Just In
Don't Miss!
- News
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ; ನಗರದ ಮುಂದಿದೆ ಎರಡು ಬಹುಮುಖ್ಯ ಸವಾಲು
- Lifestyle
ಬುಧವಾರದ ದಿನ ಭವಿಷ್ಯ: ಸೌರ ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Sports
ಐಪಿಎಲ್ 2021: ಮುಂಬೈ vs ಕೋಲ್ಕತ್ತಾ, ಪಂದ್ಯದ ಹೈಲೈಟ್ಸ್
- Automobiles
ಐಷಾರಾಮಿ ಸೌಲಭ್ಯವುಳ್ಳ ಸ್ಟಾರಿಯಾ ಎಂಪಿವಿ ಅನಾವರಣಗೊಳಿಸಿದ ಹ್ಯುಂಡೈ
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಮಿನೇಷನ್ ಟ್ವಿಸ್ಟ್: ಸೇಫ್ ಆಗಿದ್ದ ವಿಶ್ವನಿಗೆ ಸಂಕಷ್ಟ, ಸಂಬರ್ಗಿ ಮೈಂಡ್ ಗೇಮ್?
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಮನೆಯಿಂದ ಯಾರು ಹೊರ ಹೋಗಬೇಕು ಎಂದು ನಿರ್ಧರಿಸಲು ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸೋಮವಾರ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಐದು ಸ್ಪರ್ಧಿಗಳು ಟಾರ್ಗೆಟ್ ಆಗಿದ್ದರು. ಪ್ರಶಾಂತ್ ಸಂಬರ್ಗಿ, ನಿರ್ಮಲಾ ಚೆನ್ನಪ್ಪ, ನಿಧಿ ಸುಬ್ಬಯ್ಯ, ಧನುಶ್ರೀ ಹಾಗೂ ಮಂಜು ಪಾವಗಡ ಡೇಂಜರ್ ಝೋನ್‌ನಲ್ಲಿದ್ದಾರೆ.
ಆದ್ರೀಗ, ಬಿಗ್ ಬಾಸ್ ಈ ನಾಮಿನೇಟ್ ಸ್ಪರ್ಧಿಗಳಿಗೆ ಟ್ವಿಸ್ಟ್ ನೀಡಿದೆ. ಡೇಂಜರ್ ಝೋನ್‌ನಿಂದ ತಪ್ಪಿಸಿಕೊಳ್ಳುವ ಅವಕಾಶ ಕೊಟ್ಟಿದೆ. ಮತ್ತೊಂದೆಡೆ ಸೇಫ್ ಆಗಿರುವ ಸ್ಪರ್ಧಿಗಳಿಗೂ ಸಂಕಷ್ಟದ ಸ್ಥಿತಿ ಎದುರಾದಂತೆ ಕಾಣುತ್ತಿದೆ. ಹೌದು, ಬಿಗ್ ಬಾಸ್ ಹೊಸದಾಗಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ನಾಮಿನೇಷನ್ ಟ್ವಿಸ್ಟ್ ಬಗ್ಗೆ ಮಾಹಿತಿ ನೀಡಿದೆ. ಮುಂದೆ ಓದಿ...
ನಾಮಿನೇಷನ್‌ನಲ್ಲಿ ಶಂಕರ್ ಅಶ್ವಥ್ ಟಾರ್ಗೆಟ್: 11 ಮತ ಬಿದ್ದರೂ ಸೇಫ್ ಆಗಿದ್ದು ಏಕೆ?

ನಾಮಿನೇಟ್ ಸ್ಪರ್ಧಿಗಳಿಗೆ ಸೇಫ್ ಆಗುವ ಅವಕಾಶ?
ಇಂದಿನ ಸಂಚಿಕೆಯಲ್ಲಿ ನಾಮಿನೇಷನ್ ವರ್ಗಾವಣೆಗೆ ಸಂಬಂಧಿಸಿದಂತೆ ಆಟ ಆಡಿಸಲಾಗುತ್ತದೆ. ನಾಮಿನೇಟ್ ಆಗಿರುವ ಸ್ಪರ್ಧಿ ಸೇಫ್ ಆಗಿರುವ ಸ್ಪರ್ಧಿ ಜೊತೆ ಬಿಗ್ ಬಾಸ್ ನೀಡುವ ಆಟ ಆಡಬೇಕು. ಇದರಲ್ಲಿ ಗೆದ್ದವರು ಸೇಫ್ ಆಗ್ತಾರೆ. ಸೋತವರು ನಾಮಿನೇಟ್ ಆಗ್ತಾರೆ ಎಂದು ನಿಯಮ ಹೇಳುತ್ತಿದೆ.
ಬಿಗ್ ಬಾಸ್ ಕನ್ನಡ 8: ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ನಡುವಿನ ಕನೆಕ್ಷನ್ ಏನು?

ನಾಮಿನೇಟ್ ಆಗಿರುವವರಿಗೆ ಖುಷಿ
ಈ ವಾರ ನಾಮಿನೇಟ್ ಆಗಿರುವ ಪ್ರಶಾಂತ್ ಸಂಬರ್ಗಿ, ನಿರ್ಮಲಾ ಚೆನ್ನಪ್ಪ, ನಿಧಿ ಸುಬ್ಬಯ್ಯ, ಧನುಶ್ರೀ ಹಾಗೂ ಮಂಜು ಪಾವಗಡ ಅವರಿಗೆ ಇದು ಒಳ್ಳೆಯ ಅವಕಾಶ. ಒಂದು ವೇಳೆ ಈ ಸ್ಪರ್ಧಿಗಳು ಗೆದ್ದರೆ ಎಲಿಮಿನೇಷನ್‌ನಿಂದ ಹೊರಗುಳಿಯಲಿದ್ದಾರೆ.

ಪ್ರಶಾಂತ್ ಸಂಬರ್ಗಿ vs ವಿಶ್ವ
ಈ ಆಟದಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ತನ್ನ ಪ್ರತಿ ಸ್ಪರ್ಧಿಯಾಗಿ ಗಾಯಕ ವಿಶ್ವ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ''ಇದರಲ್ಲಿ ನನ್ನ ಸ್ವಾರ್ಥವೂ ಇದೆ, ಗೆಲ್ಲಬೇಕು ಅಂದ್ರೆ ನನ್ನ ಎದುರಾಳಿ ವೀಕ್ ಆಗಿರಬೇಕು, ಅದಕ್ಕೆ ವಿಶ್ವ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ'' ಎಂದು ಪ್ರಶಾಂತ್ ಹೇಳಿದ್ದಾರೆ.

ಸೇಫ್ ಆಗ್ತಾರಾ ಡೇಂಜರ್ ಝೋನ್ ಸ್ಪರ್ಧಿಗಳು?
ಬಿಗ್ ಬಾಸ್ ನೀಡಿರುವ ಈ ಅವಕಾಶವನ್ನು ನಾಮಿನೇಟ್ ಆಗಿರುವ ಸ್ಪರ್ಧಿಗಳು ಹೇಗೆ ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಪ್ರಶಾಂತ್ ಸಂಬರ್ಗಿ ತನ್ನ ಎದುರಾಳಿಯಾಗಿ ವಿಶ್ವರನ್ನು ಆಯ್ಕೆ ಮಾಡಿಕೊಂಡರು. ಉಳಿದ ಸ್ಪರ್ಧಿಗಳು ಯಾರನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಇಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.