For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 25 ರಂದು ಕಿರುತೆರೆಯಲ್ಲಿ ದಬಾಂಗ್-3 ಪ್ರಸಾರ

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟಿಸಿರುವ ದಬಾಂಗ್ 3 ಸಿನಿಮಾ ದಸರಾ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ.

  ಅಕ್ಟೋಬರ್ 25 ರಂದು ಮಧ್ಯಾಹ್ನ 12 ಗಂಟೆಗೆ ಜೀ ಸಿನಿಮಾ ವಾಹಿನಿಯಲ್ಲಿ ದಬಾಂಗ್ 3 ಚಿತ್ರ ಟೆಲಿಕಾಸ್ಟ್ ಆಗ್ತಿದೆ. ಈ ಸುದ್ದಿಯನ್ನು ಸ್ವತಃ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಗೆ ನೋಡಲು ಮನವಿ ಮಾಡಿದ್ದಾರೆ.

  'ದಬಾಂಗ್' 15ನೇ ದಿನದ ಗಳಿಕೆ ನೋಡಿದ್ರೆ ಭಾರಿ ನಿರಾಸೆ ಆಗುತ್ತೆ!

  ಪ್ರಭುದೇವ ನಿರ್ದೇಶನದಲ್ಲಿ ಮೂಡಿಬಂದಿದ್ದ ದಬಾಂಗ್ 3 ಸಿನಿಮಾ 2019ರ ಡಿಸೆಂಬರ್ ತಿಂಗಳಿನಲ್ಲಿ ತೆರೆಕಂಡಿತ್ತು. ಖುದ್ದು ಸಲ್ಮಾನ್ ಖಾನ್ ಮತ್ತು ಸಹೋದರ ಅರ್ಬಾಜ್ ಖಾನ್ ಈ ಚಿತ್ರ ನಿರ್ಮಿಸಿದ್ದರು.

  ಸೂಪರ್ ಕಾಪ್ ಆಗಿ ಸಲ್ಮಾನ್ ಖಾನ್ ಅಬ್ಬರಿಸಿದ್ರೆ ಸಲ್ಲು ಎದುರು ಖಳನಾಯಕನಾಗಿ ಸುದೀಪ್ ಮಿಂಚಿದ್ದರು. ಇವರಿಬ್ಬರ ಜುಗುಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದರು.

  ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆಕಂಡಿತ್ತು. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ದಬಾಂಗ್ 3 ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲವಾದರೂ 250 ಕೋಟಿ ಗಳಿಸಿತ್ತು.

  English summary
  Bollywood super star salman khan and kiccha sudeep Dabangg 3 World Television Premiere on Zee Cinema on Sunday, 25th October at 12 noon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X