Just In
Don't Miss!
- News
ಕೆಜಿಎಫ್ನಲ್ಲಿ ಮಹದೇವಪುರ ಸಬ್ ಇನ್ಸ್ಪೆಕ್ಟರ್ಗೆ ಚಾಕು ಇರಿತ
- Sports
ಕೊಹ್ಲಿ-ಸ್ಟೋಕ್ಸ್ ಮಧ್ಯೆ ಮಾತಿನ ಚಕಮಕಿ, ಅಂಪೈರ್ಗಳ ಮಧ್ಯ ಪ್ರವೇಶ: ವಿಡಿಯೋ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Education
IIMB Recruitment 2021: ಅಕಾಡೆಮಿಕ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬಿಡುಗಡೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಇರ್ತಾರಾ 'ಬ್ರಹ್ಮಗಂಟು' ನಟಿ? ಈ ಬಗ್ಗೆ ಗೀತಾ ಹೇಳಿದ್ದೇನು?
ಬಿಗ್ ಬಾಸ್ ಸೀಸನ್ 8 ಕನ್ನಡ ರಿಯಾಲಿಟಿ ಶೋಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ಜೋರಾಗಿ ಕೇಳಿಬರುತ್ತಿದೆ.
ಇದೀಗ ಕಿರುತೆರೆಯ ಖ್ಯಾತ ಕಲಾವಿದೆ ಬ್ರಹ್ಮಗಂಟು ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಹೆಸರು ಕೂಡ ಅಷ್ಟೆ ಬಲವಾಗಿ ಕೇಳಿಬರುತ್ತಿದೆ. ಗೀತಾ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸದ್ಯ ಬ್ರಹ್ಮಗಂಟು ಧಾರಾವಾಹಿ ಶೂಟಿಂಗ್ ನಲ್ಲಿರುವ ಗೀತಾ ಬಿಗ್ ಮನೆಗೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಮುಂಗಡವಾಗಿ ಎಪಿಸೋಡ್ ಗಳನ್ನು ಚಿತ್ರೀಕರಣ ಮಾಡುತ್ತಿದ್ದು, ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ

ಗೀತಾ ಎಂಟ್ರಿ ಪಕ್ಕ ಎನ್ನುತ್ತಿದ್ದಾರೆ ಆಪ್ತರು
ಗೀತಾ ಪಾತ್ರದ ಮೂಲಕ ಮನೆ ಮಾತಾಗಿರುವ ಗೀತಾ ಭಾರತಿ ಬಿಗ್ ಮನೆಗೆ ಎಂಟ್ರಿ ಕೊಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಗ್ ಮನೆಗೆ ಗೀತಾ ಎಂಟ್ರಿ ಕೊಡುವುದು ಖಚಿತ ಎನ್ನುತ್ತಿದೆ ಅವರ ಆಪ್ತರ ಬಳಗ. ಆದರೆ ಈ ಬಗ್ಗೆ ಮಾಹಿತಿ ತಿಳಿಯಲು ಫಿಲ್ಮಿ ಬೀಟ್ ಕನ್ನಡ ಗೀತಾ ಅವರನ್ನೇ ಸಂಪರ್ಕಿಸಿದಾಗ, ಈ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.
''ದೊಡ್ಡ ಸೆಲೆಬ್ರಿಟಿ ಆಗ್ತೀನಿ, ಸಿನಿಮಾ ಆಫರ್ ಬರುತ್ತೆ ಅಂತ ಬಿಗ್ಬಾಸ್ಗೆ ಹೋಗಬೇಡಿ''

ಬಿಗ್ ಬಾಸ್ ಮನೆಗೆ ಹೋಗುವ ಬಗ್ಗೆ ಗೀತಾ ಹೇಳಿದ್ದೇನು?
ಗೀತಾ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ, ಬಿಗ್ ಬಾಸ್ ಗೆ ಹೋಗುತ್ತೀರಾ? ಎಂದು ಗೀತಾ ಅವರನ್ನು ಕೇಳಿದ್ರೆ, 'ಸುದ್ದಿ ಬರ್ತಾ ಇರುತೆ, ಆದರೆ ನನಗೆ ಈ ಬಗ್ಗೆ ಗೊತ್ತಿರಲ್ಲ, ನನಗೆ ಗೊತ್ತಿರದ ವಿಚಾರಗಳು ಹೇಗೆ ಹೊರಗೆ ಹೊಗುತ್ತಿರುತ್ತೆ, ಹರಿದಾಡುತ್ತಿರುತ್ತೆ ಎನ್ನುವುದೇ ನನಗೆ ಗೊತ್ತಿಲ್ಲ' ಎಂದಿದ್ದಾರೆ.

ಬಿಗ್ ಬಾಸ್ ನಿಮ್ಮನ್ನು ಸಂಪರ್ಕ ಮಾಡಿದ್ದು ನಿಜಾನಾ?
ಬಿಗ್ ಬಾಸ್ ಗೆ ಹೋಗ್ತಾರೆ ಎನ್ನುವ ಬಗ್ಗೆ ಸುದ್ದಿ ಹೇಗೆ ಹರಿದಾಡುತ್ತಿದೆ ಎಂದು ಗೊತ್ತಿಲ್ಲ ಎಂದಿರುವ ಗೀತಾ, ಬಿಗ್ ಬಾಸ್ ನಿಮ್ಮನ್ನು ಸಂಪರ್ಕ ಮಾಡಿದಿಯಾ? ಎಂದು ಕೇಳಿದ್ರೆ ಈ ಬಗ್ಗೆ ಹಾರಿಕೆಯ ಉತ್ತರ ನೀಡಿ, ನುಣುಚಿಕೊಳ್ಳಲು ಪ್ರಯತ್ನಸಿದ್ದಾರೆ. 'ಈ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಇದು ನನಗೆ ಗೊತ್ತಿರದ ವಿಚಾರ' ಎಂದು ಗೀತಾ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಇರ್ತಾರಾ ನಟಿ ವಿನಯಾ ಪ್ರಸಾದ್; ಮಗಳು ಹೇಳಿದ್ದೇನು?

ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೀನಿ-ಗೀತಾ
ಸದ್ಯ ನಾನು ಧಾರಾವಾಹಿ ಶೂಟಿಂಗ್ ನಲ್ಲಿ ಇದ್ದೀನಿ. ಈಗನು ನಾನು ಶೂಟಿಂಗ್ ಮಾಡುತ್ತಿದ್ದೀನಿ. ಜೊತೆಗೆ ನನ್ನದೊಂದು ಆಲ್ಬಂ ಸಾಂಗ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ನಾನು ಹೇಳಲು ಇಷ್ಟಪಡುತ್ತೀನಿ ಎಂದಿದ್ದಾರೆ. ಹಾಗಾದ್ರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಗೀತಾ ಇರ್ತಾರಾ? ಇಲ್ವಾ? ಎನ್ನುವ ಬಗ್ಗೆ ಇನ್ನು ಸ್ವಲ್ಪ ದಿನಗಳು ಕಾದು ನೋಡಬೇಕಿದೆ.