»   » 'ಬಿಗ್ ಬಾಸ್' ಮನೆಯಲ್ಲಿ ಅನುಗೆ ಪ್ರೇತಾತ್ಮ ಕಾಟ

'ಬಿಗ್ ಬಾಸ್' ಮನೆಯಲ್ಲಿ ಅನುಗೆ ಪ್ರೇತಾತ್ಮ ಕಾಟ

By: ಉದಯರವಿ
Subscribe to Filmibeat Kannada

ಈ ಕ್ಷಣದಲ್ಲಿ ನೀವು ಶಕುನಿ ಆದರೂ ಪರ್ವಾಗಿಲ್ಲ. ಎಲ್ಲಾ ಆಫಲ್ ಗಳನ್ನೂ ನಿನಗೇ ಕೊಡ್ತೀನಿ ಎಂದರು ಅಕುಲ್ ಬಾಲಾಜಿ. ಮನೆಯಲ್ಲಿನ ಸಾಕಷ್ಟು ಸೇಬು ಹಣ್ಣುಗಳು ನನಗೆ ಬೇಕು ಎಂದು ಬೇಡಿಕೆ ಇಡುತ್ತಿದ್ದರು ಗುರುಪ್ರಸಾದ್.

ಮನೆಯಲ್ಲಿ ನಾನು ಕೃಷ್ಣನಿದ್ದಂತೆ. ಪಾಂಡವರಾದರೆ ನಾನು ಶ್ರೀಕೃಷ್ಣನ ತರಹ ಕಾಣುತ್ತೇನೆ. ಕೌರವರಾದರೆ ಶಕುನಿ ತರಹ ಕಾಣುತ್ತೇನೆ ಎಂದರು ಗುರುಪ್ರಸಾದ್. ಯಾರಿಗೆ ಹೆಂಗೆ ಕಾಣುತ್ತೇನೋ ಅದು ಅವರವರ ಕರ್ಮ ಎಂದರು ಗುರು.

ನೀತೂ ಅವರು ಮನೆಯಿಂದ ಹೊರಹೋಗುವ ಮುನ್ನ ಅನುಪಮಾ ಅವರಿಗೆ ಕೊಟ್ಟಿದ್ದ ಶಿಕ್ಷೆ ಎಲ್ಲರಿಗೂ ನಮಸ್ಕಾರ ಹಾಕುವ ಶಿಕ್ಷೆ 78ನೇ ದಿನಕ್ಕೆ ಮುಕ್ತಾಯವಾಗಿದೆ. ಅವರು ಎಲ್ಲರಿಗೂ ನಮಸ್ಕಾರ ನಮಸ್ಕಾರ ಎಂದು ಹೇಳಬೇಕಾಗಿತ್ತು. ಆ ಶಿಕ್ಷೆ ಇಂದಿಗೆ ಮುಕ್ತಾಯವಾಯಿತು.

ಈ ಬಾರಿ ಭಿನ್ನ ರೀತಿಯ ನಾಮಿನೇಷನ್

ಈ ವಾರದ ನಾಮಿನೇಷನ್ ಪ್ರಕ್ರಿಯೆ ಈಗ ಶುರು ಎಂದರು. ಮನೆಯ ಸದಸ್ಯರು ಆಗ ಶುರುವಾಗುತ್ತದೆ ಈಗ ಶುರುವಾಗುತ್ತದೆ ಎಂದು ಕಾದಿದ್ದೇ ಬಂತು. ಕಡೆಗೂ ನಾಮಿನೇಷನ್ ಪ್ರಕ್ರಿಯೆಗೆ ಬಗ್ಗೆ ಅವರಿಗೆ ಕಿಂಚಿತ್ತೂ ಸುಳಿಸುವು ಕೊಡಂತೆ ಬಿಗ್ ಬಾಸ್ ಮುಗಿಸಿದರು.

ಸದಸ್ಯರ ಸಂಬಂಧಿಕರಿಂದ ನಾಮಿನೇಷನ್

ಈ ಬಾರಿ ನಾಮಿನೇಷನ್ ಮಾಡಿದರು ಗುರುಪ್ರಸಾದ್ ಅವರ ಪತ್ನಿ ಶ್ರೀಮತಿ ಆರತಿ, ಶ್ವೇತಾ ಚೆಂಗಪ್ಪ ಅವರ ಸಹೋದರ ಸಾಗರ್ ಚೆಂಗಪ್ಪ, ಅಕುಲ್ ಅವರ ಪತ್ನಿ ಜ್ಯೋತಿ ಅಕುಲ್, ಅನುಪಮಾ ಅವರ ಸಹೋದರಿ ಅನುರಾಧಾ ಭಟ್, ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಹಾಗೂ ದೀಪಿಕಾ ಅವರ ತಂದೆ ಕಾಮಯ್ಯ.

ಗುಟ್ಟಾಗಿ ನಡೆದು ಹೋದ ನಾಮಿನೇಷನ್

ಇವರೆಲ್ಲರನ್ನೂ ಬಿಗ್ ಬಾಸ್ ಗುಟ್ಟಾಗಿ ಬಿಗ್ ಬಾಸ್ ಮನೆಯ ಕನ್ಫೆಷನ್ ರೂಮಿಗೆ ಕರೆಸಿ ಈ ಬಾರಿ ಮನೆಯಿಂದ ಹೊರಹೋಗಲು ನೀವು ಸೂಚಿಸುವ ಇಬ್ಬರು ಸದಸ್ಯರ ಹೆಸರು ಹಾಗೂ ಕಾರಣ ಎಂದು ಕೇಳಿದರು.

ನಾಮಿನೇಷನ್ ಮಾಡುವ ವಿಶೇಷ ಅಧಿಕಾರ

ಕಳೆದ ಹನ್ನೊಂದು ವಾರಗಳಿಂದ ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೀರಿ. ಮನೆಯ ಸದಸ್ಯರ ಬಗ್ಗೆ ನಿಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಯಾವ ಅಭ್ಯರ್ಥಿಗಳು ಪ್ರಬಲ, ಯಾರು ಸಬಲರು ಎಂಬುದು ಗೊತ್ತಾಗಿರುತ್ತದೆ. ನಾಮಿನೇಷನ್ ಮಾಡುವ ವಿಶೇಷ ಅಧಿಕಾರ ನಿಮಗೆ ಕೊಡುತ್ತಿರುವುದಾಗಿ ತಿಳಿಸಿದರು.

ಚೆಸ್ ಗೇಮ್ ತರಹ ನೋಡಲು ಇಷ್ಟಪಡ್ತೀನಿ

ಗುರುಪ್ರಸಾದ್ ಅವರ ಪತ್ನಿ ಆರತಿ ಅವರು ಮಾತನಾಡುತ್ತಾ, ಸೃಜನ್ ಅವರು ತುಂಬಾ ಡೊಸೈಲ್ ಆಗಿ ಕಾಣುತ್ತಾರೆ. ಅವರನ್ನು ನಾಮಿನೇಷನ್ ಮಾಡುವುದರಿಂದ ಅವರು ಸ್ವಲ್ಪ ಆಕ್ಟೀವ್ ಆಗಬಹುದು ಹಾಗಾಗಿ ಅವರನ್ನು ಹಾಗೂ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ದೀಪಿಕಾ ಅವರನ್ನು ನಾಮಿನೇಟ್ ಮಾಡುತ್ತಿರುವುದಾಗಿ ತಿಳಿಸಿದರು. ಬಿಗ್ ಬಾಸನ್ನು ನಾನು ಚೆಸ್ ಗೇಮ್ ತರಹ ನೋಡಲು ಇಷ್ಟಪಡುತ್ತೇನೆ ಎಂದರು.

ಸಾಗರ್ ಚೆಂಗಪ್ಪ ನಾಮಿನೇಟ್ ಮಾಡಿದ್ದು ಯಾರನ್ನು?

ಶ್ವೇತಾ ಅವರ ಸೋದರ ಸಾಗರ್ ಚೆಂಗಪ್ಪ ಅವರು ಗುರುಪ್ರಸಾದ್ ಹಾಗೂ ದೀಪಿಕಾ ಕಾಮಯ್ಯ ಅವರನ್ನು ನಾಮಿನೇಟ್ ಮಾಡಿದರು. ಅವರು ಕೊಟ್ಟ ಕಾರಣಗಳೂ ಇಬ್ಬರು ಸ್ಟ್ರಾಂಗ್ ಕಂಟೆಸ್ಟೆಂಟ್ ಎಂಬುದೇ ಆಗಿತ್ತು.

ಜ್ಯೋತಿ ಅಕುಲ್ ಸೂಚಿಸಿದ ಹೆಸರುಗಳು ಯಾವುವು?

ಅಕುಲ್ ಅವರ ಪತ್ನಿ ಶ್ರೀಮತಿ ಜ್ಯೋತಿ ಅಕುಲ್ ಅವರು ಸೃಜನ್ ಹಾಗೂ ದೀಪಿಕಾ ಕಾಮಯ್ಯ ಅವರನ್ನು ನಾಮಿನೇಟ್ ಮಾಡಿದರು. ಅನುರಾಧಾ ಭಟ್ ಅವರು ಗುರುಪ್ರಸಾದ್ ಮತ್ತು ದೀಪಿಕಾ ಅವರನ್ನು ನಾಮಿನೇಟ್ ಮಾಡಿದರು.

ಮಗನನ್ನೇ ನಾಮಿನೇಟ್ ಮಾಡಿದ ಗಿರಿಜಾ ಲೋಕೇಶ್

ಗಿರಿಜಾ ಲೋಕೇಶ್ ಅವರು ಮೊದಲು ಸೃಜನ್ ಅವರನ್ನೇ ನಾಮಿನೇಟ್ ಮಾಡಿದರು. ಅದಕ್ಕೆ ಬಿಗ್ ಬಾಸ್ ಅವರ ಹೆಸರು ಹೇಳುವಂತಿಲ್ಲ ಎಂದಾಗ, ಗುರುಪ್ರಸಾದ್ ಹಾಗೂ ಅಕುಲ್ ಹೆಸರನ್ನೂ ಹೇಳಿದರು.

ಗುರುಪ್ರಸಾದ್ ಪೊಲಿಟಿಕ್ಸ್ ಜಾಸ್ತಿ ಆಯ್ತು ಎಂದ ಕಾಮಯ್ಯ

ಕಾಮಯ್ಯ ಅವರು ಗುರುಪ್ರಸಾದ್ ಅವರು ಮನೆಗೆ ಬಂದಾಗಿಂದ ತುಂಬಾ ಪೊಲಿಟಿಕ್ಸ್ ಮಾಡುತ್ತಿದ್ದಾರೆ. ಕೋಡಿಂಗ್, ಡೀಕೋಡಿಂಗ್ ಜಾಸ್ತಿ ಆಗಿದೆ ಅದಕ್ಕಾಗಿ ಅವರು ಹಾಗೂ ಎರಡನೇ ಹೆಸರು ಸೃಜನ್ ಎಂದರು.

ಈ ಬಾರಿ ನಾಮಿನೇಟ್ ಆದ ಸದಸ್ಯರು

ಈ ಬಾರಿ ಅನುಪಮಾ, ದೀಪಿಕಾ, ಸೃಜನ್ ಮತ್ತು ಗುರುಪ್ರಸಾದ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ತಿಳಿಸಲು ಇಚ್ಛಿಸುತ್ತಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಇಲ್ಲಿಗೆ ಮುಕ್ತಾಯವಾಯಿತು ಎಂದಾಗ ಮನೆಯ ಸದಸ್ಯರು ಗರಬಡಿದಂತಾದರು. ಏಕೆಂದರೆ ಕನ್ಫೆಷನ್ ರೂಮಿನಲ್ಲಿ ಏನು ನಡೀತು ಎಂಬುದು ಅವರಿಗೆ ಗೊತ್ತಿರಲಿಲ್ಲ.

ಅನುಪಮಾಗೆ ರಹಸ್ಯ ಟಾಸ್ಕ್

ಈ ನಡುವೆ ಅನುಪಮಾ ಭಟ್ ಅವರಿಗೆ ರಹಸ್ಯ ಟಾಸ್ಕ್ ಒಂದನ್ನು ಬಿಗ್ ಬಾಸ್ ಕೊಟ್ಟರು. ಅದೇನೆಂದರೆ ಮನೆಯಲ್ಲಿ ಪ್ರೇತಾತ್ಮ ಇದೆ ಎಂದು ಸದಸ್ಯರನ್ನು ನಂಬಿಸಬೇಕು. ಲೈಟ್ಸ್ ಆಫ್ ಆದ ಬಳಿಕ ತಮ್ಮ ಡ್ರಾಮಾ ಮುಂದುವರಿಸಿ ಎಂದರು ಬಿಗ್ ಬಾಸ್ ಹೇಳಿದರು. ಕಿಚನ್ ಏರಿಯಾದ ಕಿಟಕಿಗಳನ್ನು ಸ್ವಚ್ಛಗೊಳಿಸುವಂತೆ ಮನೆಯ ಸದಸ್ಯರಿಗೆ ನೆಪ ನೀಡಬಹುದು ಎಂದೂ ಬಿಗ್ ಬಾಸ್ ಅನುಪಮಾಗೆ ಹೇಳಿದರು. ಅದರಂತೆ ಅನುಪಮಾ ಪ್ರೇತಾತ್ಮದ ಡ್ರಾಮಾ ಶುರು ಮಾಡಿದರು.

ಕತ್ತು ಹಿಸುಕಿದಂತೆ ಆಗುತ್ತಿದೆ ಎಂದ ಅನುಪಮಾ

ತನಗೆ ಯಾರೋ ಕತ್ತು ಹಿಸುಕಿದಂತೆ ಆಗುತ್ತಿದೆ ಎಂದು ನಾಟಕ ಶುರು ಮಾಡಿದರು. ಇದೇ ಸಂದರ್ಭದಲ್ಲಿ ರಾತ್ರಿ ಮಲಗಿರಬೇಕಾದರೆ ನನ್ನ ಕತ್ತು ಹಿಚುಕಿದಂತಾಯಿತು ಎಂದು ಶುರುವಿಟ್ಟುಕೊಂಡರು ಅಕುಲ್. ಆಗ ನಾನು ಓಂ ನಮಃ ಶಿವಾಯ ಎಂದು ಕಿರುಚಿದೆ. ಬೇಕಿದ್ದರೆ ಫುಟೇಜ್ ನೋಡಿ ಎಂದು ಹೇಳಿದರು.

ಮಧ್ಯರಾತ್ರಿಯಲ್ಲಿ ಪ್ರೇತಾತ್ಮ ಕಾಟ

ಇದರಿಂದ ಮನೆಯವರು ಸ್ವಲ್ಪ ಭಯ ವಿಹ್ವಲರಾದರು. ಅಯ್ಯೋ ನೀನು ಏನೇನೋ ಭಯ ಪಡಿಸಬೇಡ ಎಂದರು ದೀಪಿಕಾ. ಮಧ್ಯರಾತ್ರಿಯಲ್ಲಿ ನನಗೆ ಸೃಜನ್ ಹೊಡೆತ ಎಂದು ನಾಟಕ ಮಾಡಿದರು. ಮಲಗಿದ್ದ ಸೃಜನ್ ಅಯ್ಯೋ ನಾನೇನು ಮಾಡಿಲ್ಲ ಎಂದ.

ಅಕುಲ್ ಅವರಿಂದ ನಿಂಬೆಹಣ್ಣಿನ ಶಾಂತಿ

ಅಕುಲ್ ಬಾಲಾಜಿ ಅವರಂತೂ ನಿಂಬೆಹಣ್ಣು ತಂದು ಅನುಪಮಾಗೆ ನಿವಾಳಿಸಿ ಕಾಲಿನಲ್ಲಿ ತುಳಿದು ಎರಡು ಹೋಳು ಮಾಡಿ ಎಸೆದ. ಇದು ನೆಗಟೀವ್ ಥಾಟ್. ಹಾಗಾಗಿ ನಿನಗೆ ಈ ರೀತಿ ಆಗುತ್ತಿದೆ ಎಂದ. ಇವರಿಬ್ಬರಿಗೂ ಅನುಪಮಾ ಮಾಡುತ್ತಿರುವುದು ನಾಟಕ ಎಂಬುದು ಗೊತ್ತೇ ಆಗಲಿಲ್ಲ.

ಅನುಪಮಾ ಅಭಿನಯಕ್ಕೆ ವೀಕ್ಷಕರೂ ಸುಸ್ತು

ಅನುಪಮಾ ಇಷ್ಟೆಲ್ಲಾ ಅದ್ಭುತ ಕಲಾವಿದೆ ಎಂಬುದು ಇಷ್ಟು ದಿನ ಗೊತ್ತಿರಲಿಲ್ಲ. ಮನೆಯಲ್ಲಿ ಪ್ರೇತಾತ್ಮ ಇದೆ ಎಂದು ನಂಬಿಸಲು ಅವರು ಆಡಿತ ನಾಟಕಕ್ಕೆ ಅಕುಲ್ ಹಾಗೂ ಸೃಜನ್ ಸಂಪೂರ್ಣ ನಂಬುವಂತಾಗಿದೆ. ಅನುಪಮಾ ಅವರ ಅಭಿನಯಕ್ಕೆ ವೀಕ್ಷಕರೂ ಮನಸೋತಿದ್ದಾರೆ.

English summary
Anupama was called inside the confession room and was ordered by Bigg Boss to convince at least four members that there is a ghost inside the house. Anupama fooled Srujan and Akul completely. Bigg Boss Kannada day 78 highlights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada