twitter
    For Quick Alerts
    ALLOW NOTIFICATIONS  
    For Daily Alerts

    ಮುಂಗಾರು ಮಳೆಯಲ್ಲಿ ಬೊಂಬಾಟ್ ಭೋಜನ: ಲಾಂಚ್ ಬಾಕ್ಸ್‌ಗೆ ಏನು ಬೇಕು?

    |

    ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ. ಈ ಗಾದೆ ಬಹುಶ: ಎಲ್ಲರಿಗೂ ಗೊತ್ತಿರುತ್ತೆ. ಎಲ್ಲಾ ಕಾಲಕ್ಕೂ ಸಲ್ಲುವ ಗಾದೆಯಿದು. ನಾವು ಮಾಡುವ ಊಟ ರುಚಿಕರವಾಗಿಯೂ ಇರಬೇಕು. ಅಂತಯೇ ಆರೋಗ್ಯಕರವಾಗಿಯೂ ಇರಬೇಕು. ಅಂತಹ ಅಡುಗೆಯನ್ನು ಮಾಡಿ ಬಡಿಸುವುದಕ್ಕೆ ಸ್ಟಾರ್ ಸುವರ್ಣದ ಬೊಂಬಾಟ್ ಭೋಜನದಲ್ಲಿ ವೇದಿಕೆ ರೆಡಿಯಾಗಿದೆ.

    ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ. ಆರೋಗ್ಯವಾಗಿರಬೇಕು ಅಂದರೆ, ರುಚಿಕರವಾದ ಊಟಕ್ಕೆ ಬ್ರೇಕ್ ಹಾಕಬೇಕು ಅನ್ನುವ ರೂಢಿಯಿದೆ. ಆದರೆ, ರುಚಿಕರವಾಗಿಯೂ ಆರೋಗ್ಯಕರವಾಗಿಯೂ ಇದ್ದೆ ಚೆನ್ನ. ಇನ್ನೊಂದು ಕಡೆ ಶಾಲೆಗೆ ಹೋಗುವ ಮಕ್ಕಳಿಗೆ ಎಂತಹ ಪೌಷ್ಠಿಕ ಆಹಾರವನ್ನು ಮಾಡಿಕೊಡಬೇಕು? ಅನ್ನೋದು ತಾಯಂದಿರಿಗೆ ದೊಡ್ಡ ತಲೆ ನೋವು ಅದಕ್ಕೆ ಬೊಂಬಾಟ್ ಭೋಜನ ಲಾಂಚ್ ಬಾಕ್ಸ್ ಸ್ಪೆಷಲ್ ಮತ್ತು ಮುಂಗಾರು ಮಳೆಯಲ್ಲಿ ತಯಾರಿಸಬಹುದಾದಾ ಅಡುಗೆಗಾಗಿ ಸ್ಪೆಷಲ್ ಎಪಿಸೋಡ್‌ಗಳನ್ನು ಪ್ರಸಾರ ಮಾಡಲಿದೆ.

    ಜೂನ್ ತಿಂಗಳು ಬಂತೆಂದರೆ ಶಾಲೆ ಆರಂಭ ಆಗುತ್ತೆ. ಬೆಳಗ್ಗೆನೇ ಮಕ್ಕಳಿಗೆ ಲಂಚ್ ಬಾಕ್ಸ್ ರೆಡಿ ಮಾಡಿ ಕಳುಹಿಸಬೇಕು. ಇದು ತಾಯಂದಿರಿಗೆ ದೊಡ್ಡ ಸವಾಲು. ಮಕ್ಕಳ ಲಾಂಚ್‌ ಬಾಕ್ಸ್‌ಗೆ ಅಡುಗೆ ಏನು ಮಾಡಬೇಕು? ಅನ್ನುವ ಸಮಸ್ಯೆಗೆ ಪರಿಹಾರ ಕೊಡಲು ಸ್ಟಾರ್ ಸುವರ್ಣ 'ಬೊಂಬಾಟ್ ಭೋಜನ'ದಲ್ಲಿ ವಿಶೇಷವಾಗಿ ಲಂಚ್ ಬಾಕ್ಸ್ ರೆಸಿಪಿಯನ್ನು ಸಿದ್ಧಪಡಿಸಲಿದೆ. ಇದು ಒಂದು ವಾರ ಕಾಲ ಹೊಸ ಹೊಸ ರೆಸಿಪಿಗಳನ್ನು ವೀಕ್ಷಕರಿಗಾಗಿ ಮಾಡಲಿದೆ.

    Bombat Bojana Special Segments On Lunch Box And Mungaru Male Concepts

    ಬೊಂಬಾಟ್ ಭೋಜನದ ನಿರೂಪಕ , ಸಿನಿಮಾ ನಟ ಸಿಹಿ ಕಹಿ ಚಂದ್ರು ಊಟದ ಡಬ್ಬಿಗಾಗಿ ವಿಶೇಷ ಭೋಜನವನ್ನು ಸಿದ್ಧಪಡಿಸಲಿದ್ದಾರೆ. ಇವರ ಜೊತೆ ಕಾರ್ಯಕ್ರಮಕ್ಕೆ ಬರುವ ವಿಶೇಷ ಅತಿಥಿಗಳು ಊಟದ ಡಬ್ಬಿಗಾಗಿ ವಿಶೇಷ ಖಾದ್ಯಗಳನ್ನು ತಯಾರಿಸಲಿದ್ದಾರೆ. ಜೂನ್ 13ರಿಂದ 18ರವರೆಗೆ ಸ್ಯಾಂಡಲ್‌ವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಬೊಂಬಾಟ್ ಭೋಜನದಲ್ಲಿ ವಿಶೇಷವಾಗಿ ಲಂಚ್ ಬಾಕ್ಸ್ ತಯಾರಿಸಲಿದ್ದಾರೆ.

    ಅಂದ್ಹಾಗೆ ಈ ವಿಶೇಷ ಎಪಿಸೋಡ್‌ನಲ್ಲಿ ನಿರ್ದೇಶಕ ಎಸ್.ನಾರಾಯಣ್, ನಟ ಎಂ.ಎನ್ . ಸುರೇಶ್ , ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಗಾಯಕಿ ಚೈತ್ರ ,ಡಾ.ಹೇಮಾವತಿ ಮತ್ತು ಭಾಗ್ಯ ಟಿವಿ ಯೂಟ್ಯೂಬ್ ಚ್ಯಾನಲ್ ಖ್ಯಾತಿಯ ಶ್ರೀಮತಿ ಭಾಗ್ಯ ಬೊಂಬಾಟ್ ಲಂಚ್ ಬಾಕ್ಸ್ ಮೆನ್ಯು ತಯಾರಿಸಲಿದ್ದಾರೆ. ಇವರೊಂದಿಗೆ 'ಬೊಂಬಾಟ್ ಭೋಜನ' ಖ್ಯಾತಿಯ ಗೌರಿ ಅಮ್ಮ(ಶ್ರೀಮತಿ ಗೌರಿ ಸುಬ್ರಮಣ್ಯ) ಅರಳಿ ಎಲೆ ಚಿತ್ರಾನ್ನ, ವಿಶೇಷವಾದ ತರಕಾರಿ ದೋಸೆ, ಉದ್ದಿನ ಚಿತ್ರಾನ್ನ, ಒಂದೆಲಗದ ಚಪಾತಿ , ನುಗ್ಗೆ ಸೊಪ್ಪಿನ ರೊಟ್ಟಿ , ಮಖಾನ ರೋಸ್ಟ್ , ಸಿಹಿ ದೋಸೆ ಸೇರಿದಂತೆ ಮಕ್ಕಳು ಇಷ್ಟ ಪಡುವಂತಹಹ ಪೌಷ್ಠಿಕಾಂಶಯುಕ್ತ ಲಾಂಚ್ ಬಾಕ್ಸ್‌ ರೆಡಿಮಾಡುವುದನ್ನು ಹೇಳಿಕೊಡಲಿದ್ದಾರೆ.

    ಲಂಚ್ ಬಾಕ್ಸ್ ಮುಗಿದ ಕೂಡಲೇ ಜೂನ್ 20 ರಿಂದ 25ರವರೆಗೆ 'ಮುಂಗಾರು ಮಳೆ' ಸ್ಟೆಷಲ್ ಎಪಿಸೋಡ್ ಶುರುವಾಗುತ್ತೆ. ಮಳೆಗಾಲ ಬಂತು ಅಂದರೆ, ಆರೋಗ್ಯ ಕೆಡುವುದು ಸರ್ವೆ ಸಾಮಾನ್ಯ. ನೆಗಡಿ, ಕೆಮ್ಮು, ಜ್ವರ , ಶೀತ ಕಾಮನ್ ಆಗಿ ಬಂದೇ ಬರುತ್ತೆ. ಇಂತಹ ಸಂದರ್ಭದಲ್ಲಿ ಮಾಡಬಹುದಾದ ಅಡುಗೆಗಳನ್ನು ಹೇಳಿಕೊಡಲಾಗುತ್ತೆ. ಇಂತಹ ಅಡಿಗೆಗಳನ್ನು ಗೌರಿ ಅಮ್ಮ ತಯಾರಿಸಲಿದ್ದಾರೆ. ಮೆಂತ್ಯ ಸೊಪ್ಪಿನ ಅನ್ನ, ವೀಳ್ಯದೆಲೆಯ ಶರಬತ್, ಜೀರಿಗೆ, ಮೆಣಸಿನ ಸ್ಪೆಷಲ್ ರೆಸಿಪಿಗಳನ್ನು ಹಂಚಿಕೊಳ್ಳಲಿದ್ದಾರೆ. ಜೂನ್ 20ರಂದು ಅಪ್ಪಂದಿರ ದಿನದ ಸ್ಪೆಷಲ್ ಕೂಡ ವಿಶೇಷವಿರುತ್ತೆ.

    Bombat Bojana Special Segments On Lunch Box And Mungaru Male Concepts

    ಸಿಹಿ ಕಹಿ ಚಂದ್ರು ಅವರ ಪುತ್ರಿಯರಾದ ಹಿತ ಮತ್ತು ಖುಷಿ ತಂದೆಗಾಗಿ ವಿಶೇಷವಾಗಿ ಅಡುಗೆಯನ್ನು ತಯಾರಿಸಲಿದ್ದಾರೆ. ಜೂನ್ ತಿಂಗಳ ಪೂರ್ತಿ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ 'ಬೊಂಬಾಟ್ ಭೋಜನ'ದಲ್ಲಿ ಸೆಲೆಬ್ರೆಟಿಗಳ ಸ್ಪೆಷಲ್ ಲಂಚ್ ಬಾಕ್ಸ್ ರೆಡಿಯಾಗುತ್ತೆ. ಮುಂಗಾರು ಮಳೆಯ ವಿಶೇಷ ರೆಸಿಪಿಗಳನ್ನು ಸಿದ್ಧವಾಗುತ್ತೆ.

    English summary
    Bombat Bojana Special Segments On Lunch Box And Mungaru Male Concepts, Know More.
    Tuesday, June 14, 2022, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X