»   » ರಿಯಾಝ್ ಔಟ್, ಅನುಪಮಾಗೆ ಶಾಕ್: ಇದು ಸುದೀಪ್ 'ಡ್ರಾಮಾ'.!

ರಿಯಾಝ್ ಔಟ್, ಅನುಪಮಾಗೆ ಶಾಕ್: ಇದು ಸುದೀಪ್ 'ಡ್ರಾಮಾ'.!

Posted By:
Subscribe to Filmibeat Kannada
Bigg Boss Kannada Season 5 : ಸ್ಪರ್ಧಿಗಳಿಗೆ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟ ಸುದೀಪ್ | Filmibeat Kannada

'ಬಿಗ್ ಬಾಸ್ ಕನ್ನಡ-5' ವೀಕ್ಷಕರಿಗೆ ಈಗಾಗಲೇ ಗೊತ್ತಿರುವ ಹಾಗೆ, ಆರನೇ ವಾರ ಎಲಿಮಿನೇಷನ್ ಇರಲಿಲ್ಲ. ನಾಮಕಾವಸ್ತೆಗೆ ನಾಮಿನೇಷನ್ ಪ್ರಕ್ರಿಯೆ ನಡೆದರೂ, ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರೂ ಔಟ್ ಆಗಲ್ಲ ಎಂಬ ಸಂಗತಿ 'ಕಲರ್ಸ್ ಸೂಪರ್' ವೀಕ್ಷಕರಿಗೆ ಗೊತ್ತಿತ್ತು.

ಆದ್ರೆ, ಈ ಸತ್ಯ 'ಬಿಗ್ ಬಾಸ್' ಸ್ಪರ್ಧಿಗಳಿಗೆ ತಿಳಿದಿರಲಿಲ್ಲ. ಐದು ವಾರಗಳಲ್ಲಿ ನಡೆದ ಹಾಗೆ, ಈ ವಾರವೂ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಮನಸ್ಥಿತಿಯಲ್ಲಿಯೇ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳಿದ್ದರು.

ಹೀಗಿರುವಾಗಲೇ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುದೀಪ್, ಈ ವಾರ 'ಡಬಲ್ ಎಲಿಮಿನೇಷನ್' ಇದೆ ಎಂದು ಸ್ಪರ್ಧಿಗಳಿಗೆಲ್ಲ ಶಾಕ್ ನೀಡಿ 'ಡ್ರಾಮಾ' ಆರಂಭಿಸಿದರು. ಮುಂದೆ ಓದಿರಿ,,,,

ಡಬಲ್ ಎಲಿಮಿನೇಷನ್ ಎಂದ ಸುದೀಪ್.!

ವೇದಿಕೆ ಮೇಲೆ ಎಂಟ್ರಿಕೊಡುತ್ತಿದ್ದಂತೆಯೇ, ಈ ವಾರ ''ಡಬಲ್ ಎಲಿಮಿನೇಷನ್ ಇದೆ'' ಎಂದು ಸ್ಪರ್ಧಿಗಳಿಗೆಲ್ಲ ಕಿಚ್ಚ ಸುದೀಪ್ ಶಾಕ್ ನೀಡಿದರು.

'ಬಿಗ್ ಬಾಸ್': ಈ ವಾರ ಯಾರಿಗೂ ವೋಟ್ ಮಾಡಿ ಹಣ ವ್ಯರ್ಥ ಮಾಡಬೇಡಿ.!

'ಬಿಗ್ ಬಾಸ್' ಇತಿಹಾಸದಲ್ಲಿಯೇ ಮೊದಲ ಬಾರಿಗೆ...

''ಬಿಗ್ ಬಾಸ್' ಇತಿಹಾಸದಲ್ಲಿಯೇ ಮೊದಲ ಬಾರಿಗೆ, ವೀಕ್ಷಕರ ವೋಟಿಂಗ್ ಪ್ರಕಾರ ಒಬ್ಬರು ಎಲಿಮಿನೇಟ್ ಆದರೆ, ಎಲಿಮಿನೇಟ್ ಆದ ಸ್ಪರ್ಧಿಗೆ ಸಿಗುವ ಸೂಪರ್ ಅಧಿಕಾರದ ಅನುಸಾರ ನಾಮಿನೇಟ್ ಆಗಿದ್ದ ಉಳಿದ ಏಳು ಸ್ಪರ್ಧಿಗಳ ಪೈಕಿ ಒಬ್ಬರನ್ನ ಹೊರಗೆ ಕರೆದುಕೊಂಡು ಹೋಗುತ್ತಾರೆ'' ಎನ್ನುವ ಮೂಲಕ ಸ್ಪರ್ಧಿಗಳಿಗೆ ಡಬಲ್ ಶಾಕ್ ಕೊಟ್ಟರು ಸುದೀಪ್

ಮತ್ತೆ ಸೆಲೆಬ್ರಿಟಿಗೆ ಅವಕಾಶ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕೃಷಿ ತಾಪಂಡ.!

ವೀಕ್ಷಕರ ವೋಟ್ ಲೆಕ್ಕಕ್ಕಿಲ್ಲ.!

''ಎಲಿಮಿನೇಟ್ ಆಗಿರುವ ಸ್ಪರ್ಧಿ, ಎಲಿಮಿನೇಷನ್ ಗೆ ಆಯ್ಕೆ ಮಾಡುವ ಮತ್ತೊಬ್ಬ ಸ್ಪರ್ಧಿಯ ವೋಟುಗಳು ಲೆಕ್ಕಕ್ಕೆ ಬರುವುದಿಲ್ಲ'' ಎಂದು ಸುದೀಪ್ ಹೇಳುತ್ತಿದ್ದರೆ, ಸ್ಪರ್ಧಿಗಳೆಲ್ಲ ಮಾತೇ ಹೊರಡುತ್ತಿರಲಿಲ್ಲ.

'ಬಿಗ್ ಬಾಸ್': ಈ ವಾರ ಯಾರಿಗೂ ವೋಟ್ ಮಾಡಿ ಹಣ ವ್ಯರ್ಥ ಮಾಡಬೇಡಿ.!

ರಿಯಾಝ್ ಔಟ್

ನಾಮಿನೇಟ್ ಆಗಿದ್ದ ಎಂಟು ಸ್ಪರ್ಧಿಗಳನ್ನು ಸೇಫ್ ಮಾಡಿದ ಬಳಿಕ ''ರಿಯಾಝ್ ಎಲಿಮಿನೇಟ್ ಆಗಿದ್ದಾರೆ'' ಎಂದು ಸುದೀಪ್ ಘೋಷಿಸಿದರು. ಜೊತೆಗೆ ಉಳಿದ ಏಳು ನಾಮಿನೇಟೆಡ್ ಸ್ಪರ್ಧಿಗಳ ಪೈಕಿ ಒಬ್ಬರನ್ನು ಎಲಿಮಿನೇಟ್ ಮಾಡುವ ಅಧಿಕಾರವನ್ನ ರಿಯಾಝ್ ಗೆ ಸುದೀಪ್ ನೀಡಿದರು.

ಅನುಪಮಾಗೆ ಶಾಕ್.!

ಸಿಹಿ ಕಹಿ ಚಂದ್ರು, ಅನುಪಮಾ ಗೌಡ, ಸಮೀರಾಚಾರ್ಯ, ಜಯಶ್ರೀನಿವಾಸನ್, ಜಗನ್, ಶ್ರುತಿ ಪ್ರಕಾಶ್ ಹಾಗೂ ಚಂದನ್ ಶೆಟ್ಟಿ ಪೈಕಿ ಅನುಪಮಾ ಗೌಡರವರನ್ನ ಎಲಿಮಿನೇಟ್ ಮಾಡುವುದಾಗಿ ರಿಯಾಝ್ ತಿಳಿಸಿದರು. ಇದರಿಂದಾಗಿ ಅನುಪಮಾ ಗೌಡ ಶಾಕ್ ಆದರು.

ಇನ್ನೇನು ಹೊರಗೆ ಹೋಗಬೇಕು.!

ರಿಯಾಝ್ ಮತ್ತು ಅನುಪಮಾ ಗೌಡ.. ಇನ್ನೇನು 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಬೇಕು ಎನ್ನುವಷ್ಟರಲ್ಲಿ ಕೃಷಿ ತಾಪಂಡ ಎಂಟ್ರಿಕೊಟ್ಟರು.

'ನವೆಂಬರ್ ಫೂಲ್' ಎಂದ ಸುದೀಪ್

''ಆರನೇ ವಾರ 'ನೋ ಎಲಿಮಿನೇಷನ್ ವೀಕ್' ಆಗಿದ್ರಿಂದ 'ಬಿಗ್ ಬಾಸ್' ಮನೆಯಿಂದ ಯಾರೂ ಹೊರಗೆ ಹೋಗುವುದಿಲ್ಲ. ನವೆಂಬರ್ ಫೂಲ್'' ಎಂದು ಸುದೀಪ್ ಹೇಳಿದ್ಮೇಲೆ ಸ್ಪರ್ಧಿಗಳ ಮೊಗದಲ್ಲಿ ಮಂದಹಾಸ ಮೂಡಿತು.

ಸೀಕ್ರೆಟ್ ರೂಮ್ ಕೂಡ ಇಲ್ಲ.!

ರಿಯಾಝ್ ಹಾಗೂ ಅನುಪಮಾ ಗೌಡ ರವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸಬಹುದು ಎಂದು ವೀಕ್ಷಕರು ಲೆಕ್ಕಾಚಾರ ಹಾಕಿದ್ದರು. ಆದರೆ, ಅದೂ ಸುಳ್ಳಾಗಿದೆ.

English summary
Bigg Boss Kannada 5: Week 6: Sudeep gives double elimination shock for contestants during 'No Elimination Week'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada