»   » ಇನ್ಮುಂದೆ 'ಬಿಗ್ ಬಾಸ್' ಮನೆಯಲ್ಲಿ ಸಿಹಿ ಕಹಿ ಚಂದ್ರು ಅಡುಗೆ ಮಾಡಲ್ವಂತೆ.!

ಇನ್ಮುಂದೆ 'ಬಿಗ್ ಬಾಸ್' ಮನೆಯಲ್ಲಿ ಸಿಹಿ ಕಹಿ ಚಂದ್ರು ಅಡುಗೆ ಮಾಡಲ್ವಂತೆ.!

Posted By:
Subscribe to Filmibeat Kannada
Bigg Boss Kannada Season 5 : ಇನ್ಮುಂದೆ ಅಡುಗೆ ಮಾಡೋದಿಲ್ಲ ಅಂದ್ರು ಸಿಹಿ ಕಹಿ ಚಂದ್ರು | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎಲ್ಲಾ ಕಿತ್ತಾಟಗಳ ಕೇಂದ್ರ ಬಿಂದು 'ಅಡುಗೆ ಮನೆ'.!

ಬರೀ ಊಟದ ವಿಚಾರಕ್ಕೆ ಸ್ಪರ್ಧಿಗಳು ಜಗಳ ಆಡುತ್ತಿರುವುದು ಒಂದ್ಕಡೆ ಆದರೆ... ಪದೇ ಪದೇ ಗ್ಯಾಸ್ ಆಫ್ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಸ್ಪರ್ಧಿಗಳು ಇನ್ನೊಂದು ಕಡೆ.

ಈಗಾಗಲೇ ಅನೇಕ ಬಾರಿ ಗ್ಯಾಸ್ ಆಫ್ ಮಾಡದ ಕಾರಣ ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ಇಷ್ಟಾದರೂ, 'ಬಿಗ್ ಬಾಸ್' ಸ್ಪರ್ಧಿಗಳು ಎಚ್ಚರಗೊಂಡಿಲ್ಲ.

ಟಾಸ್ಕ್ ಗಡಿಬಿಡಿಯಲ್ಲಿ ಸಿಹಿ ಕಹಿ ಚಂದ್ರು ಗ್ಯಾಸ್ ಆಫ್ ಮಾಡದ ಕಾರಣ, ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ತಮ್ಮಿಂದ ಈ ತಪ್ಪು ಪುನರಾವರ್ತಿತವಾದ ಕಾರಣ ''ಇನ್ಮೇಲೆ ಅಡುಗೆ ಮಾಡಲ್ಲ'' ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ. ಮುಂದೆ ಓದಿರಿ...

ಸಿಹಿ ಕಹಿ ಚಂದ್ರು ಚಪಾತಿ ಮಾಡುತ್ತಿದ್ದಾಗ....

ರಾತ್ರಿ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಶುರು ಆಯ್ತು. ಚಪಾತಿ ಮಾಡುತ್ತಿದ್ದ ಸಿಹಿ ಕಹಿ ಚಂದ್ರು, ಗ್ಯಾಸ್ ಆಫ್ ಮಾಡದೆ ಗಾರ್ಡನ್ ಏರಿಯಾಗೆ ತೆರಳಿದರು.

'ಬಿಗ್ ಬಾಸ್' ಮುಂದೆ ತಲೆ ತಗ್ಗಿಸಿದ ಸಿಹಿಕಹಿ ಚಂದ್ರು.! ಇದು ಅವಮಾನದ ವಿಚಾರ.!

ಜೆಕೆ, ಜಗನ್ ಗೆ ಸಿಟ್ಟು

ಮತ್ತೊಂದು ಬಾರಿ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡಿದೆ ಎಂದು ತಿಳಿದ ಕೂಡಲೆ, ''ಈ ಕಡೆ ತಿನ್ನುವುದಕ್ಕೂ ಇಲ್ಲ, ಆ ಕಡೆ ಗ್ಯಾಸ್ ಕೂಡ ಇಲ್ಲ'' ಎಂದು ಜಗನ್ನಾಥ್ ಸಿಟ್ಟಾದರು. ಇತ್ತ ಜೆಕೆ, ''ಮನೆಯಲ್ಲೂ ನಾವು ಹೀಗೆ ಮಾಡಲ್ಲ'' ಎನ್ನುತ್ತ ತಮ್ಮ ಅಸಮಾಧಾನವನ್ನ ಹೊರ ಹಾಕಿದರು.

ಇನ್ಮುಂದೆ ಅಡುಗೆ ಮಾಡಲ್ಲ

''ಟಾಸ್ಕ್ ಶುರು ಆಗುವ ಗಡಿಬಿಡಿಯಲ್ಲಿ ತಪ್ಪು ಮಾಡಿಬಿಟ್ಟೆ. ಮರೆವು ಜಾಸ್ತಿ ಆಗುತ್ತಿದೆ ಅನ್ಸುತ್ತೆ. ನಾನು ಇನ್ನೂ ಅಡುಗೆ ಮಾಡಲ್ಲ. ದಯವಿಟ್ಟು ನನ್ನನ್ನ ಕ್ಷಮಿಸಿ. ನೀವು ನನಗೆ ಏನು ಶಿಕ್ಷೆ ಕೊಟ್ಟರೂ, ಅನುಭವಿಸಲು ನಾನು ರೆಡಿ'' ಎಂದು ಕ್ಯಾಮರಾ ಮುಂದೆ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದರು.

ನಿಮ್ಮ ಅಭಿಪ್ರಾಯ ಏನು.?

'ಬಿಗ್ ಬಾಸ್' ಮನೆಯ ಗ್ಯಾಸ್ ಪ್ರಾಬ್ಲಂ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ....

English summary
Bigg Boss Kannada 5: Week 6: ''I won't cook anymore at #BBK5 house'' says Sihi Kahi Chandru
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada