»   » ಅಂದು ಠುಸ್ ಆಗಿದ್ದ ಬುಲೆಟ್ ಪ್ರಕಾಶ್ ಬಾಂಬ್, ಅಕುಲ್ ಮುಂದೆ ಸಿಡಿಯುತ್ತಾ.?

ಅಂದು ಠುಸ್ ಆಗಿದ್ದ ಬುಲೆಟ್ ಪ್ರಕಾಶ್ ಬಾಂಬ್, ಅಕುಲ್ ಮುಂದೆ ಸಿಡಿಯುತ್ತಾ.?

Posted By: ಫಿಲ್ಮಿಬೀಟ್ ಕನ್ನಡ ಡೆಸ್ಕ್
Subscribe to Filmibeat Kannada

''ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ'' ಎಂದು ಮೂರು ತಿಂಗಳ ಹಿಂದೆ... ಅಂದ್ರೆ ಮೇ ತಿಂಗಳಿನಲ್ಲಿ ಬಾಂಬ್ ಹಾಕಿದ್ದ ಬುಲೆಟ್ ಪ್ರಕಾಶ್ ಕಡೆಗೆ 'ದೊಡ್ಡ ನಟನ ಸಣ್ಣತನ'ವನ್ನ ಬಯಲು ಮಾಡಲೇ ಇಲ್ಲ.

ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!

ಅಂದು ಠುಸ್ ಅಗಿದ್ದ ಬುಲೆಟ್ ಪ್ರಕಾಶ್ ಬಾಂಬ್, ಅಕುಲ್ ಬಾಲಾಜಿ ಮುಂದೆ ಸ್ಫೋಟಗೊಳ್ಳಬಹುದಾ.? ಹಾಗೊಂದು ಅನುಮಾನ ಮೂಡಲು ಕಾರಣ ಈ ಫೋಟೋ....

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬುಲೆಟ್ ಪ್ರಕಾಶ್

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬುಲೆಟ್ ಪ್ರಕಾಶ್ ಅತಿಥಿಯಾಗಿ ಭಾಗವಹಿಸಿದ್ದಾರೆ. ಇಂದು ಬುಲೆಟ್ ಪ್ರಕಾಶ್ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಸಂಚಿಕೆಯ ಚಿತ್ರೀಕರಣ ನಡೆದಿದೆ. ಆ ಸಮಯದಲ್ಲಿ ಕ್ಲಿಕ್ ಆಗಿರುವ ಫೋಟೋ ಇದು.

ರಾತ್ರಿ 'ಬಾಂಬ್' ಸಿಡಿಸಿ ಬೆಳಗ್ಗೆ 'ಉಲ್ಟಾ' ಹೊಡೆದ ಬುಲೆಟ್ ಪ್ರಕಾಶ್

ವಿವಾದಗಳ ಬಗ್ಗೆ ಅಕುಲ್ ಪ್ರಶ್ನೆ

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಆಟ, ಹರಟೆ ಜೊತೆಗೆ ಸೆಲೆಬ್ರಿಟಿಗಳ ಸುತ್ತ ಸುತ್ತಿಕೊಂಡಿರುವ ವಿವಾದಗಳ ಬಗ್ಗೆಯೂ ಅಕುಲ್ ಬಾಲಾಜಿ ಪ್ರಶ್ನೆಗಳನ್ನ ಕೇಳುತ್ತಾರೆ.

ವಿವಾದಗಳ ಬಗ್ಗೆ ನಿಮಗೆ ಗೊತ್ತಲ್ವಾ.?

ಈಗಾಗಲೇ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಇತರೆ ನಟರ ಬಗ್ಗೆ ಕಾಮೆಂಟ್ ಮಾಡಿ ವಿವಾದಕ್ಕೆ ಒಳಗಾದ 'ನಟಿ'ಮಣಿಯರ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ ತಾನೇ.?!

ಬಾಂಬ್ ಸಿಡಿಯಬಹುದೇ.?

ಅಂತಹ ನಟಿಯರಂತೆ ಬುಲೆಟ್ ಪ್ರಕಾಶ್ ಕೂಡ ಅಕುಲ್ ಬಾಲಾಜಿ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಹೋಗಿ ಬಾಂಬ್ ಸಿಡಿಸುತ್ತಾರಾ.? ಚಿತ್ರರಂಗದಲ್ಲಿ ಇರುವ ಗುಂಪುಗಾರಿಕೆ ಬಗ್ಗೆ ಅಕುಲ್ ಬಾಲಾಜಿ ಪ್ರಶ್ನೆ ಕೇಳುತ್ತಾರಾ.? ಉತ್ತರ ನಮಗಂತೂ ಗೊತ್ತಿಲ್ಲ. ಆದ್ರೆ, ಅಂಥದ್ದೊಂದು ಹುಳ ಎಲ್ಲರ ತಲೆಯಲ್ಲಿ ಓಡಾಡುತ್ತಿರುವುದು ಮಾತ್ರ ನಿಜ. ಯಾವುದಕ್ಕೂ, ಬುಲೆಟ್ ಪ್ರಕಾಶ್ ಭಾಗವಹಿಸಿರುವ ಸಂಚಿಕೆ ಪ್ರಸಾರ ಆಗುವವರೆಗೂ ತಾಳ್ಮೆ ಇರಲಿ...

English summary
Kannada Actor Bullet Prakash takes part in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada