»   » ಟಿಎನ್ ಸೀತಾರಾಂ ಜೊತೆ ಕೆಲಸ ಮಾಡುವ ಕೌಶಲ್ಯ ನಿಮ್ಮಲ್ಲಿದೆಯೆ?

ಟಿಎನ್ ಸೀತಾರಾಂ ಜೊತೆ ಕೆಲಸ ಮಾಡುವ ಕೌಶಲ್ಯ ನಿಮ್ಮಲ್ಲಿದೆಯೆ?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಟಿವಿ ಧಾರಾವಾಹಿ ವೀಕ್ಷಕರ ಪಾಲಿನ ಸ್ಟಾರ್ ನಿರ್ದೇಶಕ ಟಿಎನ್ ಸೀತಾರಾಂ ಅವರ ಧಾರಾವಾಹಿ ಬರುತ್ತದೆಂದರೆ ನೋಡುಗರ ಕಣ್ಣು ಕಿವಿಗಳು ಅಗಲವಾಗುತ್ತವೆ, ಮನಸ್ಸು ಚಟಪಡಿಸುತ್ತದೆ. ಮಾಯಾಮೃಗ, ಮುಕ್ತ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳ ಮೂಲಕ ಆ ಪರಿ ಹುಚ್ಚು ಹಿಡಿಸಿದ್ದಾರೆ ಸೀತಾರಾಂ ತಲಗವಾರ್, ಗೌರಿಬಿದನೂರು.

  ಅವರ ಸೀರಿಯಲ್ಲು ನೋಡುವುದು ನೋಡುಗರ ಪಾಲಿನ ರಸಗವಳವಾದರೆ, ಅವರೊಂದಿಗೆ ಕೆಲಸ ಮಾಡುವುದು ಹಲವಾರು ಕಲಾವಿದರ ಪಾಲಿಗೆ ಪ್ರತಿಷ್ಠೆಯ ಸಂಗತಿ. ಕಲಾವಿದರಿಂದ, ತಂತ್ರಜ್ಞರಿಂದ ಅಷ್ಟು ಶಿಸ್ತುಬದ್ಧವಾಗಿ ಕೆಲಸ ತೆಗೆಸುವುದನ್ನು ಸೀತಾರಾಂ ಬಲ್ಲರು.

  ಈಗ ಅವರೊಂದಿಗೆ ಧಾರಾವಾಹಿಯಲ್ಲಿ ಕನ್ನಡವನ್ನು ಅವರಿಗಿಷ್ಟವಾಗುವಂತೆ ಬರೆಯಬಲ್ಲ ನಿರ್ದೇಶಕರಿಗೆ ಅದ್ಭುತ ಅವಕಾಶವನ್ನು ಸೀತಾರಾಂ ಅವರು ದೊರಕಿಸಿಕೊಟ್ಟಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿದ್ದಾರೆ. ನಾಮುಂದು ತಾಮುಂದು ಎಂದು ಮುನ್ನುಗ್ಗುವ ಮುನ್ನ ಅವರು ಕೆಲವೊಂದು ಷರತ್ತುಗಳನ್ನು ಒಡ್ಡಿದ್ದಾರೆ.

  Do you like to work with TN Seetharam in Kannada serials?

  ಆ ಷರತ್ತುಗಳು ನಿಮಗೆ ಒಪ್ಪಿಗೆಯಾದರೆ, ಸೀತಾರಾಂ ಅವರು ಬಯಸುವ ಅರ್ಹತೆಗಳು ನಿಮ್ಮಲ್ಲಿ ಇದ್ದಲ್ಲಿ, ಕನ್ನಡದ ಬಗ್ಗೆ ಅಪಾರವಾದ ಪ್ರೀತಿ ಇದ್ದರೆ, ಕವನಗಳನ್ನು ಕರತಲಾಮಲಕ ಮಾಡಿಕೊಂಡಿದ್ದರೆ, ಕೋರ್ಟು ಕಚೇರಿಗಳ ಬಗ್ಗೆ ಅಲ್ಪಸ್ವಲ್ಪ ಜ್ಞಾನವಿದ್ದರೆ ಒಂದು ಕೈ ನೋಡಿಯೇಬಿಡಿ. ಆಲ್ ದಿ ಬೆಸ್ಟ್. ಕೆಳಗಿದೆ ನೋಡಿ ಸೀತಾರಾಂ ಅವರ ಸ್ಟೇಟಸ್ಸು. [ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್]

  ***
  ನನ್ನ ಜತೆ ಧಾರಾವಾಹಿಗಳಲ್ಲಿ ನಿರ್ದೇಶನ ಮತ್ತು ಬರವಣಿಗೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಫೇಸ್ಬುಕ್ ನ ನನ್ನ ಇನ್ಬಾಕ್ಸ್ ಮೂಲಕ ನನ್ನನ್ನು ದಯವಿಟ್ಟು ಸ೦ಪರ್ಕಿಸಿ... ಆಸಕ್ತಿ ಇದ್ದರೆ ಮಾತ್ರ ಸಾಕಾಗಲಾರದು...

  1) ಸಾಹಿತ್ಯದಲ್ಲಿ ಆಸಕ್ತಿ ಮತ್ತು ಕನ್ನಡದ ಬಗ್ಗೆ ಪ್ರೀತಿ ಇರಬೇಕು. ಕನ್ನಡದಲ್ಲಿ ಮಾತನಾಡಲು ಮತ್ತು ಬರೆಯಲು ಬರಬೇಕು.
  2) ಕಾನೂನಿನ ಸಾಮಾನ್ಯ ಜ್ಞಾನ ಇರಬೇಕು. ಕಾನೂನು ಪದವಿಧರರಾದರೆ ಅತ್ಯುತ್ತಮ.
  3) ಇ೦ಟರ್ನೆಟ್ ಮೂಲಕ ಮಾಹಿತಿ ಕಲೆ ಹಾಕುವ ಜ್ಞಾನ ಅತ್ಯವಶ್ಯ.

  ಮತ್ತಷ್ಟು ಸ೦ಗತಿಗಳು (ಕಂಡಿಷನ್ನುಗಳು)

  1) ನಮ್ಮ ಕಥೆಗಳನ್ನು ಬೇರೆಯವರ ಬಳಿ ಹೋಗಿ ಹೇಳುವ ಅಭ್ಯಾಸ ಇರದಿದ್ದರೆ ಉತ್ತಮ.
  2) ಪಾತ್ರಗಳನ್ನು ಮಾಡುವ ಗುಪ್ತ ಆಸೆಯಿಟ್ಟುಕೊ೦ಡು, ಬರಹಗಾರರ ವೇಷದಲ್ಲಿ ಬರುವವರಿಗೆ ಇಲ್ಲಿ ಪ್ರೋತ್ಸಾಹವಿಲ್ಲ.
  3) ನಿರುದ್ಯೋಗಿಗಳಿಗೆ ಆದ್ಯತೆ... (ಮನೆಯಿ೦ದ ಹೇಳದೆ ಓಡಿ ಬ೦ದವರು ತ೦ದೆ, ತಾಯಿಯರ ಅನುಮತಿ ಪಡೆದು ಬ೦ದರೆ ಉತ್ತಮ)
  4) ನನ್ನ ವಿರುದ್ಧ ಗೊಣಗುವುದಾದರೆ ಮನಸ್ಸಿನಲ್ಲಿ ಗೊಣಗಿಕೊಳ್ಳುವುದನ್ನು ಕಲಿಯಬೇಕು.
  5) ಸ೦ಬಳ ನಿಶ್ಚಿತ... ತಾರೀಕು ಅನಿಶ್ಚಿತ .......ಇತ್ಯಾದಿ. [ಅಮ್ಮನ ದಿನಕ್ಕಾಗಿ ಟಿಎನ್ ಸೀತಾರಾಂ ನೆನಪುಗಳು]

  English summary
  Do you like to work with actor, director TN Seetharam in his TV serials? Be ready to take pen and paper. The opportunity is not for acting, but for direction and writing scripts. Would you like to take the challenge? Approach TN Seetharam on his Facebook page.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more