For Quick Alerts
  ALLOW NOTIFICATIONS  
  For Daily Alerts

  ಕಾರ್ಟೂನ್ ರೂಪದಲ್ಲಿ ಎವರ್ ಗ್ರೀನ್ ಚಿತ್ರ 'ಶೋಲೆ'

  By Rajendra
  |

  ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ರಮೇಶ್ ಸಿಪ್ಪಿ ಅವರ 'ಶೋಲೆ' ಚಿತ್ರ ಈಗಾಗಲೆ ಹಲವಾರು ಗರಿಮೆಗಳಿಗೆ ಪಾತ್ರವಾಗಿದೆ. ಈ ಚಿತ್ರ ತ್ರಿಡಿ ರೂಪದಲ್ಲಿ ಪ್ರೇಕ್ಷಕರನ್ನು ರಂಜಿಸಿದೆ. ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಬರುತ್ತಿದೆ.

  ಈ ಬಾರಿ ಅನಿಮೇಷನ್ ರೂಪದಲ್ಲಿ ಚಿತ್ರಾಭಿಮಾನಿಗಳ ಮುಂದೆ ಬರುತ್ತಿದ್ದು ಆಬಾಲವೃದ್ಧರಾಗಿ ಎಲ್ಲರನ್ನೂ ಆಕರ್ಷಿಸಲಿದೆ. ಚಿಣ್ಣರ ಕಾರ್ಟುನ್ ನೆಟ್ ವರ್ಕ್ ವಾಹಿನಿ ಪೋಗೋ ಈಗ ಶೋಲೆ ಚಿತ್ರವನ್ನು ಅನಿಮೇಷನ್ ರೂಪದಲ್ಲಿ ಹೊರತರುತ್ತಿದೆ. ಈ ಮೂಲಕ 'ಛೋಟ ಭೀಮ್' ನಂತೆ 'ಶೋಲೆ' ಚಿತ್ರದ ಪಾತ್ರಗಳು ಮಕ್ಕಳ ಬಾಯಲ್ಲಿ ನಲಿದಾಡಲಿವೆ. [ತ್ರಿಡಿಯಲ್ಲಿ ಮೂಡಿಬರುತ್ತಿದೆ ಎವರ್ ಗ್ರೀನ್ 'ಶೋಲೆ']

  ಇದಕ್ಕೆ 'ಶೋಲೆ ಅಡ್ವೆಂಚರ್ಸ್' ಎಂದು ಹೆಸರಿಟ್ಟಿದೆ ಪೋಗೋ ಟಿವಿ. ಮೊದಲ ಕಂತು ಇದೇ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಸಾರವಾಗಲಿದೆ. ಈ ಬಗ್ಗೆ ಮಾತನಾಡಿರುವ ಶೋಲೆ ಮೀಡಿಯಾ ಮತ್ತು ಎಂಟರ್ ಟೇನ್ ಮೆಂಟ್ ಮುಖ್ಯಸ್ಥ ಸಾಶ್ ಚಾ ಸಿಪ್ಪಿ, "ಶೋಲೆ ಒಂದು ಆಲ್ ಟೈಲ್ ಕ್ಲಾಸಿಕ್ ಚಿತ್ರ. ನಾಲ್ಕು ತಲೆಮಾರುಗಳನ್ನು ರಂಜಿಸಿದೆ..."

  "ಪೋಗೋ ಹಾಗೂ ಗ್ರಾಫಿಕ್ ಇಂಡಿಯಾ ತಮ್ಮನ್ನು ಸಂಪರ್ಕಿಸಿ ಕ್ಲಾಸಿಕ್ ಚಿತ್ರವನ್ನು ಕಾರ್ಟುನ್ ಗೆ ರೂಪಾಂತರಿಸೋಣ ಎಂದಾಗ ನನಗೆ ಅಚ್ಚರಿಯಾಯಿತು. ಈ ಚಿತ್ರವೊಂದು ಚಾರಿತ್ರಿಕ ಮೈಲುಗಲ್ಲು, ಇದು ಎಲ್ಲ ತಲೆಮಾರಿನ ಹಾಗೂ ಎಲ್ಲ ವರ್ಗದ ಪ್ರೇಕ್ಷಕರಿಗೆ ಸಿಗಬೇಕು ಎಂಬುದು ನನ್ನ ಉದ್ದೇಶ" ಎಂದಿದ್ದಾರೆ.

  'ಶೋಲೆ' ಚಿತ್ರದ ಪಾತ್ರಗಳು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಈಗ ಕಾರ್ಟುನ್ ರೂಪದಲ್ಲಿ ಅದೇ ಪಾತ್ರಗಳು ಚಿಣ್ಣರ ಮನಸ್ಸಿನಲ್ಲೂ ನಲಿದಾಡಲಿವೆ ಎಂಬ ವಿಶ್ವಾಸ ತಮಗಿದೆ ಎನ್ನುತ್ತಾರೆ ಗ್ರಾಫಿಕ್ಸ್ ನ ಕಾರ್ಯನಿರ್ವಾಹಕ ಅಧಿಕಾರಿ ಶರದ್ ದೇವರಾಜನ್.

  Bollywood classic Sholay

  "ಅರೆ ಓ ಸಾಂಬಾ ಕಿತನೆ ಆದ್ಮಿ ತೇ.." ಎಂಬ ಗಬ್ಬರ್ ಸಿಂಗ್ ಅಬ್ಬರದ ಡೈಲಾಗ್, ಅವನ ವಿಲಕ್ಷಣ ಹಾವಭಾವವಗಳನ್ನು ಮಕ್ಕಳು ಪೋಗೋ ಟಿವಿಯಲ್ಲಿ ಸವಿಯಬಹುದು. ಇನ್ನು ಚಿತ್ರದಲ್ಲಿನ ಹಾರ್ಸ್ ಚೇಸಿಂಗ್, ಫೈಟ್ಸ್ ಕಾರ್ಟೂನ್ ನಲ್ಲಿ ಹೇಗಿರುತ್ತವೆ ಎಂಬ ಕುತೂಹಲ ಬೇರೆ ಇದೆ.

  ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ ಚಿತ್ರ 'ಶೋಲೆ'. 70ರ ದಶಕದಲ್ಲಿ ಭಾರತೀಯ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನು ಮುರಿದ ಚಿತ್ರ ಇದಾಗಿತ್ತು. ಅಮಿತಾಬ್ ಬಚ್ಚನ್ ಅವರಿಗೆ ಆಂಗ್ರಿ ಎಂಗ್ ಮ್ಯಾನ್ ಪಟ್ಟ ತಂದುಕೊಟ್ಟಂತಹ ಚಿತ್ರ. ಹೊಸ ಹಾಗೂ ಹಳೆ ತಲೆಮಾರಿನ ಪ್ರೇಕ್ಷರಿಬ್ಬರಿಗೂ ಈ ಚಿತ್ರ ಹಾಟ್ ಫೇವರಿಟ್. [ಪತ್ತೆದಾರ ಸಾಹಸಸಿಂಹ ಇನ್ನೊಂದು ರಹಸ್ಯ ಭೇದಿಸಬೇಕಾಗಿದೆ!]

  ಅಮಿತಾಬ್ ಬಚ್ಚನ್, ಧರ್ಮೇಂದ್ರ ಅವರ ವೃತ್ತಿ ಜೀವನದಲ್ಲೂ ಶೋಲೆ ಹೊಸ ಮೈಲಿಗಲ್ಲು ಸೃಷ್ಟಿಸಿದ ಚಿತ್ರ. ಅಭಿಮಾನಿಗಳ ಪಾಲಿಗಂತೂ ಈ ಚಿತ್ರ ಇಂದಿಗೂ ಹೊಚ್ಚಹೊಸದಾಗಿಯೇ ಕಾಣುತ್ತದೆ. ಈಗ ಹೊಸ ತಲೆಮಾರಿನ ಚಿಣ್ಣರನ್ನೂ ಕಾರ್ಟೂನ್ ಹಿಡಿದಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. (ಏಜೆನ್ಸೀಸ್)

  English summary
  Bollywood's the biggest blockbuster of all time 'Sholay' is back yet again - this time in a new avatar of Animated Version that would entertain kids on cartoon network Pogo. Titled Sholay Adventures, the first part of the cartoon movie in the series will be premiered on POGO on January 26, 2015.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X