»   » ವಿವಾದಾತ್ಮಕ ನಟಿ ಮೈತ್ರಿಯಾ ಗೌಡಗೆ ಮೊದಲ ಸೋಲು!

ವಿವಾದಾತ್ಮಕ ನಟಿ ಮೈತ್ರಿಯಾ ಗೌಡಗೆ ಮೊದಲ ಸೋಲು!

Posted By:
Subscribe to Filmibeat Kannada

ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟ ವಿವಾದಾತ್ಮಕ ನಟಿ ಮೈತ್ರಿಯಾ ಗೌಡ. ''ಡಿ.ವಿ.ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ'' ಅಂತ ಹೇಳಿ ಬಿರುಗಾಳಿ ಎಬ್ಬಿಸಿದ್ದ ಮೈತ್ರಿಯಾ, 'ಡ್ಯಾನ್ಸಿಂಗ್ ಸ್ಟಾರ್-2' ರಿಯಾಲಿಟಿ ಶೋನಲ್ಲೂ ಹಲ್ ಚಲ್ ಸೃಷ್ಟಿಸುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು.

ಹೇಳಿ ಕೇಳಿ, ಮೈತ್ರಿಯಾ ಗೌಡ ನಟಿ. ಎತ್ತರ, ತಳುಕು-ಬಳುಕು, ವೈಯ್ಯಾರ ಎಲ್ಲಾ ಇದೆ. ರಿಯಲ್ ಸ್ಟಾರ್ ಉಪ್ಪಿ ಜೊತೆ 'ಶ್ಯಾಂಗ್ರೀಲಾ' ಅಂತ ಹಾಡಿ ಕುಣಿದಿದ್ದ ಈ ನಟಿಗೆ 'ಡ್ಯಾನ್ಸಿಂಗ್ ಸ್ಟಾರ್ ಕಪ್' ಎತ್ತಿ ಹಿಡಿಯುವುದು ಕಷ್ಟವೇನೂ ಇರಲಿಲ್ಲ. [ರೀಲ್ ನಲ್ಲಿ ಮೈತ್ರಿಯಾ-ಪ್ರೇಮಕುಮಾರಿ 'ರಿಯಲ್' ಕಹಾನಿ?]

Controversial Actress Mythriya Gowda eliminated from Dancing Star-2

ಹೀಗಿದ್ದರೂ, ಮೂರೇ ವಾರಗಳಲ್ಲಿ ನಟಿ ಮೈತ್ರಿಯಾ ಗೌಡ 'ಡ್ಯಾನ್ಸಿಂಗ್ ಸ್ಟಾರ್-2' ರಿಯಾಲಿಟಿ ಶೋನಿಂದ ಔಟ್ ಆಗಿದ್ದಾರೆ. ದೇಶಾದ್ಯಂತ ಸುದ್ದಿ ಮಾಡಿದ್ದರೂ, ನಟಿ ಮೈತ್ರಿಯಾಗೆ ಕನ್ನಡ ಪ್ರೇಕ್ಷಕರು ಕೈಹಿಡಿಯಲಿಲ್ಲ. ತೀರ್ಪುಗಾರರಿಂದ ಅಷ್ಟೇನೂ ಪ್ರಶಂಸೆ ಪಡೆಯದ ಮೈತ್ರಿಯಾ ನಿನ್ನೆ (ಫೆಬ್ರವರಿ 22) ಪ್ರಸಾರವಾದ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿದ್ದಾರೆ. [ಮೈತ್ರಿಯಾ ಗೌಡ ಈಗ ಕಿರುತೆರೆಯ 'ಡಾನ್ಸಿಂಗ್ ಸ್ಟಾರ್']

'ಬಾಲಿವುಡ್ ಹಂಗಾಮ' ರೌಂಡ್ ನಲ್ಲಿ ಕಮಾಲ್ ಮಾಡದ ಮೈತ್ರಿಯಾ ಮತ್ತು ಆಕೆಯ ಡ್ಯಾನ್ಸಿಂಗ್ ಪಾರ್ಟ್ನರ್ ಹೊರಬಿದ್ದಿದ್ದಾರೆ. ಇದಿನ್ನೂ ಮೂರನೇ ಸಂಚಿಕೆ ಆಗಿರುವುದರಿಂದ 'ವೈಲ್ಡ್ ಕಾರ್ಡ್ ಎಂಟ್ರಿ' ರೌಂಡ್ ಇನ್ನೂ ಬಾಕಿ ಇದೆ. ಅಷ್ಟರೊಳಗೆ ಮೈತ್ರಿಯಾ ಪಿಕ್ ಅಪ್ ಆಗಿ ಪರ್ಫೆಕ್ಟ್ ಆಗಿ ಸ್ಟೆಪ್ ಹಾಕಿದ್ರೆ, ಫೈನಲ್ ದಡ ತಲುಪಬಹುದು.

English summary
Controversial Kannada Actress Mythriya Gowda has been eliminated from ETV Kannada's most Popular Dance Reality Show, Dancing Star-2. Mythriya Gowda eliminated from Dancing Star-2, Ravichandran in small screen, Etv Kannada Reality Show Dancing Stars-2, ಡಾನ್ಸಿಂಗ್ ಸ್ಟಾರ್ 2 ಕಾರ್ಯದಿಂದ ಎಲಿಮಿನೇಟ್ ಆದ ಮೈತ್ರಿಯಾ ಗೌಡ, ಕಿರುತೆರೆದಲ್ಲಿ ರವಿಚಂದ್ರನ್, ಈ ಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ 2

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada