Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ತ್ರಿಪುರ ಸುಂದರಿ'ಯಾಗಿ ರಂಜಿಸಲು ಬರುತ್ತಿದ್ದಾರೆ ಬಿಗ್ ಬಾಸ್ ದಿವ್ಯಾ ಸುರೇಶ್!
ವಿನೂತನ ರೀತಿಯ ರಿಯಾಲಿಟಿ ಶೋಗಳ ಜೊತೆಗೆ ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಕಲರ್ಸ್ ಕನ್ನಡವೂ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಜನವರಿ 2 ರಿಂದ ಹೊಚ್ಚ ಹೊಸ ಧಾರಾವಾಹಿ 'ತ್ರಿಪುರ ಸುಂದರಿ' ಶುರುವಾಗಲಿದೆ.
'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ನಾಯಕಿ ಆಮ್ರಪಾಲಿ ಅವತಾರವೆತ್ತಿ ಕಿರುತೆರೆಗೆ ದಿವ್ಯಾ ಸುರೇಶ್ ಮರಳುತ್ತಿದ್ದಾರೆ. ಗಂಧರ್ವ ಕನ್ಯೆಯಾಗಿ ಕಿರುತೆರೆ ವೀಕ್ಷಕರ ಕಣ್ಮನ ಸೆಳೆಯಲು ಸಜ್ಜಾಗಿ ದಿವ್ಯಾ ಸುರೇಶ್ ರೆಡಿಯಾಗಿ ನಿಂತಿದ್ದಾರೆ.
ಆರ್ಯನ
ಬಗ್ಗೆ
ಅನುಗೆ
ಸಿಕ್ತು
ಮಹತ್ವದ
ಸುಳಿವು:
ಮೀರಾ
ಹೇಳಿದ್ದು
ಸತ್ಯವಾಗುತ್ತಾ..?
ಮನ ಸೆಳೆದ 'ತ್ರಿಪುರ ಸುಂದರಿ' ಪ್ರೋಮೋ
'ತ್ರಿಪುರ ಸುಂದರಿ' ಧಾರಾವಾಹಿಯ ಪ್ರೋಮೋ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ದಿವ್ಯಾ ಸುರೇಶ್ ಗಂಧರ್ವ ಕನ್ಯೆಯ ಅವತಾರವೆತ್ತಿ ನೆಟ್ಟಿಗರ ಮನಸೆಳೆದಿದ್ದಾರೆ. ಜೊತೆಗೆ ದಿವ್ಯಾ ಸುರೇಶ್ ಕಿರುತೆರೆಗೆ ಕಮ್ ಬ್ಯಾಕ್ ಮಾಡಿರೋದು ಕೂಡಾ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಖುಷಿ ತಂದಿದೆ.

ಆಮ್ರಪಾಲಿಯಾಗಲು ಕತ್ತಿವರಸೆ ಕಲಿತ ದಿವ್ಯಾ ಸುರೇಶ್
ಆಮ್ರಪಾಲಿ ಪಾತ್ರಕ್ಕಾಗಿ ದಿವ್ಯಾ ಸುರೇಶ್ ಅವರು ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು ಕೆಲವೊಂದು ಸ್ಟಂಟ್ ಗಳ ಜೊತೆಗೆ ಕತ್ತಿ ವರಸೆಯನ್ನು ಕೂಡಾ ಕಲಿತಿದ್ದರು. ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ದಿವ್ಯಾ ಸುರೇಶ್ ತಮ್ಮ ಮಾತು, ನಡೆ, ನುಡಿಯ ಮೂಲಕ ಅಲ್ಲೂ ಸೈ ಎನಿಸಿಕೊಂಡಿದ್ದರು. ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಂಡಿರದ ಈಕೆ ಇದೀಗ ಆಮ್ರಪಾಲಿಯಾಗಿ ರಂಜಿಸಲು ಬರುತ್ತಿದ್ದಾರೆ.

ಡಾಕ್ಟರ್ ಗೀತಾ ಲುಕ್ ಕೊಟ್ಟಿದ್ದ ದಿವ್ಯಾ ಸುರೇಶ್
ಅಂದ ಹಾಗೇ, ಗೀತಾ ಮೂಲಕ ದಿವ್ಯಾ ಸುರೇಶ್ ಕಿರುತೆರೆ ಪಯಣ ಶುರುವಾಗಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ ಹೆಂಡ್ತಿ ಎಂಬಿಬಿಎಸ್' ಧಾರಾವಾಹಿಯಲ್ಲಿ ಡಾಕ್ಟರ್ ಗೀತಾ ಪಾತ್ರಕ್ಕೆ ಜೀವ ತುಂಬಿದ್ದರು. ಇಷ್ಟೇ ಅಲ್ಲದೆ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ಮಲ್ಲಿಕಾ ಪಾತ್ರದ ಮೂಲಕ ಮೋಡಿ ಮಾಡಿದ್ದರು.

ದಿವ್ಯಾ ಮಿಸ್ ಇಂಡಿಯಾ ಸೌತ್ – 2017
ದಿವ್ಯಾ ಸುರೇಶ್ ಅವರಿಗೆ ಸಣ್ಣ ವಯಸ್ಸಿನಿಂದಲೂ ಅಭಿನಯದತ್ತ ವಿಶೇಷ ಸೆಳೆತವಿತ್ತು. ಶಾಲಾ, ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಈಕೆ ಮುಂದೆ ಮುಖ ಮಾಡಿದ್ದು ಮಾಡೆಲಿಂಗ್ ನತ್ತ. ಮಿಸ್ ಇಂಡಿಯಾ ಸೌತ್ - 2017 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಈಕೆ ನಂತರ ಎರಡು ವರ್ಷಗಳ ಕಾಲ ಫ್ಯಾಷನ್ ಜಗತ್ತಿನಲ್ಲಿ ಮಿಂಚಿದರು.

ಹಿರಿತೆರೆಯಲ್ಲೂ ಮಿಂಚಿದ ದಿವ್ಯಾ ಸುರೇಶ್
ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿದ ಈಕೆ ನಂತರ ಹಾರಿದ್ದು ಹಿರಿತೆರೆಯತ್ತ. #9 ಹಿಲ್ಟನ್ ಹೌಸ್ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ದಿವ್ಯಾ ಮುಂದೆ ತೆಲುಗಿನ ಡಿಗ್ರಿ ಕಾಲೇಜು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಮುಂದೆ 'ಥರ್ಡ್ ಕ್ಲಾಸ್', 'ರೌಡಿ ಬೇಬಿ' ಹಾಗೂ 'ಹಿರಣ್ಯ' ಸಿನಿಮಾಗಳಲ್ಲಿ ದಿವ್ಯಾ ಸುರೇಶ್ ಅಭಿನಯಿಸಿದ್ದಾರೆ.