For Quick Alerts
  ALLOW NOTIFICATIONS  
  For Daily Alerts

  ಈ ಫೋಟೋದಲ್ಲಿರುವ ಕನ್ನಡದ ನಟ ಯಾರು ಗೊತ್ತೆ?

  |
  Weekend with Ramesh Season 4: ಈ ಫೋಟೋದಲ್ಲಿರುವ ಕನ್ನಡದ ನಟ ಯಾರು ಅಂತ ಊಹೆ ಮಾಡಿ

  ನಮ್ಮ ಬಾಲ್ಯದ ಕೆಲವು ಫೋಟೋಗಳನ್ನು ಈಗ ನೋಡಿದರೆ, ನಮಗೆನೇ ಅಚ್ಚರಿ ಆಗುತ್ತದೆ. ಅದೇ ರೀತಿ ಇಲ್ಲೊಂದು ಫೋಟೋ ಇದೆ. ಇದು ಕನ್ನಡದ ಒಬ್ಬ ನಟನ ಫೋಟೋ ಈ ಫೋಟೋ ರಿವೀಲ್ ಆಗಿದ್ದು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ.

  ನಟ ಶರಣ್ ಅವರ ಬಾಲ್ಯದ ಡ್ಯಾನ್ಸ್ ಫೋಟೋ ವೀಕೆಂಡ್ ವಿತ್ ರಮೇಶ್ ಹಂಚಿಕೊಳ್ಳಲಾಗಿತ್ತು. ವಿಶೇಷ ಅಂದರೆ, ಇದು ಶರಣ್ ಅವರ ಮೊದಲ ಡ್ಯಾನ್ಸ್ ಫೋಟೋ. ಇಂದು ಚುಟು ಚುಟು ಹಾಡಿಗೆ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡುವ ಶರಣ್ ಮೊದಲು ವೇದಿಕೆ ಮೇಲೆ ನೃತ್ಯ ಮಾಡಿದ್ದೆ ಆವಾಗ.

  ಶರಣ್ ನಟನೆ ನೋಡಿ 10 ರೂಪಾಯಿ ಕೊಟ್ಟಿದ್ದರಂತೆ ಆ ದಿಗ್ಗಜ ನಟ

  ರೂಪ ಟೀಚರ್ ಎಂಬುವರು ಶರಣ್ ಅವರ ಮೊದಲ ಡ್ಯಾನ್ಸ್ ಗುರು. ಅವರ ಬಳಿಯೇ ಭರತನಾಟ್ಯವನ್ನು ಶರಣ್ ಕಲಿತಿದ್ದರು. ಆಗ ವಿಷ್ಣುವರ್ಧನ್ ನಟನೆಯ 'ಖೈದಿ' ಸಿನಿಮಾದ 'ತಾಳಿಹೂವ ಪೊದೆಯಿಂದ..' ಹಾಡು ಸಖತ್ ಫೇಮಸ್ ಆಗಿತ್ತು. ಅದೇ ಮೊದಲ ಬಾರಿಗೆ ಶರಣ್ ಡ್ಯಾನ್ಸ್ ಮಾಡಿದ್ದರು.

  ಚಿಕ್ಕಬಳ್ಳಾಪುರದಲ್ಲಿ 8ನೇ ಕ್ಲಾಸ್ ನಲ್ಲಿ ಈ ಡ್ಯಾನ್ಸ್ ಈ ಶರಣ್ ಮಾಡಿದ್ದರು. ಅಲ್ಲಿ ಭರತನಾಟ್ಯ ತುಂಬ ಚೆನ್ನಾಗಿ ಮಾಡುವುದನ್ನು ಕಲಿತರು. ಆ ಕಾಲಕ್ಕೆ ಬರೀ ಹುಡುಗಿಯರೇ ಹೆಚ್ಚು ನೃತ್ಯ ಕಲಿಯುತ್ತಿದ್ದರಂತೆ. ಆದರೆ, ಕಲಾವಿದ ಆಗಬೇಕು ಎನ್ನುವ ನಿರ್ಧಾರ ಮಾಡಿದ್ದ ಶರಣ್ ಎಲ್ಲವನ್ನು ಕಲಿತರು.

  ಶರಣ್ ಹೀರೋ ಆಗಲು ಹೊರಟಾಗ ಎದುರಾದ ಕಷ್ಟಗಳು ಒಂದೆರಡಲ್ಲ.!

  ಶರಣ್ ಕನ್ನಡದ ಬೆಸ್ಟ್ ಡ್ಯಾನ್ಸ್ ಗಳಲ್ಲಿ ಒಬ್ಬರಾಗಿದ್ದಾರೆ. 'ಚುಟು ಚುಟು', 'ಅಧ್ಯಕ್ಷ', 'ರಾಜ್ ವಿಷ್ಣು' ಹೀಗೆ ಅವರ ಇತ್ತೀಚಿಗಿನ ಹಾಡುಗಳನ್ನು ನೋಡಿದರೆ ಅವರ ನಟನ ಸಾಮರ್ಥ್ಯ ತಿಳಿಯುತ್ತದೆ.

  English summary
  Weekend with ramesh 4: Kannada actor sharan participated in Weekend with ramesh 4. Sharan's first dance photo revealed in WWR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X