For Quick Alerts
  ALLOW NOTIFICATIONS  
  For Daily Alerts

  ಅಪ್ಪನಿಗೆ ಅಣ್ಣನ ಮುಂದೆ ಮಾತನಾಡುವ ಗಟ್ಸ್ ಇಲ್ವಾ ಅಂದಿದ್ದೆ: ಬಿಗ್‌ ಬಾಸ್‌ ಸ್ಫರ್ಧಿ ಜಯಶ್ರೀ

  |

  ಕನ್ನಡ ಬಿಗ್‌ ಬಾಸ್‌ ಓಟಿಟಿಯಲ್ಲಿ ಒಬ್ಬೊಬ್ಬ ಸ್ಫರ್ಧಿಗಳು ಒಂದೊಂದು ರೀತಿಯಾಗಿದ್ದರು. ಅದರಲ್ಲೂ ಜಯಶ್ರೀ ಎಲ್ಲರಿಗಿಂತ ಭಿನ್ನವಾಗಿದ್ದರು. ಬ್ಯುಸಿನೆಸ್ ಫೀಲ್ಡ್‌ನಿಂದ ಬಂದಿದ್ದ ಜಯಶ್ರೀ, ತಮ್ಮ ಬದುಕಿನ ಏರಿಳಿತಗಳ ಬಗ್ಗೆ ಬಿಗ್‌ ಬಾಸ್‌ ಮನೆಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತಾವು ತಂದೆ ತಾಯಿಯಿಂದ ದೂರಾದ ಬಗ್ಗೆ ಹಾಗೂ ಮನೆ ಬಿಟ್ಟು ಬಂದ ಬಳಿಕ ನಡೆದ ವಿಚಾರಗಳ ಬಗ್ಗೆ ಜಯಶ್ರೀ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ.

  ನಾನು 19 ವರ್ಷದವಳಿದ್ದಾಗ ನಮ್ಮ ನಮ್ಮನೆಯಲ್ಲಿ ಒಂದು ಜಗಳ ನಡೆಯುತ್ತದೆ. ಆ ಜಗಳದಲ್ಲಿ ನನ್ನ ತಂದೆ ನನ್ನನ್ನು ಟಾಂಟ್ ಮಾಡುತ್ತಾರೆ. ಆಗ ನನಗೆ ತುಂಬಾ ಬೇಸರವಾಗುತ್ತದೆ. ಯಾವಾಗಲೂ ಹೇಳಿದ್ದೇ ಹೇಳ್ತೀರಾ. ಹಾಗೆ ನೋಡಿದ್ರೆ ಅವರ ಮಗ ಅದಕ್ಕಿಂತ ಜಾಸ್ತಿ ತಪ್ಪು ಮಾಡುತ್ತಾನೆ. ಅವನ ತಪ್ಪನ್ನು ಅವನಿಗೆ ಹೇಳೋ ಧೈರ್ಯ ಇಲ್ವಾ ನಿಮಗೆ ಅಂತಾ ಪ್ರಶ್ನೆ ಮಾಡಿದಾಗ, ನನ್ನ ತಂದೆ ನನಗೆ ಹೊಡೆಯುತ್ತಾರೆ. ಅವನು ಸರಿಯಾಗುವ ತನಕ ನಾವು ಕಾಯೋಣ, ನಿನಗೆ ಆಗಲ್ವಾ ನೀನು ಹೋಗು ಅಂತಾರೆ. ಆಗ ನಾನು ಮನೆಯಿಂದ ಹೊರಬಂದೆ. ಆಗ ನಾನಿಷ್ಟು ಬೋಲ್ಡ್ ಇರಲಿಲ್ಲ. ಈ ಎಲ್ಲಾ ಸನ್ನಿವೇಶಗಳು ನನ್ನ ಬದಲಾಯಿಸುತ್ತದೆ ಎಂದು ತಮ್ಮ ಜೀವನ ಬದಲಾದ ಬಗ್ಗೆ ಜಯಶ್ರೀ ಹೇಳಿಕೊಂಡಿದ್ದಾರೆ.

  ಮನೆಯಿಂದ ಹೊರ ಬಂದಾಗ ನನಗೆ ಸಮಾಜದಲ್ಲಿ ಹೇಗಿರಬೇಕು, ಹೇಗೆ ದುಡಿಬೇಕು ಎನ್ನುವ ಆಲೋಚನೆಗಳಿರಲಿಲ್ಲ. ನಾನು ನನ್ನ ಅಪ್ಪ ಅಮ್ಮ ಕರೆ ಮಾಡಿ ವಾಪಸ್‌ ಕರೆಯುತ್ತಾರೆ ಎನ್ನುವ ಭರವಸೆಯಲ್ಲಿದ್ದೆ. ಆದರೆ ಅವರು ಕರೆಯಲಿಲ್ಲ. ಮೂರು ನಾಲ್ಕು ತಿಂಗಳು ಬಳಿಕ ನನಗೆ ಕರೆ ಮಾಡಿದ್ದರು. ಆಗ ನಾನು ಅವರಿಗೆ ನನಗೆ ಈ ಜೀವನದಲ್ಲಿ ಖುಷಿಯಾಗಿದ್ದೇನೆ ಎಂದೆ. ನಮ್ಮ ಮನೆಯಲ್ಲಿ ಪ್ರತಿ ದಿನ ಜಗಳ ನಡೆಯುತ್ತದೆ. ನಮ್ಮ ತಂದೆ ನನ್ನ ಆಫೀಸ್‌ಗೆ ಬಂದಾಗ ನಾನಿಲ್ಲಿ ಎಷ್ಟು ನೆಮ್ಮದಿಯಾಗಿದ್ದೇನೆ ಮನೆಗೆ ಹೋದ್ರೆ ದುಃಖವಾಗುತ್ತದೆ ಎನ್ನುತ್ತಿದ್ದರು. ನಮ್ಮ ಮನೆ ಪರಿಸ್ಥಿತಿ ಈಗಲೂ ಹಾಗೇ ಇದೆ. ಮೊದಲೂ ಹಾಗೆ ಇತ್ತು. ನನಗೆ ಅಂತಹ ಪರಿಸ್ಥಿತಿಯಲ್ಲಿ ಬದುಕಲಾಗುವುದಿಲ್ಲ ಎಂದು ಜಯಶ್ರೀ ಬೇಸರ ತೋಡಿಕೊಂಡಿದ್ದಾರೆ.

  ಮನೆ ಬಿಟ್ಟು ಬಂದು ಪಿಜಿ ಸೇರಿದೆ. ನನ್ನ ಕೈಯಲಿದ್ದ ಉಂಗುರ ಅಡವಿಟ್ಟು ಪಿಜಿ ಸೇರಿದೆ. ಅಲ್ಲಿ ನನ್ನ ಫ್ರೆಂಡ್‌ ಕೊಟ್ಟ ಸಲಗೆಯಿಂದ ತಿಂಗಳಿಗೆ 20ರಿಂದ30 ಸಾವಿರ ರೂಪಾಯಿ ದುಡಿಯುತ್ತಿದ್ದೇನೆ. ಈ ವಿಚಾರನ ಮನೆಯವರ ಬಳಿ ಕೂಡ ಶೇರ್‌ ಮಾಡಿದ್ದೆ. ಆ ಟೈಮ್‌ನಲ್ಲಿ ನಾನು ಗ್ಯಾಂಬ್ಲಿಂಗ್ ರೀತಿಯ ತಪ್ಪು ದಾರಿಗೆ ಇಳಿದಿದ್ದೆ. ನನಗಾಗಿ ನಾನು ಗ್ಯಾಂಬ್ಲಿಂಗ್‌ಗೆ ಇಳಿದಿಲ್ಲ. ನನ್ನ ಜೊತೆ ಇದ್ದ ವ್ಯಕ್ತಿ ಕಷ್ಟದಲ್ಲಿರುತ್ತಾರೆ. ಆ ವ್ಯಕ್ತಿಗಾಗಿ ನಾನು ಅವರ ಜೊತೆ ಸೇರಿಕೊಂಡೆ. ಅದಕ್ಕಾಗಿ ನಾವು ಗೋವಾಕ್ಕೆ ಹೋಗುತ್ತೇವೆ. ಆ ಟೈಮ್‌ನಲ್ಲಿ ನನಗೆ ಅರಿವಾಯ್ತು ಇದಕ್ಕಾಗಿ ನಾನು ಮನೆಯಿಂದ ಹೊರ ಬಂದಿದ್ದಾ ಅಂತ. ಬಳಿಕ ಆ ವ್ಯಕ್ತಿಗೆ ಹೇಳ್ತೀನಿ ಬೇಡ ಬಿಟ್ಟು ಬಿಡೋಣ ಇದನ್ನು ಅಂತ, ಟ್ರೈ ಮಾಡೋಣ ಅಂತಾ ಹೋಗಿ ಒಂದು ವರ್ಷ ಇದರಲ್ಲೇ ಕಳೆದಿದ್ದೇವೆ. ಸಾಕು ಬಿಟ್ಟು ಬಿಡೋಣ ಎಂದಿದ್ದೆ. ಈ ವಿಚಾರವನ್ನು ಮನೆಯವರ ಬಳಿ ಕೂಡ ಹೇಳಿಕೊಂಡಿದ್ದೆ ಎಂದು ಜಯಶ್ರೀ ಫಿಲ್ಮಿಬೀಟ್ ಜೊತೆ ಹೇಳಿಕೊಂಡಿದ್ದಾರೆ.

  English summary
  Bigg Boss Ott Contestant Jayashree opens up bbout her personal life, with Filmibeat Kannada,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X