Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾರವಿಡೀ ಗಳಿಸಿದ್ದನ್ನ ಒಂದೇ ನಿಮಿಷದಲ್ಲಿ ಹಾಳು ಮಾಡಿದ ಚಂದ್ರು, ಅನು.!

'ಬಿಗ್ ಬಾಸ್' ಕನ್ನಡ ಇತಿಹಾಸದಲ್ಲಿ ನಾಲ್ಕು ಸೀಸನ್ ಗಳು ಕಳೆದಿವೆ. ಈ ನಾಲ್ಕು ಸೀಸನ್ ಗಳಲ್ಲಿ ತರಹೇವಾರಿ ಕಿತ್ತಾಟ, ಜಗಳ, ರಾದ್ಧಾಂತಗಳು ನಡೆದಿವೆ. ಆದ್ರೆ, ತಿಂಡಿ-ಊಟದ ವಿಚಾರಕ್ಕೆ ಯುದ್ಧ ನಡೆಯುತ್ತಿರುವುದು ಬಹುಶಃ ಇದೇ ಮೊದಲು.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲ ದಿನದಿಂದಲೂ ಹಾಲು, ಹಣ್ಣು, ಐಸ್ ಕ್ರೀಮ್, ಬಿಸ್ಕತ್ತುಗಳಿಗಾಗಿ ಕೋಲಾಹಲ ನಡೆಯುತ್ತಲೇ ಇದೆ.!
''ಬಿಗ್ ಬಾಸ್' ಕಳುಹಿಸುವ ರೇಷನ್ ತುಂಬಾ ಕಮ್ಮಿ'' ಅಂತ ಸ್ಪರ್ಧಿಗಳು ದೂರುತ್ತಾರೆ. ಆದ್ರೀಗ, ಅದೇ 'ಬಿಗ್ ಬಾಸ್' ನೀಡುವ ಲಕ್ಷುರಿ ಬಜೆಟ್ ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಸ್ಪರ್ಧಿಗಳು ಅಕ್ಷರಶಃ ಸೋತಿದ್ದಾರೆ. ಇಬ್ಬರು ಮಾಡಿದ ಎಡವಟ್ಟಿನಿಂದಾಗಿ ಇಡೀ ಮನೆಗೆ ಲಕ್ಷುರಿ ಬಜೆಟ್ ಮಿಸ್ ಆಗಿದೆ. ಮುಂದೆ ಓದಿರಿ....

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ
ಎಲ್ಲ ಸ್ಪರ್ಧಿಗಳಿಗೂ ಬೇಕಾಗಿರುವ ಸಾಮಾಗ್ರಿಗಳನ್ನ, ನೀಡಲಾದ ಸಮಯದಲ್ಲಿ ಲಕ್ಷುರಿ ಬಜೆಟ್ ಶಾಪಿಂಗ್ ಮಾಡುವ ಜಾಣತನ ಸ್ಪರ್ಧಿಗಳಿಗೆ ಇರಬೇಕು. ಅದು ಇರಲಿಲ್ಲ ಅಂದ್ರೆ, 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬಂತಾಗುತ್ತೆ. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಆಗಿರುವುದು ಇದೇ.!
ಎಲ್ಲರಿಗೂ ಒಂದೇ ನ್ಯಾಯ, ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಇಲ್ಲ.!

ನಾಲ್ಕು ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ಸ್ ಇತ್ತು
ಕಳೆದ ವಾರ 'ಮ್ಯೂಸಿಕಲ್ ಚೇರ್' ಟಾಸ್ಕ್ ನಲ್ಲಿ ಎಲ್ಲರೂ ಚೆನ್ನಾಗಿ ಪರ್ಫಾಮ್ ಮಾಡಿದ ಕಾರಣ 'ಬಿಗ್ ಬಾಸ್' ನಾಲ್ಕು ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನು ನೀಡಿದ್ದರು.
ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!

ಜೆಕೆಯಿಂದ ಒಂದು ಸಾವಿರ ಲಾಸ್
ಸೀಕ್ರೆಟ್ ಟಾಸ್ಕ್ ನಿಭಾಯಿಸುವಲ್ಲಿ ಜೆಕೆ ವಿಫಲರಾದ ಕಾರಣ, ಒಂದು ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ ಗಳನ್ನ 'ಬಿಗ್ ಬಾಸ್' ಕಡಿತಗೊಳಿಸಿದರು. ಒಬ್ಬರಿಂದಲೇ, ಒಂದು ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ ಹೋಗಿದ್ದಕ್ಕೆ, ಕ್ಯಾಪ್ಟನ್ ಆಗಿದ್ದ ಚಂದನ್ ಶೆಟ್ಟಿ, ಜೆಕೆಗೆ 'ಕಳಪೆ' ಬೋರ್ಡ್ ನೀಡಿದರು.
ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ.!

ಚಂದ್ರು-ಅನು ಕೈಯಲ್ಲಿತ್ತು ಲಕ್ಷುರಿ ಬಜೆಟ್
ಉಳಿದಿದ್ದ ಮೂರು ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ ಗಳಲ್ಲಿ ಸ್ಪರ್ಧಿಗಳು ಶಾಪಿಂಗ್ ಮಾಡಬೇಕಿತ್ತು. ಲಕ್ಷುರಿ ಬಜೆಟ್ ಶಾಪಿಂಗ್ ಮಾಡಲು ಮುಂದೆ ಬಂದವರು ಸಿಹಿ ಕಹಿ ಚಂದ್ರು ಹಾಗೂ ಅನುಪಮಾ ಗೌಡ.
ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ಶಾಪಿಂಗ್ ಪಟ್ಟಿ...
ಬಝರ್ ಆಗುವ ಮೊದಲೇ ಬೋರ್ಡ್ ಮೇಲೆ 'ಚಿಕನ್' ಅಂತ ಸಿಹಿ ಕಹಿ ಚಂದ್ರು ಬರೆದುಬಿಟ್ಟರು. ಬಳಿಕ ಅವಲಕ್ಕಿ, ಪನ್ನೀರ್, ಫ್ಲೇವರ್ಡ್ ಕಾಫಿ, ತುಪ್ಪ ಹಾಗೂ ಉಪ್ಪಿನಕಾಯಿಯನ್ನ ಅನುಪಮಾ ಗೌಡ ಹೇಳಿದಂತೆ ಸಿಹಿ ಕಹಿ ಚಂದ್ರು ಬರೆದರು.

ಲೆಕ್ಕ ತಪ್ಪಾಯ್ತು
ಒಂದು ಕಡೆ ಮೂರು ಕೆಜಿ ಚಿಕನ್ ಲೆಕ್ಕ ತಪ್ಪಾಯ್ತು. ಇನ್ನೊಂದು ಕಡೆ 'ಪನ್ನೀರ್ ಬೇಡ, ತೆಗೆಯಿರಿ' ಅಂತ ಉಳಿದವರೂ ಹೇಳುತ್ತಿದ್ದರೂ, ಅದನ್ನ ಸಿಹಿ ಕಹಿ ಚಂದ್ರು ತೆಗೆಯಲಿಲ್ಲ. ಲೆಕ್ಕ ತಪ್ಪಾಯ್ತು, ಸಮಯ ಕೂಡ ಮುಗಿದು ಹೋಯ್ತು.! ಕೊಟ್ಟ ಸಮಯದಲ್ಲಿ ಸರಿಯಾಗಿ ಶಾಪಿಂಗ್ ಮಾಡದೆ, ಲೆಕ್ಕ ತಪ್ಪು ಮಾಡಿದ್ರಿಂದಾಗಿ 'ಬಿಗ್ ಬಾಸ್' ಲಕ್ಷುರಿ ಬಜೆಟ್ ನೀಡಲಿಲ್ಲ.

ಜೆಕೆಗೆ ಬೇಸರ
''ನನಗೆ ತುಂಬಾ ಬೇಜಾರು ಆಗಿದ್ದು ಅಂದ್ರೆ ಲಕ್ಷುರಿ ಬಜೆಟ್ ಲಾಸ್ ಆದಾಗ... ಚಿಟಿಕೆ ಹೊಡೆಯುವಷ್ಟರಲ್ಲಿ ಲಾಸ್ ಆಗೋಯ್ತು. ತುಂಬಾ ಬೇಜಾರಾಯ್ತು ನನಗೆ. ಕಳೆದ ವಾರ ನಾವು ಎಷ್ಟು ನೀಟಾಗಿ ಪ್ಲಾನ್ ಮಾಡಿದ್ವಿ. ಈ ವಾರ ನಮಗಿನ್ನೂ ನಲವತ್ತು ಸೆಕೆಂಡ್ ಟೈಮ್ ಇತ್ತು'' ಎಂದು ಜಯರಾಂ ಕಾರ್ತಿಕ್ ಬೇಸರ ವ್ಯಕ್ತಪಡಿಸಿದರು.

ಇಬ್ಬರ ಎಡವಟ್ಟಿನಿಂದ ಎಲ್ಲವೂ ಲಾಸ್
''ನನ್ನಿಂದ ಒಂದು ಸಾವಿರ ಲಾಸ್ ಆಯ್ತು ಅಂತ ಕಳಪೆ ಬೋರ್ಡ್ ಕೊಟ್ಟರು. ಈಗ ಪೂರ್ತಿ ಹೋಯ್ತಲ್ಲ, ಅದಕ್ಕೇನು.? ಕಳಪೆ ಬೋರ್ಡ್ ಹಾಕೊಂಡಿದ್ದಕ್ಕೆ ಬೇಜಾರು ಇಲ್ಲ. ಆದ್ರೆ, ಲಕ್ಷುರಿ ಬಜೆಟ್ ಪೂರ್ತಿ ಹೋಯ್ತಲ್ಲ.!'' ಎಂದು ಅಸಮಾಧಾನಗೊಂಡಿದ್ದರು ಜೆ.ಕೆ.