Don't Miss!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- News
Occupancy Certificate Fraud: ಆಂತರಿಕ ತನಿಖೆ ನಡೆಸಲು ಬಿಬಿಎಂಪಿ ಕಟ್ಟುನಿಟ್ಟಿನ ನಿರ್ದೇಶನ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜನಾಭಿಪ್ರಾಯಕ್ಕೆ ಮಣಿದು 'ಬಿಗ್ ಬಾಸ್' ಮನೆಯಿಂದ ಹೊರಬಂದ 'ಜಗಳಗಂಟ' ಜಗನ್.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಜನಾಭಿಪ್ರಾಯ'ವೇ ಅಂತಿಮ ಎಂಬ ಮಾತು ಮತ್ತೆ ಸಾಬೀತಾಗಿದೆ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ ಆಶಿತಾ, ಜಗನ್, ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್, ತೇಜಸ್ವಿನಿ, ಅನುಪಮಾ ಗೌಡ ಬಗ್ಗೆ ವೀಕ್ಷಕರಲ್ಲಿ ಉತ್ತಮ ಅಭಿಪ್ರಾಯ ಇರಲಿಲ್ಲ.
ವೀಕ್ಷಕರ ಇಚ್ಛೆಯಂತೆ ದಯಾಳ್, ಸಿಹಿ ಕಹಿ ಚಂದ್ರು, ತೇಜಸ್ವಿನಿ, ಆಶಿತಾ ಈಗಾಗಲೇ ತಮ್ಮ ಮನೆ ಕಡೆ ಹೆಜ್ಜೆ ಹಾಕಿದ್ದಾಗಿದೆ. ಈಗ ಜಗನ್ನಾಥ್ ಚಂದ್ರಶೇಖರ್ ಸರದಿ.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅನೇಕ ಬಾರಿ ಜಗಳ ಮಾಡಿ 'ಜಗಳಗಂಟ' ಅಂತಲೇ 'ಕು'ಖ್ಯಾತಿ ಪಡೆದಿದ್ದ 'ಗಾಂಧಾರಿ' ಖ್ಯಾತಿಯ ಜಗನ್, ಒಂಬತ್ತನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಬಂದರು. ಮುಂದೆ ಓದಿರಿ...

ವೀಕ್ಷಕರ ಬೆಂಬಲ ಇಲ್ಲ
ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಜಗನ್ನಾಥ್ ಅವರಿಗೆ ಕಮ್ಮಿ ವೋಟ್ ಗಳು ಬಿದ್ದಿದ್ವು. ಹೀಗಾಗಿ, ಅವರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆದರು.
ಈ
ವಾರ
ನಾಮಿನೇಷನ್
ನಲ್ಲಿ
'ಜೋಡಿ'
ಶಾಕ್
ಕೊಟ್ಟ
ಬಿಗ್
ಬಾಸ್

ಅರು ಮಂದಿ ನಾಮಿನೇಟ್ ಆಗಿದ್ದರು
ದಿವಾಕರ್, ಜಯಶ್ರೀನಿವಾಸನ್, ಚಂದನ್ ಶೆಟ್ಟಿ, ಶ್ರುತಿ ಪ್ರಕಾಶ್, ಜಗನ್ ಹಾಗೂ ಸಮೀರಾಚಾರ್ಯ... ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆರು ಮಂದಿ ಪೈಕಿ ಜಗನ್ ಔಟ್ ಆದರು.
ಸದಾ
ಕೆಂಡಕಾರುವ
ಜಗನ್ನಾಥ್
ಗೆ
ಸರಿಯಾಗಿ
ಬೆಂಡೆತ್ತಿದ
ಮೈಸೂರಿನ
ಕಾಲರ್.!

ತಮಗೆ ತಾವೇ ನಾಮಿನೇಟ್ ಮಾಡಿಕೊಂಡ ಜಗನ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಒಂಬತ್ತನೇ ವಾರ 'ಜೊತೆ ಜೊತೆಯಲಿ' ಟಾಸ್ಕ್ ಚಾಲ್ತಿಯಲ್ಲಿತ್ತು. ಜಗನ್ ಗೆ ಜೆಕೆ ಜೋಡಿಯಾಗಿದ್ದರು. ಜಗನ್ ಹಾಗೂ ಜೆಕೆ ಪೈಕಿ ಒಬ್ಬರು ಸೇಫ್ ಆದರೆ, ಮತ್ತೊಬ್ಬರು ನಾಮಿನೇಟ್ ಆಗಬೇಕಿತ್ತು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಕ್ಕ ಈ ಟ್ವಿಸ್ಟ್ ನಲ್ಲಿ ತಮ್ಮನ್ನ ತಾವೇ ಜಗನ್ ನಾಮಿನೇಟ್ ಮಾಡಿಕೊಂಡರು.
ಸುದೀಪ್
ನಿರೂಪಣೆ
ಸರಿ
ಇರ್ಲಿಲ್ಲ,
ಜಗನ್
ಔಟ್
ಆಗಲಿಲ್ಲ,
ಜನ
ಬೈಯ್ಯುವುದನ್ನ
ನಿಲ್ಲಿಸುತ್ತಿಲ್ಲ.!

ಅತಿ ವಿಶ್ವಾಸ ಮುಳ್ಳಾಯ್ತಾ.?
ಜನ ಉಳಿಸುತ್ತಾರೆ ಎಂಬ ನಂಬಿಕೆ ಮೇಲೆ ಜಗನ್ ನಾಮಿನೇಟ್ ಆದರು. ಆದ್ರೆ, ಜನಾಭಿಪ್ರಾಯ ಅವರ ವಿರುದ್ಧ ಆಗಿತ್ತು. ಜಗನ್ ಔಟ್ ಆಗಿರುವುದರಿಂದ ಅನುಪಮಾ, ಕೃಷಿ, ಜೆಕೆ, ಶ್ರುತಿ ಪ್ರಕಾಶ್ ಗೆ ಬೇಜಾರು ಆಗಿದೆ.