For Quick Alerts
  ALLOW NOTIFICATIONS  
  For Daily Alerts

  ನಟ ಅಮೀರ್ ಖಾನ್ ವಿರುದ್ಧ ತಿರುಗಿಬಿದ್ದ ವೈದ್ಯರು

  By Rajendra
  |

  ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ವೈದ್ಯರು ತಿರುಗಿಬಿದ್ದಿದ್ದಾರೆ. ಅವರ ಜನಪ್ರಿಯ ಟಿವಿ ಟಾಕ್ ಶೋ 'ಸತ್ಯಮೇವ ಜಯತೆ' ಕಾರ್ಯಕ್ರಮ ವೈದ್ಯರ ಆಕ್ರೋಶಕ್ಕೆ ಗುರಿಯಾಗಿದೆ. ತಮ್ಮನ್ನು ಕ್ಷಮೆಯಾಚಿಸುವಂತೆ ವೈದ್ಯರು ಅಮೀರ್‌ ಖಾನ್‌ರನ್ನು ಒತ್ತಾಯಿಸಿದ್ದಾರೆ.

  ತಮ್ಮ ಕಾರ್ಯಕ್ರದಲ್ಲಿ ವೈದ್ಯರನ್ನು ಅಮೀರ್ ಕೆಟ್ಟದಾಗಿ ಬಿಂಬಿಸಿದ್ದಾರೆ. 'ಸತ್ಯಮೇವ ಜಯತೆ' ನಾಲ್ಕನೆ ಕಂತು ವೈದ್ಯರ ಅನುಚಿತ ವರ್ತನೆ ಬಗ್ಗೆ ಬೆಳಕು ಚೆಲ್ಲಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವೈದ್ಯರು ಅಮೀರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ವೈದ್ಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಅನೈತಿಕತೆ, ನಿರ್ಲಕ್ಷ್ಯ ಹಾಗೂ ದೌರ್ಜನ್ಯದ ಬಗ್ಗೆ 'ಸತ್ಯಮೇವ ಜಯತೆ' ನಾಲ್ಕನೆ ಕಂತಿನಲ್ಲಿ ಪ್ರಸಾರ ಮಾಡಲಾಗಿತ್ತು. ಅಮೀರ್ ಖಾನ್ ಈ ರೀತಿ ವೈದ್ಯರನ್ನು ತೋರಿಸಿದ್ದು ಸರಿಯಲ್ಲ ಎಂದು 21 ವೈದ್ಯಕೀಯ ಕಾಲೇಜುಗಳ ಒಕ್ಕೂಟ 'ಮೆಡ್ ಸ್ಕೇಪ್ ಇಂಡಿಯಾ' ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

  "ಅಮೀರ್ ಖಾನ್ ನನ್ನ ಮೆಚ್ಚಿನ ನಟ. ಅವರು ಚಿತ್ರನಿರ್ಮಾಣಕ್ಕಷ್ಟೇ ಸೀಮಿತವಾದರೆ ಚೆನ್ನಾಗಿರುತ್ತದೆ. ವೈದ್ಯರ ಮೇಲೆ ಹಲ್ಲೆ ನಡೆದಂತಹ ಸಂದರ್ಭಗಳಲ್ಲಿ ಅಮೀರ್ ಖಾನ್ ಎಲ್ಲಿ ಹೋಗಿದ್ದರು" " ಎಂದು ಮೆಡ್‌ಸ್ಕೇಪ್ ಅಧ್ಯಕ್ಷೆ ಸುನಿತಾ ದುಬೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ವೈದ್ಯರು ತೀವ್ರ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಅವರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಅವರ ಕರ್ತವ್ಯ ಲೋಪ ಏನೂ ಇಲ್ಲದಿದ್ದರೂ ಅವರ ಮೇಲೆ ಹಲ್ಲೆಗಳಾಗುತ್ತಿವೆ. ಎಷ್ಟೋ ಸಂದರ್ಭಗಳಲ್ಲಿ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅಮೀರ್ ಖಾನ್‌ಗೆ ಇವೆಲ್ಲಾ ಕಣ್ಣಿಗೆ ಬೀಳದಿರುವುದು ಶೋಚನೀಯ ಎಂದಿದ್ದಾರೆ ವೈದ್ಯರು. (ಏಜೆನ್ಸೀಸ್)

  English summary
  Medscape India (A body of 21 medical institutions) asked Bollywood star Aamir Khan to apologize for accusing doctors of malpractices in his TV talk show "Satyamev Jayate". In this episode, Aamir Khan highlights the malpractices in the medical industry and a few shocking reports.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X