»   » 'ಬಿಗ್ ಬಾಸ್' ವಿಜೇತ ಚಂದನ್ ಶೆಟ್ಟಿ ಅವರ ಮುಂದಿನ ಹಾಡು ಯಾವುದು?

'ಬಿಗ್ ಬಾಸ್' ವಿಜೇತ ಚಂದನ್ ಶೆಟ್ಟಿ ಅವರ ಮುಂದಿನ ಹಾಡು ಯಾವುದು?

Posted By:
Subscribe to Filmibeat Kannada
ಚಂದನ್ ಶೆಟ್ಟಿಯವರ ಮುಂದಿನ ಹಾಡು ಯಾವುದು ಗೊತ್ತಾ ? | Filmibeat Kannada

'ಹಾಳಾಗೋದೆ...', 'ಮೂರೇ ಮೂರು ಪೆಗ್ ಗೆ ತಲೆ ಗಿರ ಗಿರ ಗಿರ ಗಿರ ಅಂದಿದೆ...', 'ಪಕ್ಕಾ ಚಾಕಲೇಟ್ ಗರ್ಲ್...' ಹಾಗೂ 'ಟಕಿಲ...' ಅಂತ rap ಹಾಡುಗಳನ್ನು ನೀಡಿ ಸಿಕ್ಕಾಪಟ್ಟೆ ಫೇಮಸ್ ಆಗಿರುವವರು ಕನ್ನಡ rapper ಚಂದನ್ ಶೆಟ್ಟಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್' ಚಿತ್ರಕ್ಕಾಗಿ 'ಧಮ್ ಪವರೇ...' ಹಾಡನ್ನ ಬರೆದಿದ್ದ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಮೇಲೆ ಕರುನಾಡ ಜನರ ಮನೆಮನಗಳಲ್ಲಿ ನೆಲೆಸಿದರು.

'ಬಿಗ್' ಮನೆಯೊಳಗೆ 'ಗೊಂಬೆ ಗೊಂಬೆ...', 'ಟೆಲ್ ಮಿ ಹೂ ಆರ್ ಯು ಟು ಮಿ...', 'ಅನು ಹೇಳು ಏನು ಬೇಕು ನಿಂಗೆ...' ಸೇರಿದಂತೆ ಹಲವು ಹಾಡುಗಳನ್ನು ಸಂಯೋಜಿಸಿದ್ದ ಚಂದನ್ ಶೆಟ್ಟಿ ಸದ್ಯದಲ್ಲೇ ತಮ್ಮ ಹೊಸ ಹಾಡೊಂದನ್ನು ಬಿಡುಗಡೆ ಮಾಡಲಿದ್ದಾರಂತೆ.

Chandan Shetty to release 'Fire' song

'ಬಿಗ್ ಬಾಸ್' ಗೆದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕೊಟ್ಟ ಸರ್ಪ್ರೈಸ್.!

'ಬಿಗ್ ಬಾಸ್' ಮನೆಯೊಳಗೆ ಹಾಡಿದ್ದ ಹಾಡುಗಳನ್ನ ಏನಾದರೂ ಆಲ್ಬಂ ಮಾಡ್ತಿದ್ದಾರಾ ಚಂದನ್ ಶೆಟ್ಟಿ ಅಂತ ನೀವು ಕೇಳ್ಬಹುದು. ಈ ಪ್ಲಾನ್ ಚಂದನ್ ಶೆಟ್ಟಿಗೂ ಇದೆ. ಆದ್ರೆ, ಅದಕ್ಕೂ ಮುನ್ನ 'ಫೈಯರ್' ಎಂಬ ಹಾಡನ್ನ ಚಂದನ್ ರಿಲೀಸ್ ಮಾಡ್ತಾರಂತೆ.

ಮನುಷ್ಯನಿಗೆ 'ಪೈಯರ್' ಅನ್ನೋದು ಇರಬೇಕಂತೆ, ಮನುಷ್ಯನಿಗೆ 'ಫೈಯರ್' ಇದ್ರೆ ಏನು ಬೇಕಾದರೂ ಸಾಧಿಸಬಹುದಂತೆ. ಈ ಕಾನ್ಸೆಪ್ಟ್ ಮೇಲೆ ಚಂದನ್ ಶೆಟ್ಟಿ 'ಫೈಯರ್' ಎಂಬ rap ಸಾಂಗ್ ಮಾಡ್ತಾರಂತೆ.

ಇನ್ನು ಕೆಲವೇ ದಿನಗಳಲ್ಲಿ 'ಫೈಯರ್' ಸಾಂಗ್ ರಿಲೀಸ್ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
Kannada Rapper Chandan Shetty to release 'Fire' song shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada