»   » 'ಕಲರ್ಸ್ ಕನ್ನಡ'ದಲ್ಲಿ ವಾರಾಂತ್ಯಕ್ಕೆ ಹಾಸ್ಯದ ರಸದೌತಣ ನೀಡುವ 'ಕಾಮಿಡಿ ಟಾಕೀಸ್'

'ಕಲರ್ಸ್ ಕನ್ನಡ'ದಲ್ಲಿ ವಾರಾಂತ್ಯಕ್ಕೆ ಹಾಸ್ಯದ ರಸದೌತಣ ನೀಡುವ 'ಕಾಮಿಡಿ ಟಾಕೀಸ್'

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮಜಾ ಟಾಕೀಸ್' ಮುಗಿದಿರಬಹುದು. ಆದರೆ ಮಜಾ ಇನ್ನೂ ಮುಗಿದಿಲ್ಲ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ತಿಳಿಹಾಸ್ಯದ ಕಾರ್ಯಕ್ರಮ 'ಕಾಮಿಡಿ ಟಾಕೀಸ್' ನವೆಂಬರ್ 4 ರಿಂದ ಆರಂಭ ಆಗಲಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ 'ಕಾಮಿಡಿ ಟಾಕೀಸ್' ಪ್ರಸಾರವಾಗಲಿದೆ. 'ಕಾಮಿಡಿ ಟಾಕೀಸ್' ಒಂದು ನಗೆಯ ಸ್ಫರ್ಧೆ. ಇದರಲ್ಲಿ ನಾಲ್ಕು ಜನರ ಒಟ್ಟು ಆರು ತಂಡಗಳಿವೆ. ಈ ತಂಡಗಳು 'ಕಾಮಿಡಿ ಟಾಕೀಸ್'ನ ಮೆಗಾ ಬಹುಮಾನಕ್ಕಾಗಿ ಸ್ಫರ್ಧಿಸುತ್ತವೆ. ಈ ತಂಡಗಳ ಪರ್ಫಾಮೆನ್ಸ್ ನ ಅಳೆಯಲು ಇಬ್ಬರು ತೀರ್ಪುಗಾರರು ಇರುತ್ತಾರೆ.

'Comedy Talkies' to telecast from November 4th

''ಕಾಲು ಎಳೆಯುವುದು ಬೇಡ'' ಸೃಜನ್ ಬಗ್ಗೆ ರಚಿತಾ ಹೀಗೆ ಹೇಳಿದ್ದು ಯಾಕೆ?

ಈಗಾಗಲೇ 'ಮಜಾ ಟಾಕೀಸ್' ಮೂಲಕ ಕನ್ನಡ ಟೆಲಿವಿಷನ್ ಪ್ರೇಕ್ಷಕರಿಗೆ ಅನ್‌ಲಿಮಿಟೆಡ್ ಮಜಾ ನೀಡಿರುವಂತಹ 'ಟಾಕಿಂಗ್ ಸ್ಟಾರ್' ಸೃಜನ್ ಲೋಕೇಶ್ ಜೊತೆಗೆ 'ಬುಲ್ ಬುಲ್' ನಾಯಕಿ ರಚಿತಾ ರಾಮ್ ತೀರ್ಪುಗಾರರಾಗಿರುತ್ತಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಸಿದ್ಧಾರ್ಥ, 'ಇಷ್ಟಕಾಮ್ಯ' ಸಿನಿಮಾದ ನಾಯಕ, ಡಿಂಪಲ್ ಕಿಂಗ್ ವಿಜಯ ಸೂರ್ಯ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.

'ಅಗ್ನಿಸಾಕ್ಷಿ' ವಿಜಯ್ ಸೂರ್ಯ ಈಗ 'ಕಾಮಿಡಿ ಟಾಕೀಸ್' ನಿರೂಪಕ.!

ಕಲರ್ಸ್ ಕನ್ನಡದ ಎಂದಿನ ಶೈಲಿಯಲ್ಲಿ ತಿಳಿ ಹಾಸ್ಯಕ್ಕೆ ಇಲ್ಲಿ ಒತ್ತು ನೀಡಲಾಗಿದೆ ಎನ್ನುತ್ತಾರೆ ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್. ''ಹಾಸ್ಯ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾದ ಅಂಶ. ದೈನಂದಿನ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಟಿವಿ ಮುಂದೆ ಕುಳಿತು ನಗುವುದಕ್ಕಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ನೋಡುವ ಕಾರ್ಯಕ್ರಮಗಳನ್ನೇ ಕಲರ್ಸ್ ಕನ್ನಡ ನೀಡುತ್ತಾ ಬಂದಿದೆ. 'ಕಾಮಿಡಿ ಟಾಕೀಸ್' ಕೂಡಾ ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡಿರುತ್ತದೆ'' ಎನ್ನುತ್ತಾರೆ ಅವರು.

ರಾಜ್ಯದ ವಿವಿಧ ಮೂಲೆಗಳಿಂದ ಆಯ್ದ ಕಲಾವಿದರು 'ಕಾಮಿಡಿ ಟಾಕೀಸ್‌'ನಲ್ಲಿ ಹಾಸ್ಯ ಪ್ರಹಸನಗಳನ್ನು ನೀಡಲಿವೆ. ಇವರ ಜೊತೆಗೆ ಸೃಜನ್ ಲೋಕೇಶ್, ರಚಿತಾ ರಾಮ್ ಮತ್ತು ವಿಜಯ್ ಸೂರ್ಯ ಕೂಡಾ ಇರುತ್ತಾರೆ ಅಂದ ಮೇಲೆ ನಗೆಯಂತೂ ಗ್ಯಾರಂಟಿ.

English summary
'Comedy Talkies' to telecast from November 4th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X