಭಾವ 'ಬಿಗ್ ಬಾಸ್' ಮನೆಯ ಸದಸ್ಯರಲ್ಲೂ ಮೂಡಿತ್ತು. ಆದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೂರನೇ ವಾರಕ್ಕೆ ನಿರ್ದೇಶಕ ದಯಾಳ್ ಪದ್ಮನಾಭನ್ ಔಟ್ ಆಗಿದ್ದಾರೆ.!

ಹೌದು, ಮೂರು ವಾರದಲ್ಲಿ ಇದೇ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯಿಂದ ಸೆಲೆಬ್ರಿಟಿ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ. ಮೊದಲ ಎರಡು ವಾರ 'ದೊಡ್ಮನೆ'ಯಿಂದ ಜನಸಾಮಾನ್ಯ ಸ್ಪರ್ಧಿಗಳು ಔಟ್ ಆಗಿದ್ದರು. ಮೂರನೇ ವಾರ ದಯಾಳ್ ಪದ್ಮನಾಭನ್ ಗೆ ಗೇಟ್ ಪಾಸ್ ಸಿಕ್ಕಿರುವುದು ಸೆಲೆಬ್ರಿಟಿ ಸ್ಪರ್ಧಿಗಳಿಗೆ 'ಬಿಗ್' ಶಾಕ್ ತಂದಿದೆ. ಮುಂದೆ ಓದಿರಿ....

ಅತಿ ಕಡಿಮೆ ವೋಟ್

ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಿರ್ದೇಶಕ ದಯಾಳ್ ಪದ್ಮನಾಭನ್ ರವರಿಗೆ ಕಮ್ಮಿ ವೋಟುಗಳು ಬಿದ್ದಿದ್ರಿಂದ ಅವರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ.

ಜನಸಾಮಾನ್ಯರನ್ನ ಔಟ್ ಮಾಡುತ್ತಿರುವ 'ಬಿಗ್ ಬಾಸ್'ಗೆ ವೀಕ್ಷಕರ ಧಿಕ್ಕಾರ.!

ಏಳು ಮಂದಿ ನಾಮಿನೇಟ್ ಆಗಿದ್ದರು

ರಿಯಾಝ್, ಜಯಶ್ರೀನಿವಾಸನ್, ನಿವೇದಿತಾ ಗೌಡ, ದಿವಾಕರ್, ಶ್ರುತಿ ಪ್ರಕಾಶ್, ಅನುಪಮಾ ಗೌಡ ಹಾಗೂ ದಯಾಳ್ ಕಳೆದ ವಾರ ನಾಮಿನೇಟ್ ಆಗಿದ್ದರು. ಏಳು ಮಂದಿ ಪೈಕಿ ದಯಾಳ್ ರವರಿಗೆ ಮನೆಯಿಂದ ಹೊರಹೋಗಲು ಗೇಟ್ ಪಾಸ್ ಸಿಕ್ಕಿದೆ.

ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!

ಐದು ಜನ ನಾಮಿನೇಟ್ ಮಾಡಿದ್ದರು

ಜಯಶ್ರೀನಿವಾಸನ್, ರಿಯಾಝ್, ನಿವೇದಿತಾ ಗೌಡ, ಸಿಹಿ ಕಹಿ ಚಂದ್ರು, ಚಂದನ್ ಶೆಟ್ಟಿ... ದಯಾಳ್ ಪದ್ಮನಾಭನ್ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಕಳುಹಿಸಲು ಮತ ಚಲಾಯಿಸಿದ್ದರು.

'ಬಿಗ್ ಬಾಸ್ ಕನ್ನಡ-5': ಮೂರನೇ ವಾರ ಗೇಟ್ ಪಾಸ್ ಯಾರಿಗೆ.?

ಮೊದಲ ಸೆಲೆಬ್ರಿಟಿ ಔಟ್

'ಬಿಗ್ ಬಾಸ್' ಮನೆಯಲ್ಲಿ ಮೊದಲ ಎರಡು ವಾರ 'ಕಾಮನ್ ಮ್ಯಾನ್' ಸ್ಪರ್ಧಿಗಳು ಔಟ್ ಆಗಿದ್ದರು. ಇದೀಗ ಮೊದಲ ಬಾರಿಗೆ ಸೆಲೆಬ್ರಿಟಿ ಸ್ಪರ್ಧಿಯಾದ ದಯಾಳ್ ಪದ್ಮನಾಭನ್ ಹೊರಬಿದ್ದಿದ್ದಾರೆ. ಇದರಿಂದ ಇತರೆ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಬಿಸಿ ಮುಟ್ಟಿದಂತಾಗಿದೆ.

English summary
Bigg Boss Kannada 5: Week 3: Dayal Padmanabhan eliminated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X