Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಕೆಡಿಯಲ್ಲಿ ಪತ್ನಿ ಗೀತಾ ಬಗ್ಗೆ ಅಪರೂಪದ ಸಂಗತಿ ಹೇಳಿ ಭಾವುಕರಾದ ಶಿವಣ್ಣ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ರಿಯಾಲಿಟಿ ಶೋ ಎಲ್ಲರಿಗೂ ಅಚ್ಚು ಮೆಚ್ಚು. ಒಬ್ಬರಿಗಿಂತ ಒಬ್ಬರೂ ಉತ್ತಮವಾಗಿ ನೃತ್ಯ ಪ್ರದರ್ಶನ ನಿಡುತ್ತಾ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಈ ರಿಯಾಲಿಟಿ ಶೋ ಪ್ರತಿ ಶನಿವಾರ, ಭಾನುವಾರ 9 ಗಂಟೆಗೆ ಪ್ರಸಾರವಾಗುತ್ತಿದೆ.
ಮೇ 21 ರಂದು ನಡೆಯಲಿರುವ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಸ್ಪೆಷಲ್ ಗೆಸ್ಟ್ ಆಗಮಿಸಿದ್ದಾರೆ. ಇದರಿಂದ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ಕಾರ್ಯಕ್ರಮಕ್ಕೆ ಮೆರುಗನ್ನು ತಂದು ಕೊಟ್ಟಿದ್ದು ಜನರು ಕಾರ್ಯಕ್ರಮ ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಡಾನ್ಸ್ ಕರ್ನಾಟಕ ಡಾನ್ಸ್ ಅಂದ್ರೆನೇ ತಿಳಿಯುತ್ತದೆ ಎಲ್ಲರನ್ನೂ ಮೈ ನವಿರೇಳಿಸುವಂತಹ ನೃತ್ಯದ ಝಲಕ್‌ನ್ನು ತೋರಿಸುವ ಕಾರ್ಯಕ್ರಮ ಇದು. ಡಿಕೆಡಿ ಸ್ಪರ್ಧಿಗಳ ಡಾನ್ಸ್ ಅಂತೂ ಅದ್ಭುತವಾಗಿ ಮೂಡಿ ಬರುತ್ತಿದೆ. ಇನ್ನೂ ಕಾರ್ಯಕ್ರಮದ ಜಡ್ಜ್ ಆಗಿ ಆಗಮಿಸಿರುವ ಡಾನ್ಸಿಂಗ್ ಕಿಂಗ್ ಶಿವರಾಜ್ ಕುಮಾರ್, ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಮಾಸ್ಟರ್ , ಕನ್ನಡದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ಯ ಜನ್ಯ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ಕೂಡ ಸ್ಪರ್ಧಿಗಳ ಡಾನ್ಸ್‌ಗೆ ಮಾರು ಹೋಗಿದ್ದಾರೆ.

ಡಿಕೆಡಿ ಕಾರ್ಯಕ್ರಮಕ್ಕೆ ಬಂದಿರುವುದಾದರೂ ಯಾರು ಅಂತೀರಾ?
ಇದೀಗ ಡಿಕೆಡಿ ರಿಯಾಲಿಟಿ ಶೋಗೆ ಒಬ್ಬರು ವಿಶೇಷ ಅಥಿತಿ ಆಗಮಿಸಿದ್ದಾರೆ. ಇವರನ್ನು ನೋಡಿದ ನೆರೆದವರು ಸಂತಸದಿಂದ ಚಪ್ಪಾಳೆ ತಟ್ಟಿದ್ದಾರೆ. ಹಾಗಾದ್ರೆ ಡಿಕೆಡಿ ಕಾರ್ಯಕ್ರಮಕ್ಕೆ ಬಂದಿರುವುದಾದರೂ ಯಾರು ಅಂತೀರಾ? ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಅವರ ಹೆಂಡತಿ ಗೀತಾ ಶಿವರಾಜ್ ಕುಮಾರ್ ಆಗಮಿಸಿದ್ದಾರೆ. ಇಂದು ಶಿವರಾಜ್ ಕುಮಾರ್ ಅವರ 36 ನೇ ವಿವಾಹ ವಾರ್ಷಿಕೋತ್ಸವ. ವಾರ್ಷಿಕೋತ್ಸವವನ್ನು ಡಿಕೆಡಿ ವೇದಿಕೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಅನುಶ್ರೀ, ಗೀತಾ ಶಿವರಾಜ್ ಕುಮಾರ್ ಅವರನ್ನು ಸ್ವಾಗತಿಸುವ ವೇಳೆ ಶಿವರಾಜ್ ಮೊಗದಲ್ಲಿ ಅಚ್ಚರಿ ಕಾಣಿಸಿದೆ. ಹಾಗೆಯೇ ಸಂತೋಷವೂ ಎದ್ದು ಕಾಣಿಸುತ್ತಿತ್ತು. ಅನು ಶ್ರೀ ಗೀತಾ ಅವರನ್ನು ಸ್ವಾಗತಿಸುವ ವೇಳೆ ರಾಮನಿಗೆ ಸೀತಾ, ಶಿವರಾಜ್ ಕುಮಾರ್‌ಗೆ ಈ ಗೀತಾ ಎಂದು ಹೇಳಿರುವ ಡೈಲಾಗ್‌ಗೆ ಎಲ್ಲರಿಗೂ ಖುಷಿ ನೀಡಿದೆ.

ಹೆಂಡತಿಯ ಬಗ್ಗೆ ಮೆಚ್ಚುಗೆ ಮಾತನಾಡಿದ ಡಾನ್ಸಿಂಗ್ ಕಿಂಗ್
36ನೇ ವರ್ಷದ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ಡಿಕೆಡಿ ವೇದಿಕೆಯಲ್ಲಿ ಪತ್ನಿಯ ಬಗ್ಗೆ ಮಾತನಾಡಿರುವ ಶಿವಣ್ಣ, ''ವೈಫ್ ಎಲ್ಲಾ ಜಾಗವನ್ನು ತುಂಬುತ್ತಾರೆ, ಸ್ನೇಹಿತೆಯಾಗುತ್ತಾರೆ, ಸಂಗಾತಿಯಾಗುತ್ತಾರೆ, ಒಮ್ಮೊಮ್ಮೆ ತಾಯಿ ಆಗುತ್ತಾರೆ, ಸಾಕಷ್ಟು ಬಾರಿ ನನಗೊಸ್ಕರ ತಿರುಪತಿಗೆ ಮುಡಿಯನ್ನು ಕೊಟ್ಟಿದ್ದರು. ಯಾರು ಅಷ್ಟು ಸುಲಭವಾಗಿ ಇದನ್ನೆಲ್ಲ ಮಾಡಲ್ಲ. ಜೀವನದಲ್ಲಿ ಎಲ್ಲಾ ಇರುತ್ತೆ, ಅದನ್ನೆಲ್ಲ ನುಂಗಿಕೊಂಡು ಜೀವನದಲ್ಲಿ ಸಾಗುತ್ತಾರಲ್ಲ ಅದು ನನಗೆ ಬಹಳ ಖುಷಿ ನೀಡಿದೆ'' ಎಂದಿದ್ದಾರೆ. ಹೆಂಡತಿಗೋಸ್ಕರ ಒಂದು ಹಾಡನ್ನು ಡೆಡಿಕೇಟ್ ಮಾಡಿದ್ದಾರೆ, ''ಒಮ್ಮೆ ನನ್ನ ನೋಡೆ ಗೀತಾ, ನಿನ್ನ ನಗುವೆ ನನಗೆ ಸಂಗೀತ'' ಎಂದು ಹಾಡಿನ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ ಶಿವಣ್ಣ, ಆ ಹಾಡು ಶಿವರಾಜ್ ಕುಮಾರ್ ಅವರ ಪೇವ್‌ರೆಟ್ ಹಾಡು ಕೂಡ.

ಡಿಕೆಡಿ ಕಾರ್ಯಕ್ರಮದಲ್ಲಿ ಹಾರ ಬದಲಾಯಿಸಿಕೊಂಡ ದಂಪತಿ
ಈ ವೇಳೆ ಗೀತಾ ಶಿವರಾಜ್ ಕುಮಾರ್ ಮಾತನಾಡಿ ಮದುವೇ ಆಗಿ 36 ವರ್ಷವಾಗಿದೆ. ಮದುವೆಯಾಗಿ ಬಂದಮೇಲೆ ಅಪ್ಪಾಜಿ ಅಮ್ಮ ಯಾವತ್ತೂ ಈ ಥರ ಇರು ಹೀಗೆ ಮಾಡು ಎಂದು ಇದುವರೆಗು ಹೇಳಿಲ್ಲ, ನಾನೆ ಅವರನ್ನು ನೋಡಿ ಹಾಗೆ ಮೈಗೂಡಿಕೊಂಡು ಬಂದಿದೆ ಅಷ್ಟೆ ಎಂದಿದ್ದಾರೆ. ಈ ವೇಳೆ ಡಿಕೆಡಿ ವೇದಿಕೆಯಲ್ಲಿ ಸಣ್ಣ ಮೂಮೆಂಟ್ ಕ್ರಿಯೆಟ್ ಮಾಡೋದಿಕ್ಕಾಗಿ ಎಂದು ಹೇಳಿ ಅನುಶ್ರೀ ಎರಡು ಹಾರವನ್ನು ಶಿವಣ್ಣ, ಗೀತಾಕ್ಕ ಬಳಿಕೊಟ್ಟಿದ್ದಾರೆ. ಮದುವೆಯ ಹಾರವನ್ನು ಇಬ್ಬರು ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ಅನುಶ್ರೀ ಕೆಲವು ಪ್ರಶ್ನೆಯನ್ನು ಶಿವರಾಜ್ ಕುಮಾರ್ ದಂಪತಿಯ ಮುಂದೆ ಇಟ್ಟಿದ್ದಾರೆ.

ನಾಚಿ ನೀರಾದ ಗೀತಾ ಶಿವರಾಜ್ ಕುಮಾರ್
ನಿಮ್ಮಿಬ್ಬರಲ್ಲಿ ತುಂಬಾ ರೋಮ್ಯಾಂಟಿಕ್ ಯಾರು ಎಂದು ಕೇಳಿದಾಗ ಶಿವಣ್ಣ ನಾನು ಎಂದಾಗ ಗೀತಾ ಶಿವರಾಜ್ ಕುಮಾರ್ ಮೊಗದಲ್ಲಿ ಮಂದಹಾಸ ಮೂಡಿದೆ. ಇಬ್ಬರಲ್ಲಿ ತುಂಬಾ ಎಮೋಷನಲ್ ಯಾರು ಎಂದಾಗ ಗೀತಾರವರು ಶಿವರಾಜ್ ಕುಮಾರ್ ಅವರ ಕಡೆ ಬೊಟ್ಟು ಮಾಡಿ ತೊರಿಸುತ್ತಾರೆ. ಇಬ್ಬರಲ್ಲಿ ಫಸ್ಟ್ ಸಾರಿ ಕೇಳೋದು ಯಾರು ಎಂದಾಗ ಶಿವಣ್ಣ ನಾನೆ ಎನ್ನುತ್ತಾರೆ. ಈ ವೇಳೆ ಗೀತಾ ಶಿವರಾಜ್ ಕುಮಾರ್ ಅವರು ಇಲ್ಲ ಇಲ್ಲ ನಾನು ಕೇಳ್ತೀನಿ ಎಂದಾಗ ಶಿವಣ್ಣ ಇದುವರೆಗೂ ಗೊತ್ತಿಲ್ಲ, ಆಕೆ ಮಿಸ್ಟೆಕ್ ಮಾಡಿರುವುದನ್ನು ನಾನು ನೋಡಿಲ್ಲ ಎಂದು ಹೆಂಡತಿಯನ್ನು ಹೊಗಳಿದ್ದಾರೆ. ಈ ವೇಳೆ ಕೇಕ್ ಕತ್ತರಿಸಿ ಶಿವಣ್ಣ ಮತ್ತು ಗೀತಾಕ್ಕ ಇಬ್ಬರು ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿದ ಒಂದು ಸಣ್ಣ ಝಲಕ್ ಜೀ ಕನ್ನಡದ ಡಿಕೆಡಿ ಪ್ರೋಮೋದಲ್ಲಿದೆ. ಇನ್ನೂ ಇದರ ಪೂರ್ತಿ ಎಪಿಸೋಡ್‌ಗಾಗಿ ಇಂದು ಪ್ರಸಾರವಾಗಲಿದೆ.